More

    ಶ್ವಾಸಕೋಶದಲ್ಲಿ ಕಾಂಡೋಮ್ ಪತ್ತೆ​! ವೈದ್ಯರ ಮುಂದೆ 6 ತಿಂಗಳ ಹಿಂದಿನ ನಿಜ ಸಂಗತಿ ಬಿಚ್ಚಿಟ್ಟ ಮಹಿಳೆ

    ನವದೆಹಲಿ: ಕ್ಷಯ ರೋಗವು ಸಹ ವಿಶ್ವದ ಮಾರಕ ರೋಗಗಳಲ್ಲಿ ಒಂದು. ಇದು ಆರಂಭದಲ್ಲಿ ಶ್ವಾಸಕೋಸದ ಮೇಲೆ ದಾಳಿ ಮಾಡಿ ನಂತರ ಬೆನ್ನುಹುರಿ ಮತ್ತು ಮೆದುಲೂ ಸೇರಿದಂತೆ ದೇಹದ ಎಲ್ಲ ಭಾಗಗಳಿಗೂ ಹರಡುತ್ತದೆ. ಆದರೆ, ಇಂದು ಆ್ಯಂಟಿಬಯಾಟಿಕ್ಸ್ ಮತ್ತು ಇತರೆ ವೈದ್ಯಕೀಯ ಚಿಕಿತ್ಸೆಯ​ ಮೂಲಕ ಈ ರೋಗವನ್ನು ಗುಣಪಡಿಸಬಹುದು.

    ಕಳೆದ ಆರು ತಿಂಗಳಿಂದ ದಪ್ಪ ಸಿಂಬಳ, ಕೆಮ್ಮು ಮತ್ತು ಜ್ವರದಂತಹ ಲಕ್ಷಣಗಳನ್ನು ಹೊಂದಿದ ಮಹಿಳೆಯೊಬ್ಬಳು ಕ್ಷಯ ರೋಗದ ಭಯದಿಂದ ತಪಾಸಣೆಗೆಂದು ಆಸ್ಪತ್ರೆಗೆ ಹೋದಾಗ ಆಕೆಗೆ ಶಾಕ್​ ಒಂದು ಎದುರಾಗಿತ್ತು.

    ಇದನ್ನೂ ಓದಿರಿ: Web Exclusive | ಪ್ರತಿಧ್ವನಿಸಿದ ಬಂಡೀಪುರ ರಾತ್ರಿ ಸಂಚಾರ ನಿಷೇಧ; ತಮಿಳುನಾಡು ಚುನಾವಣೆಯಲ್ಲಿ ಅಸ್ತ್ರವಾಗಿ ಬಳಕೆ..

    ಶಾಲಾ ಶಿಕ್ಷಕಿಯಾಗಿರುಬ ಮಹಿಳೆ, ತಾನು ಕ್ಷಯ ರೋಗದಿಂದ ಬಳಲುತ್ತಿರುವುದಾಗಿ ಭಾವಿಸಿದ್ದಳು. ಆಸ್ಪತ್ರೆಗೆ ಭೇಟಿ ನೀಡಿದಾಗ ತಪಾಸಣೆ ನಡೆಸಿದ ವೈದ್ಯರು ಕ್ಷಯ ರೋಗ ಕುರಿತು ಅನೇಕ ಪರೀಕ್ಷೆಗಳನ್ನು ಮಾಡಿಸಿದಾಗ ಯಾವುದರಲ್ಲೂ ಪಾಸಿಟಿವ್​ ಬರದಿರುವುದನ್ನು ಗಮನಿಸಿದ್ದಾರೆ. ಬಳಿಕ ಸಮಸ್ಯೆ ಏನಿರಬಹುದು ಎಂದು ತಿಳಿಯಲು ಎಕ್ಷ್​ರೇ ಮಾಡಿಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ.

    ಆರಂಭದಲ್ಲಿ ಅದು ಕಾಂಡೋಮ್​ ಎಂದು ಗೊತ್ತಾಗಿಲ್ಲ. ಯಾವುದೋ ಸಣ್ಣ ಪ್ಯಾಕೆಟ್​ ರೀತಿಯಲ್ಲಿ ಶ್ವಾಸಕೋಶದಲ್ಲಿ ಸಿಲುಕಿರುವುದನ್ನು ನೋಡಿದ್ದಾರೆ. ಬಳಿಕ ವೈದ್ಯರು ಆಪರೇಷನ್​ ಮೂಲಕ ಪ್ಯಾಕೆಟ್​ ರೀತಿಯ ವಸ್ತುವನ್ನು ತೆಗೆದಾಗಲೇ ಗೊತ್ತಾಗಿದ್ದು, ಅದು ಕಾಂಡೋಮ್​ ಎಂದು. ಇದನ್ನು ತಿಳಿದ ಮಹಿಳೆಗೂ ಸಹ ಒಮ್ಮೆ ಆಘಾತವಾಗಿದೆ.

    ಕಾಂಡೋಮ್​ ಹೇಗೆ ಶ್ವಾಸಕೋಶದೊಳಗೆ ಹೋಯಿತು ಎಂಬುದನ್ನು ತಿಳಿಯಲು ಮಹಿಳೆ ಮತ್ತು ಆಕೆಯ ಪತಿಯನ್ನು ವಿಚಾರಿಸಿದಾಗ, ಮೌಖಿಕ ಲೈಂಗಿಕತೆ (ಒರಲ್​ ಸೆಕ್ಸ್​) ವೇಳೆ ಕಾಂಡೋಮ್​ ಮಹಿಳೆಯ ಬಾಯಿಯೊಳಗೆ ಸೇರಿದೆ. ಲೈಂಗಿಕ ಕ್ರಿಯೆ ನಡೆಸುವ ಸಮಯದಲ್ಲಿ ಕಾಂಡೋಮ್​ ಸಡಿಲವಾಗಿತ್ತು ಎಂದು ತಿಳಿಸಿದ್ದಾರೆ. ಇದರಿಂದಲೇ ಅನೇಕ ದಿನಗಳವರೆಗೆ ಕೆಮ್ಮು ಮತ್ತು ಸೀನು ಆಗಾಗ ಬರುತ್ತಿತ್ತು ಎಂದು ದಂಪತಿ ವೈದ್ಯರ ಮುಂದೆ ಬಿಚ್ಚಿಟ್ಟಿದ್ದಾರೆ.

    ಇದನ್ನೂ ಓದಿರಿ: ಪ್ರಿಯಕರನ ಮರ್ಮಾಂಗ ಕತ್ತರಿಸಿ ಟಾಯ್ಲೆಟ್​ ಕಮೋಡ್​ನಲ್ಲಿ ಬೀಸಾಡಿ ಪೊಲೀಸರಿಗೆ ಶರಣಾದ ಪ್ರೇಯಸಿ!

    ವೈದ್ಯರಿಗೆ ಹೇಗೆ ಹೇಳುವುದು ಎಂಬ ಮುಜುಗರದಿಂದ ದಂಪತಿ ಈವರೆಗೂ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಯಾವಾಗ ಆರೋಗ್ಯದಲ್ಲಿ ತೀವ್ರ ಪರಿಣಾಮ ಬೀರಿತೋ ಆವಾಗ ತಪಾಸಣೆ ನಡೆಸಿದ್ದಾರೆ. ಶ್ವಾಸಕೋಶದಲ್ಲಿರುವುದು ಕಾಂಡೋಮ್​ ಎಂದು ತಿಳಿದಾಗ ಇನ್ನು ಮುಚ್ಚಿಟ್ಟರೆ ಪ್ರಯೋಜನವಿಲ್ಲ ಎಂದು ಕೊನೆಗೂ ಸತ್ಯವನ್ನು ದಂಪತಿ ಒಪ್ಪಿಕೊಂಡಿದ್ದಾರೆ.

    ಸದ್ಯ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು ಯಾವುದೇ ಪ್ರಾಣಾಪಾಯ ಇಲ್ಲ. ಆದರೆ, ಇನ್ನುಳಿದ ಕಾಂಡೋಮ್​ ತುಂಡುಗಳನ್ನು ತೆಗೆಯಲು ಮಹಿಳೆ ಮತ್ತೆ ಆಪರೇಷನ್​ಗೆ ಒಳಗಾಗಬೇಕಾದ ಸನ್ನಿವೇಶ ಎದುರಾಗಿದ್ದು, ವೈದ್ಯರ ತಪಾಸಣೆ ಮುಂದುವರಿದಿದೆ. (ಏಜೆನ್ಸೀಸ್​)

    ಗುಟ್ರ್ ಗೂ ಗಾನವಿ: ವೇಶ್ಯೆ ಪಾತ್ರದಲ್ಲಿ ಗಮನ ಸೆಳೆದ ಜಾನಕಿ

    ಕ್ಲಾಸ್​ಮೇಟ್​ ಫೋನ್​ ನಂಬರ್​ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆನ್​ಲೈನ್​ ಕ್ಲಾಸ್​ ಹೆಸರಲ್ಲಿ ಮಾಡಿದ್ದು ನೀಚ ಕೃತ್ಯ!

    ಆರ್‌ಸಿಬಿಗೂ ತಟ್ಟಿದ ಕೋವಿಡ್-19, ದೇವದತ್ ಪಡಿಕಲ್‌ಗೆ ವೈರಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts