More

    ಕರೊನಾ; ಭಾರತದಲ್ಲಿ ಪ್ರತಿದಿನ ಸೃಷ್ಟಿಯಾಗುತ್ತಿದೆ ಒಂದು ‘ಚೀನಾ’…!

    ನವದೆಹಲಿ: ಲಾಕ್​ಡೌನ್​ ಅವಧಿಯಲ್ಲಿ ಭಾರತದಲ್ಲಿ ಕರೊನಾ ಸೋಂಕು ವ್ಯಾಪಿಸುವುದು ನಿಯಂತ್ರಣದಲ್ಲಿದೆ ಎಂದೇ ಹೇಳಲಾಗುತ್ತಿತ್ತು. ದೇಶದ ಜನಸಂಖ್ಯೆಗೆ ಹೋಲಿಸಿದಲ್ಲಿ ಇಲ್ಲಿರುವ ಕೋವಿಡ್​ ರೋಗಿಗಳ ಸಂಖ್ಯೆ ತೀರಾ ಕಡಿಮೆ ಎಂದೇ ವ್ಯಾಖ್ಯಾನ ಮಾಡಲಾಗುತ್ತಿತ್ತು. ಜತೆಗೆ, ಬೇರೆ ದೇಶಗಳು ಭಾರತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿವೆ ಎಂಬುದಕ್ಕೂ ಭಾರಿ ಪ್ರಚಾರ ಸಿಕ್ಕಿತ್ತು.

    ಆದರೆ, ಹಂತಹಂತವಾಗಿ ನಿರ್ಬಂಧಗಳು ಸಡಿಲವಾಗುತ್ತಿದ್ದಂತೆ ಕರೊನಾ ಇನ್ನಿಲ್ಲದ ವೇಗದಲ್ಲಿ ಹೆಚ್ಚಾಗುತ್ತಿದೆ. ಕಳೆದ ಡಿಸೆಂಬರ್​ನಿಂದ ಇಲ್ಲಿಯವರೆಗೆ ಚೀನಾದಲ್ಲಿ ಕಂಡುಬಂದ ಪ್ರಕರಣಗಳ ಸಂಖ್ಯೆ ನಮ್ಮಲ್ಲಿ ಒಂದೇ ದಿನಕ್ಕೆ ಕಾಣಿಸಿಕೊಳ್ಳುತ್ತಿದೆ….!

    ಇದನ್ನೂ ಓದಿ; ಚೀನಾ ಬಸ್​​ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ? 

    ಚೀನಾದಲ್ಲಿ ಆರಂಭದಿಂದ ಇಲ್ಲಿಯವರೆಗೆ 85,000 ಸೋಂಕಿತರಿದ್ದರೆ, ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 84 ಸಾವಿರ ಹೊಸ ಕೇಸ್​ಗಳು ಪತ್ತೆಯಾಗಿವೆ. ಜತೆಗೆ ಸತತ ಎರಡನೇ ದಿನವೂ 80 ಸಾವಿರಕ್ಕೂ ಅಧಿಕ ಕೇಸ್​ಗಳು ವರದಿಯಾಗಿವೆ.

    ಇದಲ್ಲದೇ, ಆಗಸ್ಟ್​ನಿಂದಲೇ ಭಾರತದಲ್ಲಿ ಪ್ರತಿದಿನ ವರದಿಯಾಗುತ್ತಿರುವ ಕೇಸ್​​ಗಳ ಸಂಖ್ಯೆ ಜಗತ್ತಿನಲ್ಲಿಯೇ ಅತ್ಯಧಿಕವಾಗಿದೆ. ಆಗಸ್ಟ್​ ತಿಂಗಳೊಂದರಲ್ಲಿಯೇ 20 ಲಕ್ಷ ಹೊಸ ಕೇಸ್​ಗಳು ದೇಶದಲ್ಲಿ ಕಂಡುಬಂದಿವೆ. ಸದ್ಯ ಭಾರತದಲ್ಲಿನ ಸೋಂಕಿತರ ಸಂಖ್ಯೆ 38.53 ಲಕ್ಷಕ್ಕೂ ಹೆಚ್ಚಾಗಿದೆ.

    ಮಾರ್ಚ್​ನಲ್ಲಿ ವಿಶ್ವಭೂಪಟದಲ್ಲಿ ಎಲ್ಲೋ ಇದ್ದ ಭಾರತ, ಕೇಸ್​ಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನಕ್ಕೆ ಬಂದಿದೆ. ಕೆಲ ದಿನಗಳಲ್ಲಿ ಬ್ರೆಜಿಲ್ಅನ್ನು ಮೀರಿಸಲಿದೆ. ಹಾಗೂ ಇದೇ ವೇಗದಲ್ಲಿ ಮುಂದುವರಿದರೆ ಅಮೆರಿಕವನ್ನು ಮೀರಿಸಿ 1.3 ಕೋಟಿ ಕೇಸ್​ಗಳು ವರದಿಯಾಗುವ ಸಾಧ್ಯತೆಗಳಿವೆ ಎಂದು ಐಐಎಸ್​ಸಿ ಲೆಕ್ಕಾಚಾರ ಹಾಕಿದೆ.

    ಇದನ್ನೂ ಓದಿ; ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!

    ಚೀನಾದಲ್ಲಿ ಲಾಕ್​ಡೌನ್​ ಜಾರಿಯಲ್ಲಿದ್ದಾಗ ಭಾರತದಲ್ಲಿ ಒಂದೂ ಪ್ರಕರಣಗಳಿರಲಿಲ್ಲ. ಅಲ್ಲಿ ಅನ್​ಲಾಕ್​ ಶುರುವಾದಾಗ ಭಾರತದಲ್ಲಿ ಲಾಕ್​ಡೌನ್​ ಮಾಡಲಾಗುತ್ತಿತ್ತು. ಅಲ್ಲಿ ಲಾಕ್​ಡೌನ್​​ನಿಂದಾಗಿ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದರೆ, ಇಲ್ಲಿ ಅನ್​ಲಾಕ್​ ಶುರುವಾಗುತ್ತಿದ್ದಂತೆ ಕರೊನಾ ತಾಂಡವ ಶುರುವಾಗಿದೆ. ದಿನಕ್ಕೊಂದು ಚೀನಾ ಸೃಷ್ಟಿಯಾಗುತ್ತಿದೆ. ಸದ್ಯ ಕರೊನಾ ಅತ್ಯಂತ ದೊಡ್ಡ ಮೂಲವೆಂದರೆ ಭಾರತ ಮಾತ್ರ.

    ಅಕ್ಟೋಬರ್​ ಅಂತ್ಯಕ್ಕೆ ಕರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ; 50 ರಾಜ್ಯಗಳಿಗೆ ಸೂಚನೆ ನೀಡಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts