More

    ವಿಜೃಂಭಣೆಯ ಬಿಸಿಲು ಮಾರಮ್ಮನ ಹಬ್ಬ

    ಹನೂರು: ತಾಲೂಕಿನ ಉದ್ದನೂರು ಗ್ರಾಮದಲ್ಲಿ 23 ವರ್ಷಗಳ ಬಳಿಕ ನಡೆಯುತ್ತಿರುವ ಬಿಸಿಲು ಮಾರಮ್ಮನ ಹಬ್ಬದಲ್ಲಿ ಮಂಗಳವಾರ ರಾತ್ರಿ ಕೊಂಡೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.


    ಗ್ರಾಮದ ಸರ್ವ ಜನಾಂಗದವರು ಸಾಮರಸ್ಯದಿಂದ ಆಚರಿಸುವ ಬಿಸಿಲು ಮಾರಮ್ಮನ ಹಬ್ಬವು 23 ವರ್ಷಗಳಿಂದ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಇದೀಗ ಸರ್ವರ ಸಮ್ಮತಿಯೊಂದಿಗೆ ಆಚರಿಸಲಾಗುತ್ತಿದ್ದು, ಸೋಮವಾರ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗ್ರಾಮದೇವತೆ ಬಿಸಿಲು ಮಾರಮ್ಮ, ಜಡೇಸ್ವಾಮಿ ಹಾಗೂ ವೀರಭದ್ರಸ್ವಾಮಿ ದೇಗುಲವನ್ನು ತಳಿರು, ತೋರಣ, ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತಲ್ಲದೇ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಗ್ರಾಮದ ಪ್ರತಿ ಬಡಾವಣೆಯು ವಿದ್ಯುತ್ ದೀಪಾಲಂಕರದಿಂದ ರಾರಾಜಿಸುತ್ತಿತ್ತು.


    ಮಂಗಳವಾರ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಂದ ದೇಗುಲಕ್ಕೆ ತಂಪು ಜ್ಯೋತಿಯನ್ನು ಅರ್ಪಿಸಲಾಯಿತು. ರಾತ್ರಿ 8.30ರಲ್ಲಿ ಉಪವಾಸವಿದ್ದ ಅರ್ಚಕರು ಕೊಂಡವನ್ನು ಹಾಯ್ದರು. ಈ ವೇಳೆ ಹನೂರು ಸೇರಿದಂತೆ ಲೊಕ್ಕನಹಳ್ಳಿ, ಮಂಗಲ, ಕಣ್ಣೂರು, ಬೆಳತ್ತೂರು, ಚಿಕ್ಕಮಾಲಾಪುರ, ಬಂಡಳ್ಳಿ, ಮಣಗಳ್ಳಿ ಹಾಗೂ ಇನ್ನಿತರ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಬುಧವಾರ ಬಾಡೂಟದ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳಿಂದ ಜನ ಸಾಗರವೇ ಗ್ರಾಮಕ್ಕೆ ಹರಿದು ಬಂತು. ಗುರುವಾರ ಬೆಳಗ್ಗೆ ದೇಗುಲದ ಮುಂಭಾಗ ಅಗ್ನಿಕುಂಡ ಎತ್ತುವುದರ ಮೂಲಕ ಹಬ್ಬವು ಮುಕ್ತಾಯಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts