More

    ಮುಖ್ಯ ರಸ್ತೆ ಕುಸಿತ ಭೀತಿ, ಅಪಾಯದಲ್ಲಿ ಕೊಳಚಿಕಂಬಳ ಗ್ರಾಮಸ್ಥರು

    ಭಾಗ್ಯವಾನ್ ಸನಿಲ್ ಮೂಲ್ಕಿ

    ಮೂಲ್ಕಿ ಪೇಟೆಯಿಂದ ಕೊಳಚಿಕಂಬಳ ಗ್ರಾಮಕ್ಕೆ ಹೋಗುವ ಏಕೈಕ ಮುಖ್ಯರಸ್ತೆ ಕುಸಿಯುತ್ತಿರುವ ಪರಿಣಾಮ ಸಾರ್ವಜನಿಕರು ಭೀತಿ ವ್ಯಕ್ತಪಡಿಸಿದ್ದಾರೆ.

    ಕೊಳಚಿಕಂಬಳಕ್ಕೆ ಹೋಗುವ ಮೊದಲು ಕಟ್ಟದಂಗಡಿ ಬಳಿ ರಸ್ತೆ ಕುಸಿದಿದ್ದು, ರಸ್ತೆ ಮುಂದುವರಿದಂತೆ ಹೊಂಡ ಗುಂಡಿಗಳು ಈ ರಸ್ತೆಯಲ್ಲಿ ಹೋಗುವವರಿಗೆ ಅಪಾಯಕಾರಿಯಾಗಿದೆ.

    ರಸ್ತೆಯ ಎರಡೂ ಕಡೆ ಕೆರೆಗಳಿದ್ದು, ಅದರಲ್ಲಿ ಮೀನು ಸಾಕುತ್ತಿರುವ ಕಾರಣ ಬಲೆಗಳನ್ನು ಅಳವಡಿಸಲಾಗಿದೆ. ಬಲೆಯ ರಕ್ಷಣೆ ಇರುವ ಕಾರಣ ಜೀವಕ್ಕೆ ಅಪಾಯ ಉಂಟಾಗದು. ಆದರೆ ವಾಹನದಲ್ಲಿ ಪ್ರಯಾಣಿಸುವ ಸಂದರ್ಭ ನಿಯಂತ್ರಣ ತಪ್ಪಿದರೆ ಪ್ರಾಣಾಪಾಯ ಗ್ಯಾರಂಟಿ.

    ಬೀದಿದೀಪ ಸಮಸ್ಯೆ: ಈ ಪ್ರದೇಶದಲ್ಲಿ ಬೀದಿದೀಪಗಳ ಸಮಸ್ಯೆಯಿದ್ದು, ರಾತ್ರಿ ರಸ್ತೆಯ ಬದಿಗೆ ಬಂದರೆ ತಡೆಗೋಡೆ ಇಲ್ಲದ ಕಾರಣ ನೀರಿನ ಅಪಾಯವಿದೆ. ರಸ್ತೆ ಮಧ್ಯದಲ್ಲೇ ಕುಸಿದಿರುವ ಕಾರಣ ವಾಹನಗಳು ನಿಯಂತ್ರಣ ಕಳೆದುಕೊಳ್ಳುವುದು ಸಾಮಾನ್ಯ. ಶಾಲೆಗೆ ಹೋಗುವ ಅಥವಾ ವಾಪಸ್ ಮನೆಗೆ ಬರುವ ಮಕ್ಕಳಿಗೆ ಈ ಪ್ರದೇಶ ಅಪಾಯಕಾರಿ.

    ಹೊರ ಪ್ರದೆೇಶದ ಜನರಿಗೆ ಅಪಾಯ: ಕೊಳಚಿಕಂಬಳದಲ್ಲಿ ಸರ್ಪ್ ಕ್ಲಬ್ ಬೀಚ್ ವಿಹಾರ ತಾಣಗಳು ಆರಂಭಗೊಂಡಿದ್ದು, ಹೊರಪ್ರದೇಶದ ಜನರು ಇಲ್ಲಿಗೆ ಆಗಮಿಸುತ್ತಾರೆ. ಭಾನುವಾರ ಇಲ್ಲಿ ಜನ ನಿಭಿಡತೆ ಜಾಸ್ತಿ. ಈ ಪ್ರದೇಶದಲ್ಲಿ ಪಂಚಾಯಿತಿ ಉದ್ಯಾನವೂ ಇದ್ದು ಇಲ್ಲಿಗೆ ಬರುವವರಿಗೆ ರಸ್ತೆ ಕುಸಿತ ಸಮಸ್ಯೆಯಾಗಿ ಪರಿಣಮಿಸಿದೆ. ವಸತಿ ಸಂಕೀರ್ಣಗಳು ಹಾಗೂ ಬಹಳಷ್ಟು ಜನ ಸಮೂಹ ವಾಸಿಸುವ ಈ ಪ್ರದೇಶದ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಪಂಚಾಯಿತಿ ಗಮನ ರಿಸುವುದು ಬಹಳ ಅಗತ್ಯ.

    ಹೆಚ್ಚಿನ ಕಡೆ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿದ್ದರೂ ಕೊಳಚಿಕಂಬಳ ಬಹಳಷ್ಟು ಜನ ವಾಸಿಸುವ ಪ್ರದೇಶವಾಗಿದ್ದರೂ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳಿಂದ ನಿರ್ಲಕ್ಷಿಸಲ್ಪಟ್ಟ ಪ್ರದೇಶವಾಗಿದೆ. ಈಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸುವುದು ಬಹಳ ಅಗತ್ಯ.

    ಶೇಖರ್ ಕೊಳಚಿಕಂಬಳ
    ಸ್ಥಳೀಯ ನಿವಾಸಿ

    ಈ ಭಾಗದಲ್ಲಿ ರಸ್ತೆಯನ್ನು ಸ್ವಲ್ಪ ಮಟ್ಟಿಗೆ ಎತ್ತರಿಸಿ ಎರಡೂ ಕಡೆ ಗೋಡೆ ನಿರ್ಮಿಸಿ ಅಭಿವೃದ್ಧಿ ಪಡಿಸಬೇಕಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.

    ಚಂದ್ರ ಪೂಜಾರಿ
    ಮುಖ್ಯಾಧಿಕಾರಿ ಮೂಲ್ಕಿ ನಗರ ಪಂಚಾಯಿತಿ

    ರಸ್ತೆ ಹೊಂಡವನ್ನು ತಾತ್ಕಾಲಿವಾಗಿ ಮುಚ್ಚಲಾಗುವುದು. ಬಳಿಕ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಪ್ರಯತ್ನಿಸಲಾಗುವುದು.

    ಸತೀಶ್ ಅಂಚನ್
    ಮೂಲ್ಕಿ ನಗರ ಪಂಚಾಯಿತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts