More

    ಕಡವಿನಬಾಗಿಲು ರಸ್ತೆ ನದಿ ಪಾಲಾಗುವ ಭೀತಿ

    ಮೂಲ್ಕಿ: ಪಡುಪಣಂಬೂರು ಹೊಯ್ಗೆಗುಡ್ಡೆ-ಕದಿಕೆಯಲ್ಲಿ ನದಿ ಬದಿ ಮೂಲಕ ಚಿತ್ರಾಪು ಮತ್ತು ಸಸಿಹಿತ್ಲು ಸಂಪರ್ಕಿಸುವ ನೇರ ಸಂಪರ್ಕ ರಸ್ತೆಗೆ ಕಡವಿನಬಾಗಿಲು ಸಮೀಪ ನಂದಿನಿ ನದಿಯ ಬದಿ ಕಟ್ಟಲಾಗಿರುವ ತಡೆಗೋಡೆ ಕುಸಿಯುತ್ತ ಬಂದಿದ್ದು ರಸ್ತೆ ನೀರು ಪಾಲಾಗುವ ಭೀತಿ ಉಂಟಾಗಿದೆ.

    2015ರಲ್ಲಿ ರಸ್ತೆ ನಿರ್ಮಾಣವಾಗಿದ್ದು, ತಡೆಗೋಡೆ ಬೇರೆ ಬೇರೆ ಕಡೆ ಹಲವು ಬಾರಿ ಕುಸಿದಿದೆ. ಪ್ರಸಕ್ತ ಕುಸಿದಿರುವ ತಡೆಗೋಡೆ ಕಳೆದ ವರ್ಷವೇ ಬಿರುಕು ಬಿಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಬಿರುಕು ಹೆಚ್ಚಾಗಿದ್ದು ಮೊನ್ನೆಯ ಮಳೆಗೆ ಮತ್ತಷ್ಟು ಕುಸಿದು ಅಪಾಯಕಾರಿಯಾಗಿದೆ. ಈ ರಸ್ತೆ ಕದಿಕೆ-ಹೊಯ್ಗೆಗುಡ್ಡೆ ಪ್ರದೇಶದ ಜೀವನಾಡಿಯಾಗಿದ್ದು, ಚಿತ್ರಾಪು ಮತ್ತು ಸಸಿಹಿತ್ಲು ಸಂಪರ್ಕಕ್ಕೆ ಪ್ರಮುಖ ಕೊಂಡಿ.

    ಈ ಪ್ರದೇಶದಲ್ಲಿ ಮಕ್ಕಳು ಆಟವಾಡಲು ಬರುತ್ತಿದ್ದು ಸಾಯಂಕಾಲ ದಂಡೆಯಲ್ಲಿ ಕುಳಿತುಕೊಳ್ಳುವುದು ಸಾಮಾನ್ಯ. ರಾತ್ರಿ ಮೀನಿಗೆ ಗಾಳ ಹಾಕುವವರು, ಅಮಲು ವ್ಯಸನಿಗಳು ಕೂಡ ಈ ದಂಡೆಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಸಂದರ್ಭ ಏಕಾಏಕಿ ಕುಸಿದರೆ ಪ್ರಾಣಾಪಾಯವಾದೀತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಂದಿನಿ ನದಿಯ ಪ್ರವಾಹದಲ್ಲಿ ಡಾಂಬರು ರಸ್ತೆ ಕೊಚ್ಚಿ ಹೋಗುವ ಮುನ್ನ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಹೊಯ್ಗೆಗುಡ್ಡೆ, ಕದಿಕೆ, ಚಿತ್ರಾಪು, ಸಸಿಹಿತ್ಲು, ಹಳೆಯಂಗಡಿ, ಪಡುಪಣಂಬೂರಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಮುದ್ರ ಹಾಗೂ ನದಿ ದಂಡೆಗಳ ಸೂಕ್ತ ಭದ್ರತೆಗಾಗಿ ಮೀನುಗಾರಿಕಾ ಸಚಿವರಲ್ಲಿ ಮನವಿ ನೀಡಲಾಗಿದೆ. ಅತಿ ಶೀಘ್ರವಾಗಿ ಇಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು.

    ಉಮಾನಾಥ ಕೋಟ್ಯಾನ್
    ಮೂಲ್ಕಿ -ಮೂಡುಬಿದಿರೆ ಶಾಸಕರು
    ಮೀನುಗಾರಿಕಾ ಇಲಾಖೆ ಇಂಜಿನಿಯರ್ ಈ ಪ್ರದೇಶ ಪರಿಶೀಲಿಸಿದ್ದು ಸಂಪೂರ್ಣ ದಂಡೆ ಮರು ನಿರ್ಮಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗುವುದು.
    ವಿನೋದ್ ಬೊಳ್ಳೂರು
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts