More

    15 ವರ್ಷದ ವಿದ್ಯಾರ್ಥಿ ಜತೆ ಶಿಕ್ಷಕಿಯ ಸರಸ ಸಲ್ಲಾಪ: ಪೊಲೀಸ್ ಮುಂದೆ ಸ್ಫೋಟಕ ಮಾಹಿತಿ ಬಹಿರಂಗ

    ಲೂಸಿಯಾನ: ಮಧ್ಯಮ ಶಾಲಾ ಶಿಕ್ಷಕಿಯೊಬ್ಬಳು 15 ವರ್ಷದ ವಿದ್ಯಾರ್ಥಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಆರೋಪ ಕೇಳಿಬಂದಿದ್ದು, ತನ್ನ ಮನೆಯಲ್ಲಿಯೇ ಮಗುವಿನ ಎದುರಿನಲ್ಲಿಯೇ 8 ರಿಂದ 9 ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಿ ಪೊಲೀಸ್​ ಮುಂದೆ ಶಿಕ್ಷಕಿ ತಪ್ಪೊಪ್ಪೊಕೊಂಡಿದ್ದಾಳೆ.

    ಆರೋಪಿ ಎಲ್ಲರಿಯಾ ಸಿಲ್ವ(34) ಲೂಸಿಯಾನದ ಝಚರಿಯಲ್ಲಿರುವ ನಾರ್ಥ್​ವೆಸ್ಟರ್ನ್​ ಮಧ್ಯಮ ಶಾಲೆಯ ವಿಜ್ಞಾನ ಶಿಕ್ಷಕಿ. ಕಳೆದ ಬೇಸಿಗೆಯಲ್ಲಿ ಬಾಲಕನನ್ನು ಅನೇಕ ಬಾರಿ ಲೈಂಗಿಕ ಕ್ರಿಯೆಗೆ ತೊಡಗಿಸಿ ಕೊಂಡ ಆರೋಪದ ಮೇಲೆ ಗುರುವಾರ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಮೊದಲು ಶಾಲಾ ಇಮೇಲ್​ ಮೂಲಕ ಬಾಲಕನೊಂದಿಗೆ ಸಂಪರ್ಕ ಬೆಳೆಸಲು ಆರಂಭಿಸಿ, ಬಳಿಕ ವೈಯಕ್ತಿಕ ಇಮೇಲ್​ನಲ್ಲಿ ಆತನನ್ನು ತನ್ನ ಬಲೆಗೆ ಶಿಕ್ಷಕಿ ಬೀಳಿಸಿಕೊಂಡಿದ್ದಾಳೆ ಎಂದು ಬಂಧನ ವರದಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

    ಇದು ಶಾಲೆಯ ಗಮನಕ್ಕೂ ಬಂದಿರುವುದಿಲ್ಲ. ಪರಿಚಿತವಾದ ಬಳಿಕ ತನ್ನ ಬೆತ್ತಲೆಯ ಫೋಟೋ ಹಾಗೂ ವಿಡಿಯೋಗಳನ್ನು ಮುಖದ ಗುರುತು ಪತ್ತೆಹಚ್ಚದಂತೆ ಬಾಲಕನಿಗೆ ಶಿಕ್ಷಕಿ ಕಳುಹಿಸಿದ್ದಾಳೆ. ಸೆಕ್ಸ್​ ಮಾಡಬೇಕೆಂಬ ಬಯಕೆಯನ್ನು ಬಾಲಕನೊಂದಿಗೆ ವ್ಯಕ್ತಪಡಿಸಿದ ಬಳಿಕ ಆರಂಭವಾದ ಸಂಬಂಧ ನಂತರ ದೈಹಿಕ ಸಂಬಂಧವಾಗಿ ಮಾರ್ಪಾಡಾಗಿದೆ.

    ಬಾಲಕನ ಮನೆಯಿಂದ ಆತನನ್ನು ತನ್ನ ಮನೆಗೆ ಕರೆದೊಯ್ದು ಇಬ್ಬರು ಸೆಕ್ಸ್​​ನಲ್ಲಿ ತೊಡಗಿದ್ದಾರೆ. ಶಿಕ್ಷಕಿಗೆ ಮಗುವಿದ್ದು, ಅದರ ಎದುರಲ್ಲೇ ಇಬ್ಬರು ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಸುಮಾರು 8 ರಿಂದ 9 ಬಾರಿ ಈ ರೀತಿ ಮಾಡಿರುವುದಾಗಿ ಶಿಕ್ಷಕಿ ಪೊಲೀಸರ ಎದುರು ಬಾಯ್ಬಿಟ್ಟಿದ್ದಾಳೆ.

    ಬಾಲಕನಿಗೆ ಮಾದಕ ವಸ್ತುವನ್ನು ನೀಡಿರುವ ಆರೋಪ ಶಿಕ್ಷಕಿ ವಿರುದ್ಧ ಕೇಳಿಬಂದಿದೆ. ಬಳಿಕ ಸಾರ್ವಜನಿಕವಾಗಿ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳಲು ಬಾಲಕ ಶಿಕ್ಷಕಿಯನ್ನು ಒತ್ತಾಯಿಸಿದ್ದಾನೆ. ಆದರೆ, ವೃತ್ತಿ ಜೀವನ ಮತ್ತು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎಂಬ ಆಲೋಚನೆಯಿಂದ ಬಹಿರಂಗಪಡಿಸಲು ಇಚ್ಛಿಸದೇ ಹಾಗೇ ಮುಂದುವರಿಯಲು ಬಯಸಿದ್ದಾಗಿ ಪೊಲೀಸ್​ ವರದಿ ತಿಳಿಸಿದೆ.

    ಸದ್ಯ ಬಂಧನವಾಗಿರುವ ಆರೋಪಿ ಶಿಕ್ಷಕಿ ಎಲ್ಲರಿಯಾ ಸಿಲ್ವ ವಿರುದ್ಧ ಝಚರಿ ಪೊಲೀಸ್​ ಇಲಾಖೆ ಮತ್ತು ಈಸ್ಟ್​ ಬಟೋನ್​ ರೋಗ್​ ಪ್ಯಾರಿಷ್​ ಶೇರಿಫ್​ ಕಚೇರಿ ಜಂಟಿ ತನಿಖೆ ಆರಂಭಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts