More

    ಒಂದು ತಾಸಿನಲ್ಲೇ ಪತ್ತೆ ಹಚ್ಚಬಹುದು ಕರೊನಾ ಸೋಂಕು, ಸಿಎಸ್​ಐಆರ್​​​​ನ ತಂತ್ರಜ್ಞಾನ ಅಭಿವೃದ್ಧಿ

    ನವದೆಹಲಿ : ಕರೊನಾ ವೈರಸ್ ಪರೀಕ್ಷೆಗೆ ಫಲುದಾ ಎಂಬ ಹೆಸರಿನ ಕಡಿಮೆ ವೆಚ್ಚದ ಕಾಗದ ಆಧಾರಿತ ಪರೀಕ್ಷಾ ವಿಧಾನ ಅಭಿವೃದ್ಧಿಪಡಿಸಿದ ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್​ (ಸಿಎಸ್​ಐಆರ್) ಕ್ಷಿಪ್ರ ಸಾಮೂಹಿಕ ಪರೀಕ್ಷೆಗಾಗಿ ಅದರ ವ್ಯಾಪಕ ಬಳಕೆಗೆ ಟಾಟಾ ಸನ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಿದೆ.
    ಈ ಪರೀಕ್ಷಾ ವಿಧಾನಕ್ಕೆ ಖ್ಯಾತ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಕತೆಗಳಲ್ಲಿ ಕಾಣಿಸುವ ಪತ್ತೇದಾರಿ ಪಾತ್ರ ‘ಫಲುದಾ’ ಹೆಸರಿಡಲಾಗಿದೆ.

    ಕೋವಿಡ್- 19 ತಡೆಗಟ್ಟಲು, ಸಾಮೂಹಿಕ ಪರೀಕ್ಷೆಗಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಪ್ರಮುಖ ಅನುಕೂಲವೆಂದರೆ ಇದು ಕೈಗೆಟುಕುವ ದರದಲ್ಲಿ ಸಿಗುವ, ಬಳಕೆಗೆ ಸುಲಭವಾದುದು ಹಾಗೂ ದುಬಾರಿ ವೆಚ್ಚದ ಕ್ಯೂ- ಪಿಸಿಆರ್ ಯಂತ್ರದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ.

    ಇದನ್ನೂ ಓದಿ: ಕರೊನಾ ನಿರ್ಮೂಲನಕ್ಕೆ ಔಷಧ ಸಿಗದೆಯೂ ಇರಬಹುದು…!

    ಕೋವಿಡ್- 19 ಪತ್ತೆಗೆ ಕ್ಲಸ್ಟರ್ಡ್ ರೆಗ್ಯೂಲರ್ಲಿ ಇಂಟರ್​ಸ್ಪೇಸ್ಡ್ ಶಾರ್ಟ್ ಪಾಲಿಂಡ್ರೋಮಿಕ್ ರಿಪೀಟ್ಸ್ (ಸಿಆರ್​ಐಎಸ್​ಪಿಆರ್) ಆಧಾರಿತ ತಂತ್ರಜ್ಞಾನ ಅಭಿವೃದ್ಧಿಗಾಗಿ ಸಿಎಸ್​​ಐಆರ್​ನ ಐಜಿಐಬಿ ಜತೆಗೆ ಸಹಭಾಗಿತ್ವ ಹೊಂದಲು ಟಾಟಾ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ.

    ಕೆಲ ರಾಸಾಯನಿಕಗಳನ್ನು ಹೊಂದಿದ ಕಾಗದದ ಪಟ್ಟಿಯಂತಿರುವ ಸಾಧನದ ಮೇಲೆ ರೋಗಿಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಹಾಕಿದರೆ ಕರೊನಾ ವೈರಸ್ ಇದೆಯೇ ಎಂಬುದನ್ನು ಕೇವಲ ಒಂದು ಗಂಟೆಯ ಅವಧಿಯಲ್ಲಿ ಪತ್ತೆ ಹಚ್ಚಬಹುದು.

    ವಾಣಿಜ್ಯ ಉದ್ದೇಶಕ್ಕೆ ಈ ಸಾಧನಗಳ ತಯಾರಿಕೆ ಆರಂಭವಾದರೆ ದುಬಾರಿ ಸಾಮಗ್ರಿಗಳನ್ನು ಹೊಂದಿರದ, ಸ್ಥಳೀಯ ಪ್ರಯೋಗಾಲಯಗಳಲ್ಲೇ ಕರೊನಾ ಪರೀಕ್ಷೆ ನಡೆಸಲು ಸಾಧ್ಯವಿದೆ ಎಂದು ಸಂಸ್ಥೆ ತಿಳಿಸಿದೆ. (ಏಜನ್ಸೀಸ್)

    ಕರೊನಾ ವೈರಸ್​ ಭೀತಿಯ ಮಧ್ಯೆ ಕೊಲೆಗಾರ ಕಣಜ ಎಂಟ್ರಿ: ಕುಟುಕಿದ್ರೆ ಸಾಕು ಜೀವ ಹೋಗಲಿದೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts