More

    ಜಂಬನಮಲ್ಕಿ ಗ್ರಾಮದ 30 ಜನರಿಗೆ ಜ್ವರ: ಚಿಕೂನ್‌ಗುನ್ಯಾ ಶಂಕೆ

    ಮೊಳಕಾಲ್ಮೂರು: ತಾಲೂಕಿನ ಜಂಬನಮಲ್ಕಿ ಗ್ರಾಮದಲ್ಲಿ ಏಕ ಕಾಲಕ್ಕೆ 30ಕ್ಕೂ ಅಧಿಕ ಜನರಿಗೆ ಜ್ವರ ಕಾಣಿಸಿಕೊಂಡಿದ್ದು, ಚಿಕೂನ್‌ಗುನ್ಯಾ ಲಕ್ಷಣವೆನ್ನಲಾಗಿದೆ.

    ಗ್ರಾಮದ ಹಲವರಿಗೆ ಜ್ವರ ಮತ್ತು ಮೈ-ಕೈ ಸುಸ್ತು, ಆಯಾಸ ಕಾಣಿಸಿಕೊಂಡಿದ್ದು ಎರಡು ದಿನಗಳಿಂದ ಆರೋಗ್ಯ ಇಲಾಖೆ ತಂಡ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ, 30ಕ್ಕೂ ಅಧಿಕ ಜನರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.

    ಈ ಪೈಕಿ ತೀವ್ರ ಜ್ವರ ಮತ್ತು ಸುಸ್ತು ಕಾಣಿಸಿಕೊಂಡ ಮೂವರನ್ನು ರಾಂಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಗ್ರಾಮದ ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಲಾರ್ವಾ ಸಮೀಕ್ಷೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಪಂ ಆಡಳಿತ, ಗ್ರಾಮದ ಕುಡಿವ ನೀರಿನ ಟ್ಯಾಂಕರ್, ರಸ್ತೆ, ಚರಂಡಿ ಸ್ವಚ್ಛತೆ ಮಾಡಿ ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದಾರೆ.

    ಮನೆಯ ನೀರಿನ ತೊಟ್ಟಿಗಳು ಮತ್ತು ಕುಡಿವ ನೀರಿನ ಕ್ಯಾನ್ ಅಥವಾ ಡ್ರಮ್‌ಗಳನ್ನು ದಿನಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಆದಷ್ಟು ಕಾದಾರಿಸಿದ ನೀರು ಮತ್ತು ಮಿತ ಆಹಾರ ಸೇವಿಸಬೇಕು. ಯಾರಲ್ಲೂ ಗಂಭೀರ ರೋಗ ಲಕ್ಷಣಗಳಿಲ್ಲ. ಗ್ರಾಮಸ್ಥರು ಭಯ ಪಡುವ ಅಗತ್ಯವಿಲ್ಲ ಎಂದು ಡಾ.ರಮೇಶ್ ಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts