More

    ಕೋಸಿ ರೈಲು ಮಹಾಸೇತು ಲೋಕಾರ್ಪಣೆ ನೆರವೇರಿಸಿದ್ರು ಪ್ರಧಾನಿ ಮೋದಿ: ಏನಿದರ ವಿಶೇಷತೆ?

    ಲಖನೌ: ಐತಿಹಾಸಿಕ ಕೋಸಿ ರೈಲು ಮಹಾಸೇತುವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದ್ದಾರೆ. ಇದೇ ವೇಳೆ, ಬಿಹಾರದ ಪ್ರಯಾಣಿಕರ ಸೌಲಭ್ಯಕ್ಕಾಗಿ ಕಿಯುಲ್ ನದಿಯ ಹೊಸ ರೈಲ್ವೆ ಸೇತುವೆ ಸೇರಿ 12 ಹೊಸ ರೈಲು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ಪೈಕಿ ಎರಡು ಹೊಸ ರೈಲ್ವೆ ಮಾರ್ಗ, 5 ವಿದ್ಯುದ್ದೀಕರಣ ಯೋಜನೆ, ಒಂದು ಎಲೆಕ್ಟ್ರಿಕ್ ಲೋಕೋಮೋಟಿವ್ ಶೆಡ್​, ಬಾರ್ಹ್-ಬಕ್ತಿಯಾರ್ಪುರದ ನಡುವಿನ 3ನೇ ಮಾರ್ಗದ ಯೋಜನೆಗಳು ಸೇರಿಕೊಂಡಿವೆ.

    ಬಿಹಾರ ಮತ್ತು ಈಶಾನ್ಯ ರಾಜ್ಯಗಳ ಮಹತ್ವದ ಕೊಂಡಿ ಕೋಸಿ ರೈಲು ಮಹಾಸೇತು. ನಿರ್ಮಾಲಿ ಮತ್ತು ಭಪ್ತಿಯಾಹಿ (ಸರಾಯಿಗಢ್) ನಡುವೆ 1887ರಲ್ಲಿ ಮೀಟರ್​ಗೇಜ್ ಲಿಂಕ್ ನಿರ್ಮಿಸಲಾಗಿತ್ತು. 1934ರ ಭಾರಿ ಪ್ರವಾಹ ಮತ್ತು ತೀವ್ರ ಇಂಡೋ ನೇಪಾಳ ಭೂಕಂಪದ ಸಂದರ್ಭದಲ್ಲಿ, ರೈಲು ಸಂಪರ್ಕ ತೊಳೆದುಕೊಂಡು ಹೋಗಿತ್ತು. ಕೋಸಿ ನದಿಯ ಈ ಸ್ವಭಾವದ ಕಾರಣದಿಂದಾಗಿ ಈ ರೈಲು ಸಂಪರ್ಕವನ್ನು ದೀರ್ಘಕಾಲದವರೆಗೆ ಪುನಃಸ್ಥಾಪಿಸಲು ಯಾವುದೇ ಪ್ರಯತ್ನ ನಡೆದಿರಲಿಲ್ಲ.

    ಇದನ್ನೂ ಓದಿ: ಚೀನಾ ಔಷಧ ಕಂಪೆನಿಯಿಂದ ಸೋರಿಕೆ: ಪುರುಷರ ಕಾಡಲಿದೆ ಈ ಮಹಾಮಾರಿ ಬ್ಯಾಕ್ಟೀರಿಯಾ!

    ಕೋಸಿ ರೈಲು ಮಹಾಸೇತು ಲೋಕಾರ್ಪಣೆ ನೆರವೇರಿಸಿದ್ರು ಪ್ರಧಾನಿ ಮೋದಿ: ಏನಿದರ ವಿಶೇಷತೆ?ಕೋಸಿ ಮೆಗಾ ಬ್ರಿಡ್ಜ್ ಲೈನ್ ಯೋಜನೆಯನ್ನು 2003-04ರ ಅವಧಿಯಲ್ಲಿ ಭಾರತ ಸರ್ಕಾರ ಮಂಜೂರು ಮಾಡಿತು. ಕೋಸಿ ರೈಲು ಮಹಾಸೇತು ಉದ್ದ 1.9 ಕಿ.ಮೀ ಮತ್ತು ಅದರ ನಿರ್ಮಾಣ ವೆಚ್ಚ 516 ಕೋಟಿ ರೂಪಾಯಿ. ಭಾರತ-ನೇಪಾಳ ಗಡಿಯಲ್ಲಿನ ಈ ಸೇತುವೆ ಆಯಕಟ್ಟಿನದ್ದಾಗಿದೆ. ಈ ಯೋಜನೆಯ ಸಮರ್ಪಣೆಯ ಮೂಲಕ 86 ವರ್ಷದ ಕನಸು ಮತ್ತು ಪ್ರದೇಶದ ಜನರ ಬಹುನಿರೀಕ್ಷೆ ಪೂರೈಕೆಯಾಗುತ್ತಿದೆ.

    ಇದನ್ನೂ ಓದಿ: ಗಂಡನ ಮನೆಗೆ ಕನ್ನ ಹಾಕಿ ನಟಿ ಎಸ್ಕೇಪ್​: ಪತಿರಾಯ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು?

    ಇದಲ್ಲದೆ, ಪ್ರಧಾನಮಂತ್ರಿಯವರು ಸಹಸಾರ್ಸಾ- ಅಸಾನ್ಪುರ್ ಕುಫಾ ಡೆಮೊ ರೈಲನ್ನು ಸುಪಾಲ್ ನಿಲ್ದಾಣದಿಂದ ಚಾಲನೆ ನೀಡುತ್ತಾರೆ. ನಿಯತ ರೈಲು ಸೇವೆ ಪ್ರಾರಂಭವಾಗುತ್ತಿದ್ದಂತೆ ಇದು ಸುಪಾಲ್, ಅರಾರಿಯಾ ಮತ್ತು ಸಹರ್ಸಾ ಜಿಲ್ಲೆಗಳ ಜನತೆಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಇದು ಪ್ರದೇಶದ ಜನರಿಗೆ ಕೋಲ್ಕತಾ, ದೆಹಲಿ ಮತ್ತು ಮುಂಬೈಗೆ ದೂರ ಪ್ರಯಾಣದ ಅಂತರವನ್ನು ಕಡಿಮೆ ಮಾಡುತ್ತದೆ.

    ಪಿಯುಸಿ ನಂತರ ಮುಂದೇನು?: ವೆಬಿನಾರ್ ಮಾರ್ಗದರ್ಶನ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts