More

    VIDEO| ಮೃಗಾಲಯದಲ್ಲಿ ಹುಲಿಯ ಜನನಾಂಗಕ್ಕೆ ಕೈಹಾಕಿದ ಯುವತಿ: ಮುಂದೇನಾಯ್ತು?

    ಬ್ಯಾಂಕಾಕ್​: ಕ್ರೂರ ಪ್ರಾಣಿಗಳನ್ನು ಕೆಣಕಬೇಡಿ ಎಂಬ ಎಚ್ಚರಿಕಾ ಫಲಕಗಳನ್ನು ಮೃಗಾಲಯಗಳಲ್ಲಿ ನಾವು-ನೀವು ನೋಡಿರುತ್ತೇವೆ. ಅದರಲ್ಲೂ ಹುಲಿಯ ಬೋನಿಗೆ ಬಿದ್ದವರ ಕತೆ ಏನಾಗಿದೆ ಎಂಬ ಕೆಲ ಉದಾಹರಣೆಗಳು ನಮ್ಮು ಕಣ್ಣ ಮುಂದಿದೆ. ಹೀಗಿರುವಾಗ ಥಾಯ್ಲೆಂಡ್​ನ ಪ್ರವಾಸಿಗಳೊಬ್ಬಳು ಹುಲಿಯನ್ನು ಮುಟ್ಟಿದ್ದಲ್ಲದೆ, ಅದರ ವೃಷಣಗಳಿಗೂ ಕೈಹಾಕಿ ತನ್ನ ಭಂಡ ಧೈರ್ಯ ಪ್ರದರ್ಶಿಸಿ, ಟೀಕೆಗೂ ಗುರಿಯಾಗಿದ್ದಾಳೆ.

    ಉತ್ತರ ಥಾಯ್ಲೆಂಡ್​ನ ಚೈಯಾಂಗ್​​​ ಮೈ ನಗರದಲ್ಲಿರುವ ಟೈಗರ್​ ಕಿಂಗ್​ಡಮ್​ ಜೂಗೆ ಪ್ರವಾಸಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರಸಂಗ ಜರುಗಿದೆ. ಹುಲಿಯ ವೃಷಣಗಳಿಗೆ ಕೈಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದು, ನೆಟ್ಟಿಗರ ತೀವ್ರ ಟೀಕೆಗೆ ಗುರಿಯಾಗಿದ್ದಾಳೆ.

    ಇದನ್ನೂ ಓದಿ: ವಿಡಿಯೋ: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ….! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು…!

    ಆಗಸ್ಟ್​ 26ರಂದು ಈ ಘಟನೆ ನಡೆದಿದೆ. ಹುಲಿ ಬಳಿ ಕುಳಿತು ಯುವತಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾಳೆ. ಅಲ್ಲದೆ, ವಿಡಿಯೋ ಚಿತ್ರೀಕರಣ ಸಹ ಮಾಡಿಕೊಂಡಿದ್ದಾಳೆ. ಯುವತಿಯನ್ನು ವಾರಸ್ಚಯ ಅಕ್ಕರಾಚೈಯಪಸ್ ಎಂದು ಗುರುತಿಸಲಾಗಿದ್ದು, ಈಕೆಯ ವಿರುದ್ಧ ಕೋಪಗೊಂಡಿರುವ ನೆಟ್ಟಿಗರು ಹುಲಿಗೆ ಅವಮಾನ ಮಾಡಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.

    VIDEO| ಮೃಗಾಲಯದಲ್ಲಿ ಹುಲಿಯ ಜನನಾಂಗಕ್ಕೆ ಕೈಹಾಕಿದ ಯುವತಿ: ಮುಂದೇನಾಯ್ತು?

    ನಿಮಗೆ ಈ ರೀತಿ ಮಾಡಲು ಹಕ್ಕಿಲ್ಲ. ಹುಲಿಯ ಜನನಾಂಗ ಸ್ಪರ್ಶ ಮಾಡಿದ್ದು ಕ್ರೂರ ಮನಸ್ಥಿತಿ. ಒಂದು ವೇಳೆ ಹುಲಿ ಎಚ್ಚರವಿದ್ದಿದ್ದರೆ ಇದನ್ನು ಮಾಡಲು ಸಾಧ್ಯವೇ? ಒಂದು ವೇಳೆ ಹುಲಿ ಕೋಪಗೊಂಡಿದ್ದರೆ ಆಕೆಯ ಸ್ಥಿತಿ ಏನಾಗುತ್ತಿತ್ತು? ಇದಕ್ಕೂ ನಿಜಕ್ಕೂ ಅಪಾಯಕಾರಿ ಎಂದು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ಏನೂ ನಡೆಯುತ್ತಿಲ್ಲ ಅನ್ನೋಕೆ ನಾವು ಸ್ವರ್ಗದಲ್ಲಿಲ್ಲ, ಅಲ್ವಸ್ವಲ್ಪ ಇದ್ದೇ ಇರುತ್ತೆ; ಸುದೀಪ್​

    ಆದರೆ, ಇದೆಲ್ಲವನ್ನು ಸಮರ್ಥನೆ ಮಾಡಿಕೊಂಡಿರುವ ವಾರಸ್ಚಯ, ನಾನೋರ್ವ ಪ್ರಾಣಿ ಪ್ರಿಯೆ ಎಂದು ಹೇಳಿಕೊಂಡಿದ್ದಾಳೆ. ಆದರೂ, ಈಕೆಯ ನಡೆಗೆ ಅನೇಕರು ಇನ್ನು ಕಿಡಿಕಾರುತ್ತಲೇ ಇದ್ದಾರೆ. ಕ್ರಮಕ್ಕೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಡೈಲಿ ಮೇಲ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts