More

    ಬೆಂಗಳೂರಿನಲ್ಲಿ ನಾರಾಯಣ ಮೂರ್ತಿ, ಮಗಳು ಅಕ್ಷತಾ ಸುಧಾ ಮೂರ್ತಿ ಪುಸ್ತಕ ಹುಡುಕಾಟ!

    ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಮತ್ತು ಅವರ ಮಗಳು ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರು ಒಟ್ಟಿಗೆ ಕುಳಿತು ಐಸ್‌ಕ್ರೀಂ ಸವಿಯುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ:ಮಾವಿನ ಮರದಡಿ ಕಲ್ಲಿರಿಸಿ ಮಕ್ಕಳೇ ನಂಬಿದ ಮಹಮ್ಮಾಯಿ: ಮುಂಡ್ಕೂರು ಕಜೆಯಲ್ಲಿ ಮಹಿಮೆ ತೋರಿಸಿದಳು

    ಇದೀಗ ಬೆಂಗಳೂರಿನ ರಾಘವೇಂದ್ರ ಮಠದ ರಸ್ತೆಯಲ್ಲಿ ತಮ್ಮ ಪುತ್ರಿ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ನ ಫರ್ಸ್ಟ್‌ ಲೇಡಿ ಅಕ್ಷತಾ ಮೂರ್ತಿ ಅವರ ಜೊತೆ ರಸ್ತೆಯಲ್ಲಿ ಪುಸ್ತಕಗಳನ್ನು ಖರೀದಿಸುವ ಸಲುವಾಗಿ ತಿರುಗಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

    ಈ ವೇಳೆ ಅಕ್ಷತಾ ಮೂರ್ತಿ ಅವರ ಇಬ್ಬರು ಪುತ್ರಿಯರಾದ ಅನುಷ್ಕಾ ಹಾಗೂ ಕೃಷ್ಣಾ ಕೂಡ ಜೊತೆಯಲ್ಲಿದ್ದಾರೆ. ಕುಟುಂಬ ಸಮೇತರಾಗಿ ಮಠದ ರಸ್ತೆಯಲ್ಲಿ ಪುಸ್ತಕಗಳನ್ನು ಪರಿಶೀಲಿಸುತ್ತಿರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಹಾಗೂ ವೈರಲ್​ ಆಗುತ್ತಿದೆ. ಕಳೆದ ವಾರ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಜೀವನ ಚರಿತ್ರೆ ಬಿಡುಗಡೆಗಾಗಿ ಅಕ್ಷತಾ ಮೂರ್ತಿ ಮತ್ತು ಮಕ್ಕಳು ಬೆಂಗಳೂರಿಗೆ ಬಂದಿದ್ದರು.
    ಆಗರ್ಭ ಶ್ರೀಮಂತರಾಗಿದ್ದರು ಯಾವುದೇ ಭಯವೂ ಇಲ್ಲದೆ ಬೆಂಗಳೂರಿನ ಬೀದಿಗಳಲ್ಲಿ ಸುತ್ತಾಡಿದ್ದಾರೆ.

    ಸಿಂಪಲ್​ ಡ್ರೆಸ್‌ನಲ್ಲಿ ಭದ್ರತೆಯ ಸುಳಿವೂ ಇಲ್ಲದಂತೆ ಇಡೀ ಕುಟುಂಬ ಮಠದ ರಸ್ತೆಯಲ್ಲಿ ತಮ್ಮ ಸಮಯ ಕಳೆದಿದ್ದು ಅಚ್ಚರಿಕೆ ಕಾರಣವಾಗಿದೆ.
    ಯುನೈಟೆಡ್‌ ಕಿಂಗ್‌ಡಮ್‌ ಪ್ರಧಾನಿ ರಿಷಿ ಸುನಕ್‌ ಅವರ ಪತ್ನಿ ಹಾಗೂ ಮಕ್ಕಳು ರಾಘವೇಂದ್ರ ಮಠದ ರಸ್ತೆಯಲ್ಲಿ ಕಂಡಿದ್ದು ಹೀಗೆ. ಇವರೊಂದಿಗೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡ ಇದ್ದರು. ಎಕ್ಸ್‌ ಬಳಕೆದಾರರಾದ ಎಂಆರ್‌ ಗುರುಪ್ರಸಾದ್‌ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡು ಬರೆದಿದ್ದಾರೆ.

    ಇತ್ತೀಚೆಗೆ ಬೆಂಗಳೂರಿನ ಜಯನಗರದಲ್ಲಿರುವ ಕಾರ್ನರ್ ಹೌಸ್‌ನಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಮತ್ತು ಅವರ ಮಗಳು ಅಕ್ಷತಾ ಮೂರ್ತಿ ಒಟ್ಟಿಗೆ ಕುಳಿತು ಐಸ್‌ಕ್ರೀಂ ಸವಿಯುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

    ಇನ್‌ಸ್ಟಾಗ್ರಾಮ್‌ನಲ್ಲಿ 1 ಲಕ್ಷ ಫಾಲೋವರ್ಸ್ ಹೊಂದಿದ್ದ ಪತ್ನಿಯನ್ನು ಗುಂಡು ಹಾರಿಸಿ ಕೊಂದ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts