More

    ಪ್ಲೇಆಫ್‌ಗೇರಿದ ಹರಿಯಾಣ:ಸಿದ್ಧಾರ್ಥ್‌ ದೇಸಾಯಿ ಸೂಪರ್‌ 10 ಸಾಹಸ

    ಪಂಚಕುಲ: ಪಟನಾ ಪೈರೇಟ್ಸ್‌ ತಂಡದ ಪ್ರಬಲ ಹೊರಾಟವನ್ನು ಹತ್ತಿಕ್ಕಿದ ಹರಿಯಾಣ ಸ್ಟೀಲರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ
    ಆವೃತ್ತಿಯ 122ನೇ ಪಂದ್ಯದಲ್ಲಿ7 ಅಂಕಗಳಿಂದ ಗೆದ್ದು, ಪ್ಲೇಆಫ್‌ಗೆ ಸನಿಹಗೊಂಡಿದೆ.  ದೇವಿಲಾಲ್‌ ಒಳಾಂಗಣ ಕ್ರೀಡಾಂಗಣದಲ್ಲಿಶುಕ್ರವಾರ ನಡೆದ ಹಣಾಹಣಿಯಲ್ಲಿಅಂತಿಮ ಕ್ಷ ಣದಲ್ಲಿಉತ್ತಮ ಫಾರ್ಮ್‌ ಕಂಡುಕೊಂಡ ಹರಿಯಾಣ 39-32 ಅಂಕಗಳ ಅಂತರದಿಂದ ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಗಳಿಸಿದ್ದ ಪಟನಾ ತಂಡದ ಸವಾಲನ್ನು ಮೆಟ್ಟಿನಿಂತಿತು.

    ಹರಿಯಾಣದ ನಿರ್ಣಾಯಕ ಪಂದ್ಯದಲ್ಲಿ ಸಿದ್ಧಾರ್ಥ್‌ ದೇಸಾಯಿ 12 ಅಂಕ ಗಳಿಸಿದರೆ, ರಾಹುಲ್‌ ಸೆತ್ಪಾಲ್‌ 8 ಮತ್ತು ಜೈದೀಪ್‌ ದಹಿಯಾ
    6 ಅಂಕ ಗಳಿಸಿ ಗೆಲುವಿನಲ್ಲಿಪ್ರಮುಖ ಪಾತ್ರವಹಿಸಿದರು. ಅತ್ತ ಪಟನಾ ಪರ ಆಲ್‌ರೌಂಡರ್‌ ರೋಹಿತ್‌ 8 ಅಂಕ ಕಲೆಹಾಕಿದರೆ, ಅನೂಜ್‌
    ಮತ್ತು ಸಂಜಯ್‌ ತಲಾ 5 ಹಾಗೂ ಯುವರಾಜ್‌ 6 ಅಂಕ ಗಳಿಸಿ ತಂಡದ ವೀರೋಚಿತ ಹೋರಾಟಕ್ಕೆ ಸಾಕ್ಷಿಯಾದರು.

    ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಹೊಂದಿರುವ ಪಟನಾ, ಅಂಕಪಟ್ಟಿಯಲ್ಲಿಮೇಲೇರುವ ಗುರಿಯೊಂದಿಗೆ ದ್ವಿತೀಯಾರ್ಧ ಆರಂಭಿಸಿದರೆ,
    ಪಂದ್ಯ ಗೆದ್ದು ಪ್ಲೇಆಫ್‌ ಹಂತವನ್ನು ಖಾತರಿಪಡಿಸಿಕೊಳ್ಳುವ ಗುರಿಯೊಂದಿಗೆ ಸ್ಟೀಲರ್ಸ್‌ ತಂಡ ಇಳಿಯಿತು. ಮುನ್ನಡೆಗಾಗಿ ಉಭಯ
    ತಂಡಗಳು ಶಕ್ತಿ ಮೀರಿ ಯತ್ನಿಸಿದವು. ಈ ಮಧ್ಯೆ 25ನೇ ನಿಮಿಷದಲ್ಲಿಹರಿಯಾಣ ತಂಡವನ್ನು ಪಂದ್ಯದಲ್ಲಿಮೊದಲ ಬಾರಿಗೆ ಆಲೌಟ್‌
    ಮಾಡಿದ ಪಟನಾ 21-18ರಲ್ಲಿ ಮೇಲುಗೈ ಸಾಧಿಸಿತು. ಆದರೆ ಸೂಪರ್‌ ಟ್ಯಾಕಲ್‌ನಲ್ಲಿ ಲಯ ಕಂಡುಕೊಂಡ ಸ್ಟೀಲರ್ಸ್‌ 23-
    23ರಲ್ಲಿಮರು ಹೋರಾಟ ಸಂಘಟಿಸುವ ಮೂಲಕ ದಿಟ್ಟ ಹೋರಾಟ ನೀಡಿತು.

    ಪಂದ್ಯ ಮುಕ್ತಾಯಕ್ಕೆ 10 ನಿಮಿಷಗಳು ಬಾಕಿ ಇರುವಾಗ ಎರಡೂ ತಂಡಗಳು 25-25 ಅಂಕಗಳಿಂದ ಹೋರಾಟ ನಡೆಸಿ ಅಲ್ಪ ವಿರಾಮ
    ಪಡೆದವು. ಈ ವೇಳೆ ಮೇಲುಗೈ ಸಾಧಿಸಲು ಕಾರ್ಯತಂತ್ರ ಹೆಣದವು. 35ನೇ ನಿಮಿಷದಲ್ಲಿಪಟನಾ ತಂಡವನ್ನು ಆಲೌಟ್‌ ಮಾಡಿ ಸೇಡು
    ತೀರಿಸಿಕೊಂಡ ಹರಿಯಾಣ 34-30ರಲ್ಲಿಅಂತರ ಕಾಯ್ದುಕೊಳ್ಳುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
    ಇದಕ್ಕೂ ಮುನ್ನ ತೀವ್ರ ಸೆಣಸಾಟಕ್ಕೆ ಸಾಕ್ಷಿಯಾದ ಈ ಪಂದ್ಯದಲ್ಲಿಉಭಯ ತಂಡಗಳು ಮುನ್ನಡೆ ಗಳಿಸಲು ಸರ್ವಪ್ರಯತ್ನ ನಡೆಸಿದವು.
    ಒಮ್ಮೆ ಪಟನಾ ಮುನ್ನಡೆ ಗಳಿಸಿದರೆ, ಮತ್ತೊಮ್ಮೆ ಹರಿಯಾಣ ಮೇಲುಗೈ ಸಾಧಿಸಿತು. ಹೀಗಾಗಿ ಪಂದ್ಯದ 30ನೇ ನಿಮಿಷದವರೆಗೂ ಆಟ
    ಮುಂದುವರಿಯಿತು. ಪ್ರಸಕ್ತ ಟೂರ್ನಿಯಲ್ಲಿಮೊದಲ ಬಾರಿ ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿದ ಹರಿಯಾಣ ಸ್ಟೀಲರ್ಸ್‌ ಮತ್ತು
    ಪಟನಾ ಪೈರೇಟ್ಸ್‌ ತಂಡಗಳು ವಿರಾಮಕ್ಕೆ 13-13 ಅಂಕಗಳಿಂದ ಸಮಬಲದ ಹೋರಾಟ ನೀಡಿದವು.

    ಉಭಯ ತಂಡಗಳು ಟ್ಯಾಕಲ್‌ ಮತ್ತು ರೇಡಿಂಗ್‌ ಎರಡರಲ್ಲೂ8 ಮತ್ತು 5 ಅಂಕಗಳನ್ನು ಕಲೆಹಾಕಿದ್ದು, ವಿಶೇಷ. ಬಹುತೇಕ
    ಪಂದ್ಯಗಳಲ್ಲಿರೇಡರ್‌ಗಳು ಮಿಂಚುವುದು ಸಾಮಾನ್ಯ ಸಂಗತಿ. ಆದರೆ ಈ ಪಂದ್ಯದಲ್ಲಿಡಿಫೆಂಡರ್‌ಗಳು ತಮ್ಮ ಶಕ್ತಿ ಪ್ರದರ್ಶಿಸಿದರು.
    ಹರಿಯಾಣ ಪರ ರಾಹುಲ್‌ ಸೆತ್ಪಾಲ್‌ ಗಮನ ಸೆಳೆದರೆ, ಪಟನಾ ಪರ ಸಂಜಯ್‌ ಮತ್ತು ಆಲ್‌ರೌಂಡರ್‌ ರೋಹಿತ್‌ ಸೂಧಿರ್ತಿಯುತ
    ಪ್ರದರ್ಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts