More

    ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳಿಗೆ ಶುಲ್ಕ ನಿಗದಿ; ಪಾವತಿಸಬೇಕಾದ ಫೀಸ್ ಇಷ್ಟು…

    ಬೆಂಗಳೂರು: ಬಿ.ಎಸ್ಸಿ. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳ ಪ್ರವೇಶಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯು ಶುಲ್ಕ ನಿಗದಿ ಮಾಡಿದೆ. ಅಲೈಡ್ ಹೆಲ್ತ್ ಸೈನ್ಸ್ ಪ್ರವೇಶ ಪ್ರಕಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಬೋಧನಾ ಶುಲ್ಕ, ವಿವಿ ನೋಂದಣಿ ಶುಲ್ಕ ಸೇರಿದಂತೆ ಒಟ್ಟಾರೆ 12 ರೀತಿಯ ವಿವಿಧ ಶುಲ್ಕ ಸೇರಿ ಪ್ರವೇಶಾತಿ ವೇಳೆಯಲ್ಲಿ ವಿದ್ಯಾರ್ಥಿಗಳು 17,900 ರೂ. ಪಾವತಿಸಬೇಕಿದೆ. ಎರಡನೇ ಮತ್ತು ಮೂರನೇ ವರ್ಷದಲ್ಲಿ 12,200 ರೂ. ಪಾವತಿಸಬೇಕಿದೆ.

    ಶುಲ್ಕ ಹಾಗೂ ಇತರೆ ಪಾವತಿಗಳನ್ನು ಒಮ್ಮೆ ಪಾವತಿಸಿದ ನಂತರ ಅದನ್ನು ಕೋರ್ಸ್‌ನ ಅವಧಿಯನ್ನು ಪೂರ್ಣಗೊಳಿಸದೇ ಬಿಡುವ ಅಥವಾ ಇನ್ನಿತರೆ ಕಾರಣಗಳಿಗೆ ಸಂಸ್ಥೆಗೆ ಸೇರಿದ್ದ ಪಕ್ಷದಲ್ಲಿ ಅವನ್ನು ಹಿಂದಿರುಗಿಸಲಾಗುವುದಿಲ್ಲ.

    ಈ ಸಂಸ್ಥೆಗೆ ಅರ್ಜಿಯನ್ನು ಕಳುಹಿಸುವ ಮುನ್ನ ಅಭ್ಯರ್ಥಿಗಳು ಎಚ್ಚರಿಕೆಯಿಂದ ಆ ಸಂಸ್ಥೆಯ ಪ್ರಕಟಣೆಯನ್ನು ಓದಿಕೊಳ್ಳಬೇಕು. ಆಯ್ಕೆಯಾಗಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ನಿರ್ದೇಶಕರು, ಡೀನ್, ಬಿಎಂಆರ್‌ಐ ಇವರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ವಿವರವನ್ನು ಈ ಸಂಸ್ಥೆಯಿಂದ ಪಡೆಯಬೇಕೆಂದು ಸೂಚಿಸಿದೆ.

    ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ…

    ರೋಚಕ ರಕ್ಷಣಾ ಕಾರ್ಯಾಚರಣೆ; ಟ್ರೆಕ್ಕಿಂಗ್ ವೇಳೆ ಕಂದಕಕ್ಕೆ ಬಿದ್ದವನ ರಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts