More

    ನಗರದ ಎರಡು ಕಡೆ ಕೆಟ್ಟು ನಿಂತ ಮತಯಂತ್ರಗಳು:ಮತದಾನ ಮಾಡದೆ ಮನೆಗೆ ತೆರಳಿ ಮತದಾರರು

    ಹಾಸನ: ನಗರದ ಸಂತೇಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಮತಗಟ್ಟೆ ಸಂಖ್ಯೆ 189ರಲ್ಲಿ ಮತಯಂತ್ರ ಎರಡು ಬಾರಿ ಕೆಟ್ಟು ನಿಂತಿದೆ. ಇನ್ನು ಚಿಪ್ಪಿನಕಟ್ಟೆ ಭಾಗದ ಮತಯಂತ್ರಯಲ್ಲೂ ಕೂಡ ಇದೆ ಸಮಸ್ಯೆ ಎದುರಾಗಿ, ಮತದಾರರು ಆಕ್ರೋಶ ವ್ಯಕ್ತಪಡಿಸಿ ವಾಪಸ್ ತೆರಳಿದರು.
    ಏಪ್ರಿಲ್ 26ರ ಶುಕ್ರವಾರ ಲೋಕಸಭಾ ಚುನಾವಣೆಯ ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು. ನಗರದ ಸಂತೇಪೇಟೆ, ವಲ್ಲಬ್‌ಭಾಯಿ ರಸ್ತೆ ಬಳಿ ಇರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 189 ಮತಗಟ್ಟೆ ಸಂಖ್ಯೆಯಲ್ಲಿ 7 ಗಂಟೆ ಸಮಯದಲ್ಲಿ ಮತಯಂತ್ರ ಕೆಟ್ಟು ನಿಂತಿದೆ. ಒಂದು ಗಂಟೆಯ ನಂತರ ಸರಿ ಮಾಡಲಾಗಿದೆ. ಇದಾದ ನಂತರ ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ ಮತ್ತೆ ಮತಯಂತ್ರ ಕೈಕೊಟ್ಟಿದೆ. ಮತ್ತೊಮ್ಮೆ ಅದನ್ನು ಸರಿಪಡಿಸಲಾಯಿತು. ಎರಡು ಬಾರಿ ಒಂದೇ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟಿದ್ದು, ಇದರಿಂದ ಸುಮಾರು ಎರಡು ಗಂಟೆಗಳ ಕಾಲ ಮತದಾನ ಮಾಡಲು ಸಾಧ್ಯವಾಗದೆ ಜನರು ನಿರಾಶರಾದರು.
    ಮಧ್ಯಾಹ್ನದ ವೇಳೆ ಸರದಿ ಸಾಲಿನಲ್ಲಿ ನಿಂತಿದ್ದ ಜನರು ನೆರಳಿನಲ್ಲಿ ನಿಲ್ಲಲು ಹೋದರೆ ಅರೆ ಸೇನಾ ಪಡೆಯವರು ಅವರನ್ನು ಹೊರಗೆ ತಳ್ಳಿದರು. ಬಿಸಿಲು ಇದೆ ನೆರಳಿನಲ್ಲಿ ಇರಲು ಅವಕಾಶ ಕೊಡಿ ಎಂದು ಕೇಳಿದರೂ ರಕ್ಷಣಾ ಪಡೆಯವರು ಕರುಣೆ ತೋರದೆ ಅಲ್ಲಿಂದ ಕಳುಹಿಸಿದರು. ಸರದಿ ಸಾಲಿನಲ್ಲಿ ನಿಂತ ಅನೇಕರು ಬಿಸಿಲಿನ ತಾಪ ತಾಳಲಾರದೆ ಮನೆಗೆ ವಾಪಸ್ ಹೋದರು. ಎರಡು ಗಂಟೆಗಳ ಕಾಲ ಯಾವ ಮತದಾನ ಆಗದೆ ಇರುವುದರಿಂದ ಮತದಾನ ಮಾಡಲು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ನೀಡುವಂತೆ ಸರದಿ ಸಾಲಿನಲ್ಲಿದ್ದವರು ಮನವಿ ಮಾಡಿದರು.
    ಇನ್ನು ಚಿಪ್ಪಿನಕಟ್ಟೆಯಲ್ಲಿರುವ ಎರಡು ಬೂತ್‌ಗಳಲ್ಲೂ ಇದೆ ಸಮಸ್ಯೆ ಎದುರಾಗಿದೆ. ಮತಯಂತ್ರ ಕೆಟ್ಟು ಸ್ವಲ್ಪ ಸಮಯದ ನಂತರ ಸರಿಪಡಿಸಲಾಗಿದೆ. ಮತಯಂತ್ರದ ತೊಂದರೆ ಎಲ್ಲೆಲ್ಲಿ ಆಗಿದೆ. ಆ ಭಾಗದಲ್ಲಿ ಹೆಚ್ಚಿನ ಸಮಯ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಮತದಾರರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts