ಸಿನಿಮಾ

ಹುಬ್ಬಳ್ಳಿಯಲ್ಲಿ ‘ಫೀಲ್ ಮೈ ಲವ್’ 19ರಂದು ಬಿಡುಗಡೆ

ಹುಬ್ಬಳ್ಳಿ: ಪ್ರೀತಿ, ಪ್ರೇಮ ಆಧಾರಿತ ‘ಫೀಲ್ ಮೈ ಲವ್’ ಕನ್ನಡ ಸಿನಿಮಾ ಮೇ 19ರಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಲಿದೆ ಎಂದು ನವಲಗುಂದ ಮೂಲದ ನಿರ್ದೇಶಕ ವಿನಯ ಹೊಸಗೌಡರ ಹೇಳಿದರು.


ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಶುಕ್ರವಾರ ಈ ಸಿನಿಮಾ ಬೆಂಗಳೂರಿನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.


ಡಿ.ಟಿ. ರಮೇಶ ನಿರ್ದೇಶಿಸಿದ್ದು, ಗೌಸ್ ಪೀರಸಾಬ್ ಬಂಡವಾಳ ಹಾಕಿದ್ದಾರೆ. ರಾಹುಲ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ದೀಪಕ್‌ಗೌಡ ಸಂಕಲನ ಮಾಡಿದ್ದಾರೆ. ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ನಾಗೇಂದ್ರ ಪ್ರಸಾದ ಸಾಹಿತ್ಯ ಹಾಗೂ ವಿಜಯ ಪ್ರಕಾಶ ಒಂದು ಹಾಡಿಗೆ ಧ್ವನಿ ನೀಡಿದ್ದಾರೆ ಎಂದು ವಿವರಿಸಿದರು.


ನಟ ಹಾಸನದ ರಾಕೇಶ, ನಟಿಯರಾದ ಚಾರಿತ್ರಾ ರಾವ್, ಪೂಜಾ ಅಭಿನಯಿಸಿದ್ದಾರೆ. ಬೆಂಗಳೂರು, ಸೋಮವಾರ ಪೇಟ ಹಾಗೂ ಬಳ್ಳಾರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರೀತಿ ಆಧಾರಿತ ಸಿನಿಮಾ ಇದಾಗಿದ್ದು, ಮನರಂಜನೆಗಾಗಿ ಮಾಡಲಾಗಿದೆ. ಒಳ್ಳೆಯ ಛಾಯಾಗ್ರಹಣ ಹಾಗೂ ಸಂಗೀತವನ್ನು ಜನರು ಇಷ್ಟಪಡುತ್ತಿದ್ದಾರೆ ಎಂದರು.


ಸಿನಿಮಾದಲ್ಲಿ ನಾಯಕನಾಗುವ ಉದ್ದೇಶದಿಂದ ಬೆಂಗಳೂರಿಗೆ ಹೋದೆ. ಛಾಯಾಗ್ರಹಣದಲ್ಲಿ ಆಸಕ್ತಿ ಇರುವ ಕಾರಣ ಅದರಲ್ಲಿ ಮುಂದುವರಿದೆ. ಸಲಾಂ ಬೆಂಗ್ಳೂರು ಹಾಗೂ ಇದೇ ಅಂತರಂಗ ಶುದ್ಧಿ ಸಿನಿಮಾದಲ್ಲಿ ಉತ್ತಮ ಛಾಯಾಗ್ರಹಣ ಮಾಡಿದ್ದರಿಂದ ಈ ಸಿನಿಮಾಕ್ಕೆ ಅವಕಾಶ ಸಿಕ್ಕಿದೆ ಎಂದರು. ಪ್ರವೀಣ ಪಾಟೀಲ, ಅನಿಲ್ ಮಂಗನಹಳ್ಳಿ, ಶಿವಪ್ರಸಾದ ಅನವೇರಿ ಸುದ್ದಿಗೋಷ್ಠಿಯಲ್ಲಿದ್ದರು.

Latest Posts

ಲೈಫ್‌ಸ್ಟೈಲ್