ಸಚಿವ ಸ್ಥಾನ ಕಾರ್ಯಕರ್ತರಿಗೆ ಸಂದ ಜಯ: ಎಸ್.ಅಂಗಾರ ಹೇಳಿಕೆ

blank

ಕಡಬ : ಸಚಿವ ಸ್ಥಾನ ದೊರೆತಿರುವುದು ಕಾರ್ಯಕರ್ತರಿಗೆ ಸಂದ ಜಯ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿ ಪಕ್ಷಕ್ಕೆ, ಕಾರ್ಯಕರ್ತರಿಗೆ ಚ್ಯುತಿ ಬಾರದಂತೆ ನಿರ್ವಹಿಸುವುದು ನನ್ನ ಗುರಿ ಎಂದು ಸಚಿವ ಎಸ್.ಅಂಗಾರ ಹೇಳಿದರು.

ಕಡಬ ತಾಲೂಕಿನ ಬೆಳಂದೂರು, ಕಡಬ, ನೆಲ್ಯಾಡಿ ಶಕ್ತಿ ಕೇಂದ್ರಗಳ ವತಿಯಿಂದ ಭಾನುವಾರ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ಸಭಾ ವಠಾರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎ.ವಿ. ತೀರ್ಥರಾಮ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಡಬ ತಾಲೂಕು ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಉಪಾಧ್ಯಕ್ಷೆ ಜಯಂತಿ ಆರ್. ಗೌಡ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಬೆಳಂದೂರು ಶಕ್ತಿಕೇಂದ್ರ ಅಧ್ಯಕ್ಷ ಗಣೇಶ್ ಉದನಡ್ಕ, ನೆಲ್ಯಾಡಿ ಶಕ್ತಿಕೇಂದ್ರ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್ ಎ.ಪಿ., ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರಮೀಳಾ ಜನಾರ್ದನ, ಆಶಾತಿಮ್ಮಪ್ಪ ಗೌಡ, ತಾಲೂಕು ಪಂಚಾಯಿತಿ ಸದಸ್ಯರಾದ ಸುಭದಾ, ಕುಸುಮಾ ಪಿ.ವೈ., ಪಕ್ಷದ ಪದಾಧಿಕಾರಿಗಳಾದ ಕೃಷ್ಣ ಶೆಟ್ಟಿ ಕಡಬ, ರಾಧಾಕೃಷ್ಣ ಬೂಡಿಯಾರ್, ವೆಂಕಟ್ ವಳಲಂಬೆ, ಶ್ರೀಕೃಷ್ಣ, ಅನಿಲ್, ಪ್ರಕಾಶ್ ಎನ್.ಕೆ., ಬಾಲಕೃಷ್ಣ ಬಾಣಜಾಲು ಉಪಸ್ಥಿತರಿದ್ದರು.

ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿದರು. ವಾಡ್ಯಪ್ಪ ಗೌಡ ಎರ್ಮಾಯಿಲ್ ವಂದಿಸಿದರು. ರಾಕೇಶ್ ರೈ ಕೆಡೆಂಜಿ, ಶಿವಪ್ರಸಾದ್ ಮೈಲೇರಿ ನಿರೂಪಿಸಿದರು. ಆರಂಭದಲ್ಲಿ ಸಚಿವರನ್ನು ತೆರೆದ ವಾಹನದಲ್ಲಿ ಕಡಬ ಎಪಿಎಂಸಿ ಪ್ರಾಂಗಣದಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಸಮಾರಂಭದಲ್ಲಿ ಕಡಬದ ವಿವಿಧ ಸಂಘಟನೆಗಳು ಸಚಿವರನ್ನು ಅಭಿನಂದಿಸಿದರು.

ನಾನು ಪ್ರಚಾರ ಬಯಸವುದಿಲ್ಲ ಆದರೆ ಸಂಘಟನೆಯ ಬಲಕ್ಕಾಗಿ ಪ್ರಚಾರ ಅಗತ್ಯವಿದೆ. ಬಿಜೆಪಿ ಸರ್ಕಾರದಿಂದ ಹಲವಾರು ಯೋಜನೆಗಳು ಅನುಷ್ಠಾನವಾದರೂ ಇದರ ಲಾಭ ಪಡೆಯುವಲ್ಲಿ ಕಾಂಗ್ರೆಸ್ಸಿಗರು ಹವಣಿಸುತ್ತಾರೆ. ಇದಕ್ಕಾಗಿ ಪ್ರಚಾರ ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯ. ಯಾವತ್ತೂ ಸಚಿವ ಸ್ಥಾನ ಬಯಸಿದ್ದಿಲ್ಲ. ಆದರೆ ಕಾರ್ಯಕರ್ತರ ಬಯಕೆಗೆ ಒತ್ತು ನೀಡಬೇಕಾಗಿರುವುದು ಅಗತ್ಯ.
-ಎಸ್.ಅಂಗಾರ ಸಚಿವ

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…