More

    ವಾಹನಗಳಿಗೆ ಫಾಸ್ಟ್ಯಾಗ್​ ಇಲ್ಲದಿದ್ದರೆ ಥರ್ಡ್​ ಪಾರ್ಟಿ ಇನ್ಶುರೆನ್ಸ್​ ಸಿಗೋದಿಲ್ಲ…!

    ನವದೆಹಲಿ: ವಾಹನಗಳಿಗೆ ಫಾಸ್ಟ್ಯಾಗ್​ ಇಲ್ಲದಿದ್ದರೆ ಥರ್ಡ್​ ಪಾರ್ಟಿ ಇನ್ಶೂರೆನ್ಸ್​ ಸೌಲಬ್ಯ ಸೀಗೋದಿಲ್ಲ…!

    ಹೌದು… ಕೇಂದ್ರ ಸರ್ಕಾರ ಇಂಥದ್ದೊಂದು ನಿಯಮ ಜಾರಿಗೆ ತರಲು ಮುಂದಾಗಿದೆ. ಇದು 2021ರ ಏಪ್ರಿಲ್​ನಿಂದ ಜಾರಿಗೆ ಬರಲಿದೆ.

    ಟೋಲ್​ ಪ್ಲಾಜಾಗಳಲ್ಲಿ ವಾಹನಗಳ ಸಂಚಾರವನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿರುವ ಎಲೆಕ್ಟ್ರಾನಿಕ್​ ಶುಲ್ಕ ಪಾವತಿ ವಿಧಾನವನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಜತೆಗೆ, ಟೋಲ್​ಗೆ ಸಂಬಂಧಿಸಿದ ರಿಯಾಯ್ತಿಗಳನ್ನು ಪಡೆಯಬೇಕಾದರೆ ಫಾಸ್ಟ್ಯಾಗ್​ ಹೊಂದಿರಲೇಬೇಕೆಂದು ನಿಯಮ ಮಾಡಲಾಗಿದೆ.

    ಇದನ್ನೂ ಓದಿ; ಕರೊನಾ; ಭಾರತದಲ್ಲಿ ಪ್ರತಿದಿನ ಸೃಷ್ಟಿಯಾಗುತ್ತಿದೆ ಒಂದು ‘ಚೀನಾ’…! 

    ಮೂರನೇ ವ್ಯಕ್ತಿಯ ವಿಮಾ ಸೌಲಭ್ಯವನ್ನು ಕಲ್ಪಿಸಲು ಫಾಸ್ಟ್ಯಾಗ್​ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಇದಕ್ಕಾಗಿ ವಿಮಾ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ವಿಮಾ ಪ್ರಮಾಣಪತ್ರದಲ್ಲಿಯೇ ಫಾಸ್ಟ್ಯಾಗ್​ ಐಡಿ ವಿವರಗಳನ್ನು ನೀಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಉದ್ದೇಶಿತ ತಿದ್ದುಪಡಿಗಾಗಿ ಸಂಬಂಧಪಟ್ಟವರಿಂದ ಸಲಹೆ ಹಾಗೂ ಆಕ್ಷೇಪಗಳನ್ನು ಆಹ್ವಾನಿಸಲಾಗಿದೆ. ಇದನ್ನು ಪರಿಗಣಿಸಿ ಅಗತ್ಯ ಮಾರ್ಪಾಡುಗಳೊಂದಿಗೆ ಕಾಯ್ದೆ ಜಾರಿಗೆ ಬರಲಿದೆ.

    ಇದನ್ನೂ ಓದಿ; ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…! 

    ಇದಲ್ಲದೇ, 2021ರ ಜನವರಿಯಿಂದ ಅನ್ವಯವಾಗುವಂತೆ 2017ರ ಡಿಸೆಂಬರ್​ಗೂ ಮುನ್ನ ಮಾರಾಟವಾದ ಎಲ್ಲ ನಾಲ್ಕು ಚಕ್ರಗಳ ವಾಹನಗಳಿಗೂ ಫಾಸ್ಟ್ಯಾಗ್​ ಕಡ್ಡಾಯ ಮಾಡಲಿದೆ. ಕೇಂದ್ರ ಸರ್ಕಾರ 2017ರ ಡಿಸೆಂಬರ್​ ನಂತರ ಮಾರಾಟವಾದ ವಾಹನಗಳಿಗೆ ಫಾಸ್ಟ್ಯಾಗ್​ ಕಡ್ಡಾಯಗೊಳಿಸಿದೆ.

    ಅಕ್ಟೋಬರ್​ ಅಂತ್ಯಕ್ಕೆ ಕರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ; 50 ರಾಜ್ಯಗಳಿಗೆ ಸೂಚನೆ ನೀಡಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts