More

    ತಿಂಗಳು ತಡವಾಗಿ ಕೋಡಿಬಿದ್ದ ಮದಗದ ಕೆರೆ

    ಬೀರೂರು: ಕಡೂರು ತಾಲೂಕಿನ ಜೀವನಾಡಿ ಮದಗದ ಕೆರೆ ಶುಕ್ರವಾರ ಕೋಡಿ ಬಿದ್ದಿದ್ದು, ತಾಲೂಕಿನ ರೈತರ ಮುಖದಲ್ಲಿ ಸಂತಸ ಮೂಡಿಸಿದೆ.

    ವಾಡಿಕೆಯಂತೆ ಆಶ್ಲೇಷ ಮಳೆಗೆ ಕೋಡಿ ಬೀಳಬೇಕಾಗಿದ್ದ ಮದಗದ ಕೆರೆ ತಿಂಗಳು ತಡವಾಗಿ ಕೋಡಿ ಬಿದ್ದಿದೆ. ಮಹಾರಾಜರ ಕಾಲದಲ್ಲಿ ಸಣ್ಣದಾಗಿ ನಿರ್ವಿುಸಲಾದ ಮದಗದ ಕೆರೆ ಕಡೂರು ತಾಲೂಕಿನ 2036 ಹೆಕ್ಟೇರ್ ಕೃಷಿ ಭೂಮಿಗೆ ಜೀವನಾಡಿಯಾಗಿದೆ. ಬರಗಾಲದಲ್ಲಿಯೂ ರೈತರಿಗೆ ನೀರು ಒದಗಿಸುತ್ತಿದೆ. ಮಳೆ ಕೈಕೊಟ್ಟರೂ ಮದಗದ ಕೆರೆ ಕೆಂಚಮ್ಮ ಕೈ ಬಿಡುವುದಿಲ್ಲ ಎನ್ನುವ ವಾಡಿಕೆ ಇದೆ. ಈ ಕೆರೆ ತುಂಬಿ ಹರಿದರೆ ಕೋಡಿ ನೀರಿನಲ್ಲಿಯೇ ಹಳೇ ಮದಗದ ಕೆರೆ, ಬಾಕಿನಕೆರೆ, ದೇವನಕೆರೆ, ಚಿಕ್ಕಂಗಳಕೆರೆ, ಗಾಳೀಹಳ್ಳಿ ಕೆರೆ, ಹನುಮಾಪುರ ಕೆರೆ, ಚೆನ್ನನಹಳ್ಳಿ, ಬುಕ್ಕಸಾಗರ, ಬಿಸ್ಲೇಹಳ್ಳಿ, ಮಚ್ಚೇರಿ, ತಂಗಲಿ, ಯಳ್ಳಂಬಳಸೆ, ಗರ್ಜೆ ಗ್ರಾಮಗಳ ಕೆರೆಗಳು ತುಂಬುತ್ತವೆ. ಸಣ್ಣಪುಟ್ಟ ಕಟ್ಟೆ, ಹೊಂಡಗಳೂ ಭರ್ತಿಯಾಗುತ್ತವೆ. ಹೀಗೆ ತಾಲೂಕಿನ 35-40 ಗ್ರಾಮಗಳ ಕೆರೆಗಳನ್ನು ತುಂಬಿಸುತ್ತದೆ.

    ಮಂಗಳವಾರ, ಶುಕ್ರವಾರವೇ ವಿಶೇಷ : ಮದಗದ ಕೆರೆ ವಿಶೇಷವಾಗಿ ಮಂಗಳವಾರ ಅಥವಾ ಶುಕ್ರವಾರ ಮಾತ್ರ ಕೋಡಿ ಬೀಳುತ್ತದೆ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿದೆ. ಅದರಂತೆ ಈ ಬಾರಿಯೂ ಶುಕ್ರವಾರವೇ ಕೋಡಿಬಿದ್ದಿದೆ. ಅಡಕೆ ಮತ್ತು ತೆಂಗು ಬೆಳೆಗಾರರಿಗೆ ಜೀವನಾಡಿಯಾಗಿರುವ ಈ ಕೆರೆ ಮೈದುಂಬಿ ಹರಿಯುತ್ತಿರುವುದು ಈ ಭಾಗದ ಕೃಷಿಕರಲ್ಲಿ ಸಂತಸ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts