More

    ಬಾಳೆಕಾಯಿಯನ್ನು ಗೊಬ್ಬರ ಮಾಡಿದ ಕೃಷಿಕ

    ವಿಟ್ಲ: ಮಾರುಕಟ್ಟೆಯಲ್ಲಿ ಸೂಕ್ತ ಧಾರಣೆ ಸಿಗದ ಹಿನ್ನೆಲೆ ಬಾಳ್ತಿಲ ಗ್ರಾಮದ ಕೃಷಿಕರೊಬ್ಬರು ತಮ್ಮ ತೋಟದಲ್ಲಿ ಬೆಳೆದ ಕ್ಯಾವಂಡಿಶ್ ಬಾಳೆಕಾಯಿಗಳನ್ನು ಬಳಸಿ ಕಾಂಪೋಸ್ಟ್ ತಯಾರಿಸುವ ನೂತನ ಪ್ರಯೋಗಕ್ಕೆ ಕೈಹಾಕಿದ್ದಾರೆ.

    ಭೂಮಿಯಿಂದ ಬಾಳೆ ಗಿಡ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಷ್ ಅಂಶವನ್ನು ಹೀರಿಕೊಳ್ಳುವ ಕಾರಣ ಅದರ ಕಾಯಿಯಲ್ಲೂ ಉತ್ತಮ ಪ್ರಮಾಣದಲ್ಲಿ ಪೊಟ್ಯಾಷ್ ಇದೆ ಎಂಬ ಲೆಕ್ಕಾಚಾರದಲ್ಲಿ ಕಡಿಮೆ ದರಕ್ಕೆ ಬಾಳೆಕಾಯಿ ನೀಡುವ ಬದಲಾಗಿ ಗೊಬ್ಬರ ಮಾಡಿದರೆ ಉತ್ತಮ ಫಲ ನೀಡಬಹುದೆಂಬ ಲೆಕ್ಕಾಚಾರ ಮಹೇಶ್ ಪದ್ಯಾಣ ಅವರದ್ದು.

    3.5 ಎಕರೆ ಜಾಗದಲ್ಲಿ ಬೆಳೆಸಿರುವ ಅಡಕೆ ಸಸಿಗಳ ನಡುವೆ ಎಡೆಸಸಿಯಾಗಿ ಸುಮಾರು 1,200 ಕ್ಯಾವಂಡಿಶ್ ಬಾಳೆ ಸಸಿಗಳನ್ನು ಹಾಕಿದ್ದರು. ಅಡಕೆ ಸಸಿ ದೊಡ್ಡದಾಗುತ್ತಿದ್ದಂತೆ ಬಾಳೆಯನ್ನು ತೆರವು ಮಾಡುವ ಯೋಜನೆ ಇತ್ತು. ಈ ನಡುವೆ ಎರಡು ಬೆಳೆಯನ್ನು ತೆಗೆಯುವ ಲೆಕ್ಕಾಚಾರವಿದ್ದರೂ ಕೋವಿಡ್-19ನಿಂದ ಮೊದಲ ಬೆಳೆಯಲ್ಲೇ ಬಾಳೆಕಾಯಿಗೆ ಬೇಡಿಕೆ ಇಲ್ಲದಂತಾಗಿದೆ.

    ಬಾಳೆಕಾಯಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಅಂಗಡಿ ಅಂಗಡಿ ಅಲೆದಾಡಿ ಕಡಿಮೆ ದರಕ್ಕೆ ನೀಡುವ ಬದಲು ತೋಟಕ್ಕೇ ಗೊಬ್ಬರ ಮಾಡುವುದರಿಂದ ಗೊಬ್ಬರ ತರುವ ಖರ್ಚು ಉಳಿಯುತ್ತದೆ ಎಂಬ ಲೆಕ್ಕಾಚಾರದಲ್ಲಿ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ.

    ಹೇಗೆ ಮಾಡಿದರು?: 30 ಗೊನೆಯ ರಾಶಿಗೆ ಅಕ್ಕಪಕ್ಕದಲ್ಲಿರುವ ಹುಲ್ಲು, ಸೊಪ್ಪು ಹೊದಿಸಿದ್ದಾರೆ. ಅದರ ಮೇಲೆ ಎರಡು ಬುಟ್ಟಿ ಸೆಗಣಿ ನೀರನ್ನು ಚಿಮುಕಿಸಿ ಕೆಲವು ದಿನಗಳ ಕಾಲ ಮುಚ್ಚಿಡುವುದರಿಂದ ಉತ್ತಮ ಗೊಬ್ಬರವಾಗಿ ಸಿಗಲಿದೆ.

    ಪೊಟ್ಯಾಷ್ ಹಾಗೂ ಮೈಕ್ರೋನ್ಯೂಟ್ರಿಯೆಂಟ್ಸ್ ಅಂಶ ಬಾಳೆಕಾಯಿಯಲ್ಲಿ ಇರುವ ಕಾರಣ ಗೊಬ್ಬರಕ್ಕೆ ಸೂಕ್ತವಾಗಿದೆ. ದರ ಇಲ್ಲ, ಮಾರುಕಟ್ಟೆ ಇಲ್ಲ ಎಂದು ಸರ್ಕಾರವನ್ನು ದೂಷಿಸುವ ಬದಲಾಗಿ ಗೊಬ್ಬರದ ಪ್ರಯತ್ನಕ್ಕೆ ಮುಂದಾಗಿದ್ದೇನೆ.
    ಮಹೇಶ್ ಪದ್ಯಾಣ, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts