More

    94 ವಸಂತ ತುಂಬಿದ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್​ಗೆ ಕೆಯುಡಬ್ಲ್ಯುಜೆ ಗೌರವ

    ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಹಮ್ಮಿಕೊಂಡಿರುವ ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ಮಾಡುವ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಲ್ಲಿ 94 ವಸಂತಗಳು ಕಂಡಿರುವ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್‌ ಅವರನ್ನು ಇಂದು ಸನ್ಮಾನಿಸಲಾಯಿತು. ಬೆಂಗಳೂರು ಕಂಟೋನ್ಮೆಂಟ್ ಬಳಿ ಇರುವ ಅವರ ಮನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಗೌರವಿಸಿದರು.

    ಗೌರವ ಸ್ವೀಕರಿಸಿ ಮಾತನಾಡಿದ ಜಾರ್ಜ್, ಮನೆಗೇ ಬಂದು ಕೆಯುಡಬ್ಲ್ಯುಜೆ ವತಿಯಿಂದ ಗೌರವ ಮಾಡಿರುವುದು ಅಭಿಮಾನದ ಸಂಗತಿ ಎಂದರು. ಪತ್ರಕರ್ತ ಆಗಬೇಕು ಎನ್ನುವ ತುಡಿತ ಮನಸಿನಲ್ಲಿ ಮೊಳೆಯಬೇಕೇ ಹೊರತು, ಅದು ಎಂದೂ ಬಲವಂತದ ಕ್ರಿಯೆ ಆಗಬಾರದು. ಪತ್ರಿಕೋದ್ಯಮ ಒಳ್ಳೆಯದಕ್ಕೂ ಇದೆ. ಕೆಟ್ಟದ್ದಕ್ಕೂ ಬಳಸಬಹುದು. ಆದರೆ ಪತ್ರಕರ್ತರ ಮನಸ್ಸು ಒಳ್ಳೆಯದರ ಕಡೆಗೆ ಸಾಗಿದರೆ, ಸಮಾಜದಲ್ಲಿ ಸುಧಾರಣೆಗೆ ಬೆಳಕಾಗಬಹುದು. ಇದರಿಂದ ಪತ್ರಕರ್ತರ ಘನತೆಯೂ ಹೆಚ್ಚುತ್ತದೆ. ಅಲ್ಪಾವಧಿ ಯೋಚನೆಗಳಿಂದ ಬೇರೆ ದಾರಿ ಹಿಡಿದರೆ ವೃತ್ತಿ ಜೀವನದಲ್ಲಿ ದೀರ್ಘಾವಧಿ ನೆಮ್ಮದಿ ಸಿಗಲು ಖಂಡಿತವಾಗಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.

    ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸುದ್ದಿ ಮನೆಯ ಹಿರಿಯರನ್ನು ಗೌರವಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ಇಂದು ಪತ್ರಿಕೋದ್ಯಮದ ಇತಿಹಾಸದಲ್ಲಿ ಮೇರು ಶಿಖರವಾಗಿರುವ ಜಾರ್ಜ್ ಅವರು, ವಿದೇಶದಲ್ಲಿ ಪತ್ರಿಕೆ ನಡೆಸಿ, ಭಾರತಕ್ಕೆ ಬಂದು ಮತ್ತೆ ರಾಜ್ಯ ರಾಜಧಾನಿಯಲ್ಲಿ ನೆಲೆಸಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ, ಕನ್ನಡಪ್ರಭ ಪತ್ರಿಕೆ ಮೂಲಕ ತಮ್ಮ ಬರಹ ಅಂಕಣಗಳಲ್ಲಿ ಛಾಪು ಮೂಡಿಸಿದ್ದಾರೆ. ತಮ್ಮದೇ ಗರಡಿಯಲ್ಲಿ ಮಾಗಿದ ಅನೇಕ ಶಿಷ್ಯರನ್ನು ಸುದ್ದಿಮನೆಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

    94 ವಸಂತ ತುಂಬಿದ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್​ಗೆ ಕೆಯುಡಬ್ಲ್ಯುಜೆ ಗೌರವ

    ಕನ್ನಡಪ್ರಭ, ಸುವರ್ಣ ಸುದ್ದಿವಾಹಿನಿ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಹಿರಿಯರಾದ ಜಾರ್ಜ್ ಅವರು ನಮಗೆ ಗುರುಗಳು. ಅವರ ಮಾರ್ಗದರ್ಶನದಿಂದ ನಾವು ಈ ಹಂತಕ್ಕೆ ತಲುಪಲು ಸಾಧ್ಯವಾಯಿತು ಎಂದರು.

    ಐಎಫ್​ಡಬ್ಲ್ಯುಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಇಂತಹ ಹಿರಿಯರಿಂದಾಗಿ ನಮ್ಮ ಪತ್ರಿಕೋದ್ಯಮಕ್ಕೆ ದೊಡ್ಡ ಕೊಡುಗೆ ಸಾಧ್ಯವಾಯಿತು. ಪತ್ರಕರ್ತ ಹೇಗಿರಬೇಕು ಎನ್ನುವುದಕ್ಕೆ ಜಾರ್ಜ್ ಅವರು ಮಾದರಿ. ಅವರ ಆದರ್ಶಗಳನ್ನು ಇಂದಿನ ಯುವ ಪತ್ರಕರ್ತರು ರೂಡಿಸಿಕೊಂಡರೆ ವೃತ್ತಿ ಘನತೆ ಹೆಚ್ಚಲು ಸಾಧ್ಯ ಎಂದರು.

    ಪತ್ರಕರ್ತರಾದ ಜೋಗಿ, ಬಾಲಸುಬ್ರಹ್ಮಣ್ಯಂ (ಬಾಲು) ಅವರು ಮಾತನಾಡಿ, ಜಾರ್ಜ್ ಅವರನ್ನು ಗೌರವಿಸುವುದು ನಮ್ಮೆಲ್ಲರ ಹೆಮ್ಮೆ. ಈ ಸುಂದರ ಕ್ಷಣಗಳು ಅವಿಸ್ಮರಣೀಯ ಎಂದರು. ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಧಾರವಾಡ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ, ಬೆಂಗಳೂರು ಘಟಕದ ಸೋಮಶೇಖರ ಗಾಂಧಿ ಹಾಜರಿದ್ದರು.

    ‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts