More

    ಭಾರತವನ್ನು ಹಣಿಯಲು ಹೊಸ ಪ್ರಹಸನ ಆರಂಭಿಸಿದ ಚೀನಾ

    ನವದೆಹಲಿ: ಜಾಗತಿಕ ಶಕ್ತಿಯಾಗಿ ಬೆಳೆಯುವ ತನ್ನ ಮಹತ್ವಾಕಾಂಕ್ಷೆಗೆ ಭಾರತ ಬಹುದೊಡ್ಡ ಅಡ್ಡಿ ಎಂಬುದು ಚೀನಾಕ್ಕೆ ಈಗಾಗಲೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತವನ್ನು ಹಣಿಯಲು ಎಲ್ಲ ರೀತಿಯ ಸರ್ಕಸ್​ಗಳನ್ನು ಆರಂಭಿಸಿದೆ.

    ಈಗಾಗಲೆ ಪಾಕಿಸ್ತಾನವನ್ನು ತನ್ನ ಅಡಿಯಾಳನ್ನಾಗಿ ಮಾಡಿಕೊಂಡಿರುವ ಚೀನಾ, ನೇಪಾಳವನ್ನೂ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಬಾಂಗ್ಲಾದೇಶವನ್ನು ತನ್ನೆಡೆಗೆ ಸೆಳೆಯಲು ಅದು ಪ್ರಯತ್ನಗಳನ್ನು ಆರಂಭಿಸಿದೆ.

    ಜೂ.15ರಂದು ಗಲ್ವಾನ್​ ಕಣಿವೆಯಲ್ಲಿ ಭಾರತದ ಭೂಭಾಗವನ್ನು ಅತಿಕ್ರಮಿಸಿಕೊಳ್ಳುವ ತನ್ನ ಯತ್ನಕ್ಕೆ ಭಾರತೀಯ ಯೋಧರಿಂದ ಪ್ರಬಲ ಪ್ರತಿರೋಧ ವ್ಯಕ್ತವಾದ ನಂತರದಲ್ಲಿ ಚೀನಾ ಸ್ವಲ್ಪ ಹಿನ್ನಡೆಗೆ ಒಳಗಾಗಿದೆ. ಬಾಂಗ್ಲಾದೇಶದ ನೆರವನ್ನೂ ಪಡೆದು, ಅತ್ತ ಪಾಕಿಸ್ತಾನ, ಇತ್ತ ನೇಪಾಳವನ್ನು ಬಳಸಿಕೊಂಡು ಭಾರತವನ್ನು ಹಣಿಯಬೇಕು ಎಂಬ ಸಂಚು ರೂಪಿಸಿಕೊಂಡಿದೆ.

    ಇದನ್ನೂ ಓದಿ: ಯೋಧರ ಬಲಿದಾನವನ್ನು ರಾಜಕೀಯಕರಣಗೊಳಿಸಬೇಡಿ; ರಾಹುಲ್​ ಗಾಂಧಿಗೆ ಯೋಧರ ತಂದೆಯ ಮನವಿ

    ಗಲ್ವಾನ್​ ಕಣಿವೆಯ ಘರ್ಷಣೆಗೆ ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು, ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಚೀನಾವನ್ನು ಆರ್ಥಿಕವಾಗಿ ಹಣಿಯಬೇಕು ಎಂದು ಭಾರತ ಪ್ರಯತ್ನಮುಖಿಯಾಗಿದೆ. ಇದೇ ವೇಳೆ ಡ್ರ್ಯಾಗನ್​, ಚೀನಾದಿಂದ ಬಾಂಗ್ಲಾದೇಶ ಆಮದು ಮಾಡಿಕೊಳ್ಳುವ 5,161 ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.97 ಕಡಿಮೆ ಮಾಡುವುದಾಗಿ ಹೇಳಿ ಬಾಂಗ್ಲಾದೇಶವನ್ನು ಓಲೈಸಲು ಪ್ರಯತ್ನಿಸಲಾರಂಭಿಸಿದೆ.

    ಇದಕ್ಕೂ ಮುನ್ನ, ತಾನು ಅಷ್ಟೇನು ಅಭಿವೃದ್ಧಿ ಹೊಂದಿಲ್ಲದ ರಾಷ್ಟ್ರವಾಗಿರುವುದರಿಂದ, ತಾನು ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಬಾಂಗ್ಲಾದೇಶ ಚೀನಾಕ್ಕೆ ಮನವಿ ಮಾಡಿಕೊಂಡಿತ್ತು. ಅದರ ಈ ಮನವಿಗೆ ಜೂ.16ರಂದು ಚೀನಾ ಸಮ್ಮತಿಸಿದೆ.

    ಇದನ್ನೂ ಓದಿ: ಸಂದೇಶವೇನು ಇಲ್ಲ, ನಾವು ಉತ್ತರ ಕೊಡೋಕೆ ಸಜ್ಜಾಗಿದ್ದೇವೆ; ಚೀನಾಗೆ ವಾಯುಸೇನೆ ಎಚ್ಚರಿಕೆ

    ಏಷ್ಯಾ-ಪೆಸಿಫಿಕ್​ ವ್ಯಾಪಾರ ಒಪ್ಪಂದದನ್ವಯ ಚೀನಾದಿಂದ ಬಾಂಗ್ಲಾದೇಶ ಆಮದು ಮಾಡಿಕೊಳ್ಳುವ 3,095 ಉತ್ಪನ್ನಗಳು ತೆರಿಗೆ ಮುಕ್ತವಾಗಿವೆ. ಇದೀಗ ಈ ಪಟ್ಟಿಗೆ 5,161 ಉತ್ಪನ್ನಗಳು ಸೇರ್ಪಡೆಗೊಳ್ಳಲಿವೆ.

    ಭಾರತದೊಂದಿಗೆ ಆಪ್ತ ಸಂಬಂಧ ಹೊಂದಿರುವ ಬಾಂಗ್ಲಾದೇಶ ಇದುವರೆಗೂ ಚೀನಾದೊಂದಿಗೆ ಅಂತರ ಕಾಯ್ದುಕೊಂಡಿತ್ತು. ಆದರೆ, ಭಾರತದಲ್ಲಿ ಕಳೆದ ವರ್ಷ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೆ ಬಂದ ನಂತರದಲ್ಲಿ ಭಾರತದೊಂದಿಗೆ ಬಾಂಗ್ಲಾದೇಶ ಮುನಿಸಿಕೊಂಡಿದೆ. ಇದೀಗ ಚೀನಾ ಇದರ ಲಾಭ ಪಡೆಯಲು ಯತ್ನಿಸುತ್ತಿದೆ.

    ‘ಗಲ್ವಾನ್ ಚೀನಾದ್ದಲ್ಲ, ಭಾರತದ್ದು…ಅದಕ್ಕೆ ಪುರಾವೆ ಇದೆ’: ಕಣಿವೆ ಅನ್ವೇಷಿಸಿದವರ ಮರಿ ಮೊಮ್ಮಗನ ಮಾತುಗಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts