More

    ಹಬ್ಬಗಳಿಗೆ ಬಿತ್ತು ಕರೊನಾ ಚಾಟಿ ಏಟು; ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿಷೇಧ

    ಬೆಂಗಳೂರು : ಕರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಮತ್ತಷ್ಟು ಟಫ್ ರೂಲ್ಸ್ಅನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಹೋಳಿ, ಯುಗಾದಿ, ಶಬ್ ಎ ಬಾರಾತ್, ಗುಡ್ ಫ್ರೈಡೇ ಮುಂತಾದ ಹಬ್ಬಹರಿದಿನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವುದರ ಮೇಲೆ ಸರ್ಕಾರ ನಿಷೇಧ ವಿಧಿಸಿದೆ.

    ಮುಂಬರಲಿರುವ ಈ ಹಬ್ಬಗಳ ಪ್ರಯುಕ್ತ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ಮೈದಾನ, ಮಾರುಕಟ್ಟೆ, ಪಾರ್ಕ್ ಅಥವಾ ಪ್ರಾರ್ಥನಾ ಮಂದಿರಗಳಲ್ಲಿ ಜನರು ಸೇರದ ಹಾಗೆ ಕ್ರಮ ತೆಗೆದುಕೊಳ್ಳಬೇಕೆಂದು ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಾದ ಪಿ.ರವಿಕುಮಾರ್ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತು ಬಿಬಿಎಂಪಿ ಕಮಿಷನರ್​ಗೆ ಇಂದು ಆದೇಶ ಜಾರಿಗೊಳಿಸಿದ್ದಾರೆ.

    ಇದನ್ನೂ ಓದಿ: ಮಾಲ್​ಗೆ ಹೋಗುವ ಮಂದಿಗೆ ಕರೊನಾ ಬರೆ ! ದುಡ್ಡು ತೆತ್ತು ಪರೀಕ್ಷೆ ಮಾಡಿಸಿಕೊಳ್ಳಿ !

    ಈ ಆದೇಶದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಕರೊನಾ ಸೋಂಕು ನಿಯಮಿತವಾಗಿ ಹೆಚ್ಚುತ್ತಿದೆ. ಅದನ್ನು ತಡೆಯಲು ತೆಗೆದುಕೊಳ್ಳುವ ಕ್ರಮಗಳಿಗೆ ಈ ಹಬ್ಬಗಳ ಸಾರ್ವಜನಿಕ ಆಚರಣೆಯಿಂದ ಹೊಡೆತ ಬೀಳುವುದರಿಂದ ಈ ನಿಷೇಧ ವಿಧಿಸಲಾಗುತ್ತಿದೆ ಎಂದು ವಿವರಿಸಲಾಗಿದೆ. ಈ ಆದೇಶವನ್ನು ಮೀರಿ ಹಬ್ಬಗಳ ಆಚರಣೆಗೆ ಪ್ರಯತ್ನಿಸುವುದು ಅಪರಾಧವೆಂದು ಪರಿಗಣಿಸಲ್ಪಡುವುದು ಎನ್ನಲಾಗಿದೆ.

    ‘ರಾಜ್ಯದ ಜನತೆ ಸಂಕಷ್ಟದಲ್ಲಿದಾರೆ, ದಿಕ್ಕು ತಪ್ಪಿಸಬೇಡಿ’ : ಸಿಡಿ ಲೇಡಿಗೆ ಎಚ್​ಡಿಕೆ ಸಲಹೆ

    ‘ಫರಹಾನ್ ಹ್ಯಾಸ್ ಟು ಫಾಲೋ ರಾಂಚೋ’ ಎಂದು ಕರೊನಾ ಸುದ್ದಿ ಕೊಟ್ಟ ನಟ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts