More

    ಬಂದರು ಅಭಿವೃದ್ಧಿ ಕಾರ್ಯ ಶೀಘ್ರ, ದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚೆ ಬಳಿಕ ಅಂಗಾರ ವಿಶ್ವಾಸ

    ಮಂಗಳೂರು/ಸುಳ್ಯ: ಬಂದರು ಅಭಿವೃದ್ಧಿ ಕುರಿತಂತೆ ಒಟ್ಟು 24 ವಿವಿಧ ಯೋಜನೆಗಳ ಅನುಷ್ಠಾನ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚಿಸಲಾಗಿದೆ ಎಂದು
    ರಾಜ್ಯ ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದರು.

    ಕೇಂದ್ರ ಬಂದರು, ಹಡಗು ಹಾಗೂ ಜಲಮಾರ್ಗಗಳ ಸಚಿವ ಸರ್ಬಾನಂದ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರನ್ನು ದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿದ ಬಳಿಕ ವಿಜಯವಾಣಿ ಜತೆ ಮಾತನಾಡಿದ ಅವರು, ಎಂಟು ಯೋಜನೆಗಳಿಗೆ ಈಗಾಗಲೇ ಅನುಮೋದನೆ ದೊರೆತಿದೆ. ಇನ್ನುಳಿದ 16 ಯೋಜನೆಗಳಿಗೆ ಇನ್ನಷ್ಟೇ ಅನುಮತಿ ಸಿಗುವ ವಿಶ್ವಾಸವಿದೆ ಎಂದರು.

    ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ವೇಳೆ ಮೀನುಗಾರರಿಗೆ ಸಿಹಿ ನೀರಿನ ಅವಶ್ಯಕತೆ ಇರುವುದರಿಂದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಯೋಜನೆ, ಯುವಕರಿಗೆ ಮೀನು ಮಾರಾಟಕ್ಕೆ ಸರ್ಕಾರದ ವತಿಯಿಂದಲೇ ವಾಹನಗಳನ್ನು ನೀಡಿ ಸ್ವ ಉದ್ಯೋಗದ ಜತೆಗೆ ಕ್ಲಪ್ತ ಸಮಯದಲ್ಲಿ ಹಳ್ಳಿಗಳ ಮೂಲೆ, ಮೂಲೆಗಳಿಗೆ ತೆರಳಿ ಗುಣಮಟ್ಟದ ಮೀನು ದೊರಕುವಂತೆ ಮಾಡುವ ಯೋಜನೆ ಬಗ್ಗೆಯೂ ಚರ್ಚೆ ನಡೆಯಿತು ಎಂದರು.

    ಸಚಿವರ ವಿಶೇಷ ಕರ್ತವ್ಯಾಧಿಕಾರಿ ಮಲ್ಲಿಕಾರ್ಜುನ, ಸಲಹೆಗಾರ ಅರುಣ್ ಉಪಸ್ಥಿರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts