More

    ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ನಿರಶನ

    ಸವಣೂರ: ಪಟ್ಟಣದ 22ನೇ ವಾರ್ಡ್​ನ ದೊಡ್ಡಕೆರೆ ದಂಡೆಯಲ್ಲಿರುವ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಪದಾಧಿಕಾರಿಗಳು, ಸಾರ್ವಜನಿಕರು ಕಂದಾಯ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.

    ದೊಡ್ಡಕೆರೆ ದಂಡೆಯಲ್ಲಿ ಗುಡಿಸಲು, ಮನೆ ನಿರ್ವಿುಸಿಕೊಂಡು 30 ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಸ್ಥಳೀಯ ಆಡಳಿತ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಪ್ರತಿಕ್ರಿಯಿಸಿ, ಸೌಲಭ್ಯ ಕಲ್ಪಿಸುವ ಕುರಿತು ಪುರಸಭೆ ಮುಖ್ಯಾಧಿಕಾರಿ, ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳೊಂದಿಗೆ ರ್ಚಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಅದಕ್ಕೊಪ್ಪದ ಪ್ರತಿಭಟನಾಕಾರರು, ಸೌಲಭ್ಯ ಒದಗಿಸುವ ಆದೇಶ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.

    ಸಂಘಟನೆ ತಾಲೂಕು ಘಟಕ ಅಧ್ಯಕ್ಷ ಮುನ್ನಾ ಗೌಡಗೇರಿ, ಪದಾಧಿಕಾರಿಗಳಾದ ಮಾಲತೇಶ ಗೌಡಗೇರಿ, ಚಿತ್ತಲಮ್ಮ ಶಿಗ್ಲಿ, ಶ್ರೀನಿವಾಸ ಅರಸನಾಳ, ನಾಗರಾಜ ಹರಿಜನ, ಪರಶುರಾಮ ಕುರಿ, ಮಹ್ಮದ್​ಸಲೀಂ ಇನಾಮದಾರ, ಈರಣ್ಣ ದೇಸಾಯಿ, ಅಬ್ದುಲ್​ಗಪಾರ ಪಠಾಣ, ಫಕೀರಪ್ಪ ಹರಿಜನ, ಕರವೇ ತಾಲೂಕಾಧ್ಯಕ್ಷ ಪರಶುರಾಮ ಈಳಗೇರ, ರಾಮಣ್ಣ ಅಗಸರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts