More

    ಫಾಸ್ಟ್ಯಾಗ್​ ಇದ್ದರೆ ಓಕೆ, ಇಲ್ಲ ಅಂದ್ರೆ ನಾಳೆಯಿಂದ ಡಬಲ್​ ಟೋಲ್​! ಸರ್ಕಾರದ ಹೊಸ ಆದೇಶ

    ನವದೆಹಲಿ: ನಿಮ್ಮ ಗಾಡಿಗೆ ಫಾಸ್ಟ್ಯಾಗ್​ ಹಾಕಿಸಿಕೊಂಡಿದ್ದೀರಾ? ಹಾಕಿಸಿಕೊಂಡಿದ್ದರೆ ಓಕೆ, ಇಲ್ಲವಾದರೆ ನಾಳೆಯಿಂದ ಡಬಲ್​ ಟೋಲ್​ ಕಟ್ಟಲು ನೀವು ಸಿದ್ಧರಾಗಿ. ಏಕೆಂದರೆ ಕೇಂದ್ರ ಸರ್ಕಾರವು ಈ ಕುರಿತಾಗಿ ಹೊಸ ಆದೇಶವೊಂದನ್ನು ಪ್ರಕಟಿಸಿದ್ದು, ನಾಳೆಯಿಂದ ಫಾಸ್ಟ್ಯಾಗ್​ ಕಡ್ಡಾಯ ಎನ್ನುವ ನಿಯಮ ಜಾರಿಯಲ್ಲಿರಲಿದೆ.

    ನಾಳೆಯಿಂದ ಎಲ್ಲ ಹೆದ್ದಾರಿಗಳ ಟೋಲ್​ ಲೇನ್​ಗಳನ್ನು ಫಾಸ್ಟ್ಯಾಗ್​ ಲೇನ್​ಗಳಾಗಿ ಬದಲಾಯಿಸಲಾಗುವುದು. ಈಗಾಗಲೇ ಎಲ್ಲ ಟೋಲ್​ಗಳಲ್ಲಿ ಲೇನ್​ಗಳನ್ನು ಫಾಸ್ಟ್ಯಾಗ್​ ಲೇನ್​ಗಳಾಗಿ ಬದಲಾಗಿಸಲಾಗಿದ್ದು, ಕೇವಲ ಒಂದು ಲೇನ್​ನ್ನು ಫಾಸ್ಟ್ಯಾಗ್​ ಇಲ್ಲದವರಿಗಾಗಿ ಬಿಡಲಾಗಿತ್ತು. ಆದರೆ ಫೆಬ್ರವರಿ 15ರ ಮಧ್ಯ ರಾತ್ರಿಯಿಂದ ಎಲ್ಲ ಲೇನ್​ಗಳು ಫಾಸ್ಟ್ಯಾಗ್​ ಲೇನ್​ಗಳಾಗಿ ಕೆಲಸ ಮಾಡಲಿವೆ.

    ಒಂದು ವೇಳೆ ನೀವು ಇನ್ನೂ ಫಾಸ್ಟ್ಯಾಗ್​ ಹಾಕಿಸಿಕೊಂಡಿಲ್ಲ ಎನ್ನುವುದಾದರೆ, ನಾಳೆ ಮಧ್ಯ ರಾತ್ರಿಯಿಂದ ಪ್ರತಿ ಟೋಲ್​ನಲ್ಲಿ ಟೋಲ್​ ಹಣದ ದುಪ್ಪಟ್ಟು ಹಣವನ್ನು ಶುಲ್ಕವನ್ನಾಗಿ ಕಟ್ಟಿ ಹೋಗಬೇಕಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಅನ್ವಯ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. (ಏಜೆನ್ಸೀಸ್​)

    ‘ಮೊಮ್ಮಗಳ ಆಸೆಗಾಗಿ ಮನೆ ಮಾರಿದೆ, ಈಗ ಈ ಆಟೋದಲ್ಲೇ ನನ್ನ ಜೀವನ’ ಕಣ್ಣೀರು ತರಿಸುತ್ತೆ ಈ ಅಜ್ಜನ ಕಥೆ

    ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts