More

    ಏರಿಕೆಯಾಗದ ಫಾಸ್ಟ್​ಟ್ಯಾಗ್​ ಪಾವತಿ ಕಡ್ಡಾಯಗೊಳಿಸಿದರೂ ಪ್ರಯೋಜನವಿಲ್ಲ; ನಗದು ಪಾವತಿಯೇ ಹೆಚ್ಚು! 

    ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್​ಟ್ಯಾಗ್​ ಮೂಲಕ ಟೋಲ್ ಪಾವತಿ ಕಡ್ಡಾಯಗೊಳಿಸಿದರೂ ಶುಲ್ಕ ಸಂಗ್ರಹ ಪ್ರಮಾಣ ಏರಿಕೆಯಾಗಿಲ್ಲ. ಫಾಸ್ಟ್​ಟ್ಯಾಗ್​ಗಿಂಥ ಮೊದಲು ಸಂಗ್ರಹವಾಗುತ್ತಿದ್ದಷ್ಟೇ ನಗದು ರೂಪದಲ್ಲಿ ಶುಲ್ಕ ವಸೂಲಿಯಾಗಿದೆ.

    ಟೋಲ್​ಪ್ಲಾಜಾಗಳಲ್ಲಿ ಒಂದು ಪಥವನ್ನು ಮಾತ್ರ ನಗದು ರೂಪದಲ್ಲಿ ಶುಲ್ಕ ಪಾವತಿಗೆ ಮೀಸಲಿರಿಸಲಾಗಿದ್ದು, ಉಳಿದ ಪಥಗಳಲ್ಲಿ ಫಾಸ್ಟ್​ಟ್ಯಾಗ್​ ಸ್ಟಿಕ್ಕರ್ ಹೊಂದಿರುವ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇಷ್ಟಾದರೂ ರಾಜ್ಯದಲ್ಲಿ ಫಾಸ್ಟ್​ಟ್ಯಾಗ್​ನಿಂದ ಶುಲ್ಕ ಪಾವತಿ ಪ್ರಮಾಣ ಹೆಚ್ಚಾಗಿಲ್ಲ. ಫಾಸ್ಟಾ್ಯಗ್ ಕಡ್ಡಾಯವಾಗಿಸಿದ ನಂತರದ ಎರಡು ದಿನಗಳಲ್ಲಿ ಹಿಂದಿನ ಪ್ರಮಾಣದಲ್ಲೇ ಟೋಲ್ ಸಂಗ್ರಹವಾಗಿದೆ.

    ಸರಾಸರಿ 5 ಕೋಟಿ ರೂ. ಸಂಗ್ರಹ: ರಾಜ್ಯದಲ್ಲಿ ಒಟ್ಟು 36 ಟೋಲ್​ಪ್ಲಾಜಾಗಳಿವೆ. ಅವುಗಳಲ್ಲಿ ಸರಾಸರಿ ದಿನಕ್ಕೆ 5 ಕೋಟಿ ರೂ. ಟೋಲ್ ಪಾವತಿಯಾಗುತ್ತಿದೆ. ಅದರಲ್ಲಿ ನಗದು ಮತ್ತು ಫಾಸ್ಟಾ್ಯಗ್ ಮೂಲಕ ಶುಲ್ಕ ಪಾವತಿಸಿದ್ದೂ ಸೇರಿದೆ.

    ಶೇ.60 ಫಾಸ್ಟ್​ಟ್ಯಾಗ್​: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶದಂತೆ ಜ. 16ರಿಂದ ಫಾಸ್ಟಾ್ಯಗ್ ಮೂಲಕ ಟೋಲ್​ಶುಲ್ಕ ಪಾವತಿ ಕಡ್ಡಾಯವಾಗಿಸಲಾಗಿದೆ. ಕಡ್ಡಾಯಗೊಳಿಸಿದ ನಂತರವೂ ಟೋಲ್​ಶುಲ್ಕ ಪಾವತಿಯಲ್ಲಿ ಹೆಚ್ಚಳವಾಗಿಲ್ಲ. ಜ.16 ಮತ್ತು 17ರಲ್ಲಿ ಫಾಸ್ಟ್​ಟ್ಯಾಗ್​ ಮೂಲಕ ಶುಲ್ಕ ಪಾವತಿಸಿದ ಪ್ರಮಾಣ ಹಿಂದಿನಷ್ಟೇ ಇದೆ. ಜ.16ರಂದು 4.68 ಕೋಟಿ ರೂ. ಟೋಲ್​ವಸೂಲಿಯಾಗಿತ್ತು. ಅದರಲ್ಲಿ 2.8 ಕೋಟಿ ರೂಪಾಯಿ ಫಾಸ್ಟಾ್ಯಗ್ ಮೂಲಕ ಪಾವತಿಯಾಗಿತ್ತು. ಜ.17ರಂದು 4.54 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗಿದ್ದು, 2.7 ಕೋಟಿ ರೂಪಾಯಿ ಫಾಸ್ಟಾ್ಯಗ್​ನಿಂದ ವಸೂಲಿಯಾಗಿರುವುದು. ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಫಾಸ್ಟಾ್ಯಗ್​ನಿಂದ ಶುಲ್ಕ ವಸೂಲಿ ಪ್ರಮಾಣ ಶೇ.60 ದಾಟಿಲ್ಲ.

    ಶೇಕಡವಾರು ನಗದು ಹೆಚ್ಚು

    ಏರಿಕೆಯಾಗದ ಫಾಸ್ಟ್​ಟ್ಯಾಗ್​ ಪಾವತಿ ಕಡ್ಡಾಯಗೊಳಿಸಿದರೂ ಪ್ರಯೋಜನವಿಲ್ಲ; ನಗದು ಪಾವತಿಯೇ ಹೆಚ್ಚು! 

    ಟೋಲ್​ಪ್ಲಾಜಾಗಳಲ್ಲಿ ನಿಗದಿಯಾಗಿರುವ ಶುಲ್ಕದಲ್ಲಿ ಕಾರು, ಜೀಪುಗಳಿಗಿಂತ ಭಾರಿ ವಾಹನಗಳ ಶುಲ್ಕದ ಪ್ರಮಾಣ ಹೆಚ್ಚಿದೆ. ಅದರಲ್ಲಿ ಭಾರಿ ವಾಹನಗಳು ಹೆಚ್ಚಾಗಿ ನಗದು ರೂಪದಲ್ಲಿ ಶುಲ್ಕ ಪಾವತಿಸುವುದರಿಂದ ಫಾಸ್ಟ್​ಟ್ಯಾಗ್​ಗಿಂತ ನಗದು ರೂಪದಲ್ಲಿ ಹೆಚ್ಚಿನ ಶುಲ್ಕ ವಸೂಲಿಯಾಗುತ್ತಿದೆ ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ವಾದ. ಅದರಂತೆ ಜ.16ರಂದು ಶೇ.54 ಫಾಸ್ಟ್​ಟ್ಯಾಗ್​ನಿಂದ ಟೋಲ್ ಸಂಗ್ರಹವಾಗಿದ್ದರೆ, ಶೇ.60 ನಗದು ರೂಪದ್ದಾಗಿದೆ. ಅದರಂತೆ ಜ.17ರಂದು ಶೇ. 55 ಫಾಸ್ಟಾ್ಯಗ್ ಮತ್ತು ಶೇ. 60 ನಗದಿನ ಪ್ರಮಾಣವಾಗಿದೆ.

    7 ಟೋಲ್​ಗಳಲ್ಲಿ ವಿನಾಯಿತಿ

    ಬೆಂಗಳೂರು ಸುತ್ತಲಿನ 7 ಟೋಲ್​ಪ್ಲಾಜಾ ಸೇರಿ ದೇಶದ 65 ಟೋಲ್​ಪ್ಲಾಜಾಗಳಲ್ಲಿ ಸಂಚಾರದಟ್ಟಣೆ ನಿಯಂತ್ರಣಕ್ಕೆ ಬರದ ಕಾರಣ ಫಾಸ್ಟ್​ಟ್ಯಾಗ್​ ಶುಲ್ಕ ಪಾವತಿ ಪಥಗಳ ಪ್ರಮಾಣ ಹೆಚ್ಚಿಸಲಾಗಿದೆ. ಜ.16ರಿಂದ ಟೋಲ್​ಪ್ಲಾಜಾಗಳಲ್ಲಿ 1 ಪಥವನ್ನು ಮಾತ್ರ ನಗದು ಪಾವತಿಗೆ ನಿಗದಿ ಮಾಡಲಾಗಿತ್ತು. ಆದರೆ, ಬೆಂಗಳೂರು ಸುತ್ತಲಿನ ಸಾದಹಳ್ಳಿ, ಎಲೆಕ್ಟ್ರಾನಿಕ್ಸ್​ಸಿಟಿಯ ದೊಡ್ಡಕರೇನಹಳ್ಳಿ, ಹೊಸಕೋಟೆ, ಅತ್ತಿಬೆಲೆ, ಬೆಳ್ಳೂರು ಮತ್ತು ನೆಲಮಂಗಲ ಟೋಲ್​ಗಳಲ್ಲಿ ಶೇ.25 ಪಥಗಳನ್ನು ಫೆ.14ರವರೆಗೆ ನಗದು ಶುಲ್ಕ ಪಾವತಿಗೆ ಮೀಸಲಿರಿಸಿ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ.

    | ಗಿರೀಶ್ ಗರಗ ಬೆಂಗಳೂರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts