ಮಲತಾಯಿಯಿಂದಲೇ ಕೊಲೆಗೆ ಸುಪಾರಿ; ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣ, ಮಹಿಳೆಯ ಬಂಧನ..

blank
blank

ಬೆಂಗಳೂರು: ಕಳೆದೆರಡು ದಿನಗಳಿಂದ ಕುತೂಹಲ ಮೂಡಿಸಿದ್ದ ಮಾಜಿ ಸಿಎಂ ಧರ್ಮಸಿಂಗ್ ಅವರ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದ್ದು, ಮಲತಾಯಿಯಿಂದಲೇ ಕೊಲೆಗೆ ಸುಪಾರಿ ನೀಡಲಾಗಿರುವ ವಿಷಯ ಬಹಿರಂಗಗೊಂಡಿದೆ. ಕೊಲೆಗೆ ಸುಪಾರಿ ನೀಡಿರುವ ಮಲತಾಯಿಯನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆಯೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿಗಾಗಿ ತೀವ್ರವಾಗಿ ತನಿಖೆಯನ್ನೂ ನಡೆಸಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ದಿ. ಧರ್ಮಸಿಂಗ್ ಸಂಬಂಧಿ ನಾಪತ್ತೆ, 13 ದಿನವಾದರೂ ಸಿಕ್ಕಿಲ್ಲ ಉದ್ಯಮಿ ಸುಳಿವು

ಸಿದ್ಧಾರ್ಥ್ ಅವರ ತಂದೆ ದೇವೇಂದರ್ ಸಿಂಗ್ ಅವರಿಗೆ ಎರಡು ಮದುವೆಯಾಗಿದ್ದು, ಎರಡನೇ ಹೆಂಡತಿ ಸಿದ್ಧಾರ್ಥ್ ಕೊಲೆಗಾಗಿ ಶ್ಯಾಮ್​ ಹಾಗೂ ವಿನೋದ್ ಎಂಬುವವರಿಗೆ ಸುಪಾರಿ ನೀಡಿದ್ದರು. ಸುಪಾರಿ ಮೇರೆಗೆ ಸಿದ್ಧಾರ್ಥ್​ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಆದರೆ ಕೊಲೆ ಮಾಡಿರುವವರ ಪೈಕಿ ಪ್ರಮುಖ ಆರೋಪಿ ಶ್ಯಾಮ್​ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿ ಕೊಲೆಗೆ ಸುಪಾರಿ ನೀಡಿದ್ದಾಗಿ ಆರೋಪಿ ಮಹಿಳೆ ಒಪ್ಪಿಕೊಂಡಿದ್ದು, ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.

ಮಾಜಿ ಸಿಎಂ ದಿ. ಧರ್ಮಸಿಂಗ್​‌ ಸಂಬಂಧಿ ಕೊಲೆ, 10 ದಿನದ ಬಳಿಕ ಪ್ರಕರಣ ಬಯಲು

ಮಾಜಿ ಸಿಎಂ ದಿ. ಧರ್ಮಸಿಂಗ್ ಸಂಬಂಧಿಯನ್ನ ಕೊಂದವ ತಿರುಪತಿಯಲ್ಲಿ ಆತ್ಮಹತ್ಯೆ!

ಸಿನಿಮಾ ಕಥೆಯಂತೆ ರೋಚಕ ತಿರುವು ಪಡೆಯುತ್ತಿರುವ ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಮರ್ಡರ್ ಮಿಸ್ಟರಿ!

Share This Article

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…

ಈ ಅಭ್ಯಾಸಗಳು ನಿಮ್ಮನ್ನು ಎಂದಿಗೂ ಶ್ರೀಮಂತರಾಗಲು ಬಿಡುವುದಿಲ್ಲ, ಅವುಗಳನ್ನು ತಕ್ಷಣ ಬಿಟ್ಟುಬಿಡಿ | Chanakya Niti

Chanakya Niti: ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದೂ ಕರೆಯಲ್ಪಡುವ ಆಚಾರ್ಯ ಚಾಣಕ್ಯ ಅವರು ತಮ್ಮ…