More

    ನದಿಗಳು ತುಂಬಿದ್ದರೂ ಜಮೀನಿಗೆ ನೀರಿಲ್ಲ! ಕರೆಂಟ್​ ಕಣ್ಣಾಮುಚ್ಚಾಲೆಯಿಂದ ರೈತರು ಕಂಗಾಲು

    ಯಾದಗಿರಿ : ಕರೆಂಟ್ ಕಣ್ಣಾಮುಚ್ಚಾಲೆಯಿಂದಾಗಿ ಯಾದಗಿರಿ ಜಿಲ್ಲೆಯ ರೈತರು ಕಂಗಾಲ್ ಆಗಿದ್ದಾರೆ. ಸಮರ್ಪಕ ವಿದ್ಯುತ್ ಪೊರೈಕೆ ಮಾಡದ ಜೆಸ್ಕಾಂ ಅಧಿಕಾರಗಳ ವಿರುದ್ಧ ಗರಂ ಆಗಿರುವ ಜಿಲ್ಲೆಯ ವಡಿಗೇರಾ ತಾಲೂಕಿನ ಬೆಂಡೆಗಂಬಳಿಯ ರೈತರು, ವಿದ್ಯುತ್ ವಿತರಣಾ ಕೇಂದ್ರ ಕಚೇರಿಗೆ ಮುತ್ತಿಗೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

    ಕೃಷ್ಣಾ ಮತ್ತು ಭೀಮಾ ನದಿ ಪಾತ್ರದಲ್ಲಿ ಸುಮಾರು 20,000 ಹೆಕ್ಟೇರ್​ನಷ್ಟು ಜಮೀನು ಇದೆ. ರೈತರು ಜಮೀನಿನಲ್ಲಿ ಭತ್ತ, ಹತ್ತಿ ಮತ್ತು ಇನ್ನಿತರ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಆದರೆ, ನದಿಗಳಲ್ಲಿ ಸಾಕಷ್ಟು ನೀರಿದ್ದರೂ ರೈತರಿಗೆ ನೀರು ಸಿಗುತ್ತಿಲ್ಲ. ವಿದ್ಯುತ್ ಸಮರ್ಪಕ ಪೂರೈಕೆ ಇಲ್ಲದೆ ನೀರು ಹಾಯಿಸಲಾಗದೆ ಬೆಳೆಗಳು ಒಣಗುತ್ತಿವೆ ಎಂದು ರೈತರು ಹೇಳಿದ್ದಾರೆ.

    ಇದನ್ನೂ ಓದಿ: ನರೇಂದ್ರ ಮೋದಿ ಸ್ಟೇಡಿಯಂ ಹೆಸರೂ ಬದಲಾಯಿಸಿ ಎಂದ ನೆಟ್ಟಿಗರು!

    ಬೆಳೆಗಳಿಗೆ ನೀರು ಪೊರೈಕೆ ಆಗಲು 7 ಗಂಟೆ ಸಮಯ ಬೇಕು. ಆದರೆ, ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ಜೆಸ್ಕಾಂ ಅಧಿಕಾರಿಗಳು, ಕೇವಲ 3 ರಿಂದ 4 ಗಂಟೆ ಮಾತ್ರ ವಿದ್ಯುತ್ ಪೊರೈಕೆ ಮಾಡುತ್ತಿದ್ದಾರೆ. ಹೀಗಿರುವಾಗ ನೀರಿನ ಕೊರತೆಯಿಂದ ಜಮೀನು ಬಿರುಕು ಬಿಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾದಗಿರಿ ಜಿಲ್ಲೆಯ ವಡಿಗೇರಾ ಹಾಗೂ ಶಹಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಉಂಟಾಗಿದೆ. ಈಗಾಗಲೇ ವಡಿಗೇರಾ ತಾಲೂಕಿನ ಬೆಂಡೆಗಂಬಳಿ, ಶಿವನೂರು, ಜೋಳದಡಗಿ, ಕದರಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆ ಒಣಗುವ ಪರಿಸ್ಥಿತಿ ಉಂಟಾಗುತ್ತಿದೆ ಎನ್ನಲಾಗಿದೆ.

    ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್​ಚಂದ್​ ಹೆಸರು

    ಒಂದು ಸಾವಿರ ವರ್ಷ ಪುರಾತನ ಶ್ರೀ ವಿಷ್ಣು ಪ್ರತಿಮೆ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts