More

    ಅಪ್ಪನ ವಿಕೃತಿ ನೊಂದ ಬಾಲಕಿ, ಮುಗಿಲು ಮುಟ್ಟಿದ ಕಂದನ ಆಕ್ರಂದನ!

    ಅಹಮದಾಬಾದ್​: ಲೈಂಗಿಕ ವಿಕೃತ ಮನೋಭಾವದ ಅಪ್ಪನೊಬ್ಬ ಮೆರೆದ ವಿಕೃತಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ನಿರಂತರವಾಗಿ ರಕ್ತಸ್ರಾವವಾಗುತ್ತಿರುವ ಹಿನ್ನೆಲೆಯಲ್ಲಿ ಆ ಕಂದನ ಆಕ್ರಂದನ ಮುಗಿಲು ಮುಟ್ಟಿದೆ.

    ಲೈಂಗಿಕ ವಿಕೃತಿಗೆ ಒಳಗಾಗಿರುವ 35 ವರ್ಷದ ವ್ಯಕ್ತಿ ತನ್ನ 5 ವರ್ಷದ ಪುತ್ರಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆಯ ಗುಪ್ತಾಂಗದಲ್ಲಿ ಮರದ ತುಂಡನ್ನು ತುರುಕಲು ಯತ್ನಿಸಿದ್ದಾನೆ. ಇದರಿಂದಾಗಿ ಆ ಬಾಲಕಿಯ ಗುಪ್ತಾಂಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗುತ್ತಿದೆ.

    ಗುಜರಾತ್​ನ ಸೋಲಾ ಬಡಾವಣೆಯಲ್ಲಿರುವ ಕೊಳೆಗೇರಿಯೊಂದರ ನಿವಾಸಿ ಈ ಕೃತ್ಯ ಎಸಗಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಅತ್ಯಾಚಾರದ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಬೈಕ್ ಮಧ್ಯೆ ಅಪಘಾತ, ಓರ್ವ ಸಾವು

    ಈ ವ್ಯಕ್ತಿಗೆ ಸಂತ್ರಸ್ತ ಬಾಲಕಿಯಲ್ಲದೆ ಮೂರು ಹೆಣ್ಣುಮಕ್ಕಳಿದ್ದಾರೆ. ದಿನಗೂಲಿ ಮಾಡುವ ಈತ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಸೋಲಾ ಬಡಾವಣೆಯ ಕೊಳೆಗೇರಿಯಲ್ಲಿ ವಾಸವಾಗಿದ್ದ. ಈತ ಲೈಂಗಿಕ ವಿಕೃತಿ ಹೊಂದಿದ್ದು, ಈ ಹಿಂದೆ ಮೂವರು ಪುತ್ರಿಯರ ಮೇಲೂ ಅತ್ಯಾಚಾರ ಎಸಗಲು ಯತ್ನಿಸಿದ್ದ. ಇದನ್ನು ಗ್ರಹಿಸಿದ ಪತ್ನಿ ತಕ್ಷಣವೇ ಎಚ್ಚೆತ್ತುಕೊಂಡು ತನ್ನ ಮಕ್ಕಳನ್ನು ಪಾರು ಮಾಡಿದ್ದಳು. ಆದರೆ, ಪೊಲೀಸರಿಗೆ ದೂರು ಕೊಟ್ಟಿರಲಿಲ್ಲ.

    ಆದರೆ ಶುಕ್ರವಾರದಂದು ಈತ ತನ್ನ 5 ವರ್ಷದ ಪುತ್ರಿಯನ್ನು ಕರೆದುಕೊಂಡು ಮನೆಯಿಂದ ಹೊರಹೋಗಿದ್ದ. ಬಳಿಕ ಆ ಮಗುವಿನ ಗುಪ್ತಾಂಗದೊಳಗೆ ಮರದ ತುಂಡನ್ನು ತೂರಿಸಲು ಯತ್ನಿಸಿ ವಿಕೃತಿ ಮರೆದಿದ್ದ. ತೀವ್ರವಾದ ರಕ್ತಸ್ರಾವ ಆಗಲಾರಂಭಿಸಿದ ಬಳಿಕ ಆ ಮಗುವನ್ನು ಮನೆಗೆ ಕರೆತಂದು ಏನೂ ಗೊತ್ತಿಲ್ಲದವನಂತೆ ನಟಿಸುತ್ತಾ ಪರಾರಿಯಾಗಿದ್ದಾನೆ.

    ಇದನ್ನೂ ಓದಿ: ಗೋಮಾಂಸ ಅಂಗಡಿ ಮೇಲೆ ದಾಳಿ, ಮೂವರು ಆರೋಪಿಗಳು ಸ್ಥಳದಿಂದ ಪರಾರಿ

    ದಿನಗೂಲಿ ಹುಡುಕಿಕೊಂಡು ಹೊರಹೋಗಿದ್ದ ಈತನ ಪತ್ನಿ ಸಂಜೆ ಮನೆಗೆ ಮರಳಿದ ಬಳಿಕ ಪುಟ್ಟ ಬಾಲಕಿಯಲ್ಲಿ ತೀವ್ರ ರಕ್ತಸ್ರಾವವಾಗುತ್ತಿರುವುದನ್ನು ಕಂಡಳು. ವಿಚಾರಿಸಿದಾಗ ತನ್ನ ತಂದೆ ಈಕೆಯನ್ನು ಸ್ವಲ್ಪಹೊತ್ತು ಹೊರಗೆ ಕರೆದುಕೊಂಡು ಹೋಗಿದ್ದಾಗಿ 9 ವರ್ಷದ ಪುತ್ರಿ ತಿಳಿಸಿದ್ದಳು.

    ಇದರಿಂದ ಬೆದರಿದ ಆಕೆ ತಕ್ಷಣವೇ ಮಗುವನ್ನು ಸೋಲಾದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪುತ್ರಿಯನ್ನು ದಾಖಲಿಸಿದ್ದಳು. ಇದೀಗ ವೈದ್ಯರು ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಆಕೆಯ ಸ್ಥಿತಿ ಸ್ಥಿರವಾಗಿರುವುದಾಗಿ ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತಲೆಮರೆಸಿಕೊಂಡಿರುವ ಲೈಂಗಿಕ ವಿಕೃತನಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

    ಭಾರತವನ್ನು ಹಣಿಯಲು ಹೊಸ ಪ್ರಹಸನ ಆರಂಭಿಸಿದ ಚೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts