More

    ಕರಾವಳಿ ಕಾವಲು ಪಡೆ ಎಸ್ಪಿ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ !

    ಉಡುಪಿ: ಪೊಲೀಸ್ ಅಧಿಕಾರಿಗಳ ಹೆಸರಲ್ಲಿ‌ ದುಷ್ಕರ್ಮಿಗಳು ನಕಲಿ ಫೇಸ್ಬುಕ್ ಖಾತೆಗಳನ್ನು ತೆರೆದು ವಂಚಿಸುತ್ತಿರುವ ಘಟನೆ ಅಲ್ಲಲ್ಲಿ ವರದಿಯಾಗುತ್ತಿದೆ. ಇದೀಗ ಕರಾವಳಿ ಪೊಲೀಸ್ ಪಡೆ ಎಸ್ಪಿ ಚೇತನ್ ಅವರ ಹೆಸರಲ್ಲಿ ನಕಲಿ ಖಾತೆಯನ್ನು ತೆರೆದಿದ್ದಾರೆ. ಶುಕ್ರವಾರ ಅವರ ಭಾವಚಿತ್ರಗಳನ್ನು ಬಳಸಿಕೊಂಡು ಮಲ್ಪೆ ಕರಾವಳಿ ಕಾವಲು ಪಡೆ ಎಸ್ಪಿ, ಎಸ್ಪಿ ಸಿಂಗ್ ಎಂದು ಐಪಿಎಸ್ ಅಧಿಕಾರಿ ಎಂದು ಪ್ರೊಫೈಲ್ ಡಿಟೈಲ್ಸ್ ಬರೆಯಲಾಗಿದೆ.

    ನನ್ನ ಹೆಸರಲ್ಲಿ ಫೇಸ್ಬುಕ್ ಖಾತೆ ತೆರೆದಿರುವುದು ಗಮನಕ್ಕೆ ಬಂದ ತಕ್ಷಣವೇ ಬೆಂಗಳೂರು ಸೈಬರ್ ಸೆಲ್, ಸ್ಥಳೀಯ ಪೊಲಿಸರಿಗೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರು ಈ ಬಗ್ಗೆ ಜಾಗ್ರತೆ ವಹಿಸವೇಕು.
    – ಚೇತನ್ , ಎಸ್ಪಿ .‌ಕರಾವಳಿ ಕಾವಲು ಪೊಲಿಸ್ ಪಡೆ.

    ನಕಲಿ ಖಾತೆ ತೆರೆದ ಅರ್ಧ ಗಂಟೆಯಲ್ಲಿಯೇ ಎಸ್ಪಿ ಚೇತನ್ ಕುಮಾರ್ ಅವರಿಗೆ ಮಾಹಿತಿ ಲಭಿಸಿದ್ದು ಕೂಡಲೇ ಸ್ಥಳೀಯ ಮತ್ತು ಬೆಂಗಳೂರು ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ ಅಲ್ಲದೆ ಫೇಸ್ ಬುಕ್ ಗೂ ದೂರು ನೀಡಿದ್ದಾರೆ. ಚೇತನ್ ಅವರು, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರಕನ್ನಡ ಜಿಲ್ಲೆ ಒಳಗೊಂಡು ಕಾರ್ಯಚರಿಸುತ್ತಿರುವ ಕರಾವಳಿ ಕಾವಲು‌ಪಡೆಯ ಅಧೀಕ್ಷಕರಾಗಿದ್ದಾರೆ. ಇದರ ಕೆಂದ್ರ ಕಚೇರಿ ಮಲ್ಪೆಯಲ್ಲಿದೆ‌.

    ಇದನ್ನೂ ಓದಿ: ಕೆಂಪಿರುವೆ-ಚಿಟ್ಟೆಹುಳು ಸಹಬಾಳ್ವೆ!, ಉಡುಪಿಯಲ್ಲಿ ಪ್ರಕೃತಿ ವಿಸ್ಮಯ ಗುರುತಿಸಿದ ಚಿಟ್ಟೆ ಅಧ್ಯಯನಕಾರರು

    ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಆನ್ಲೈನ್ ಖದೀಮರು, ಪರಿಚಿತರಿಗೆ ಮೆಸೆಂಜರ್ ಮೂಲಕ ಸಂದೇಶ ಕಳುಹಿಸುವುದು ಹಣಕ್ಕಾಗಿ ಬೆದರಿಸುವುದು. ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಅಲ್ಲಲ್ಲಿ ವರದಿಯಾಗಿದೆ. ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ತಿಳಿಸಿದ್ದಾರೆ.

    ಕೋಸಿ ರೈಲು ಮಹಾಸೇತು ಲೋಕಾರ್ಪಣೆ ನೆರವೇರಿಸಿದ್ರು ಪ್ರಧಾನಿ ಮೋದಿ: ಏನಿದರ ವಿಶೇಷತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts