More

  ರೈತ ಸಂಘದಿಂದ ಜಾನುವಾರು, ತರಕಾರಿ ಸಮೇತ ಪ್ರತಿಭಟನೆ

  ಕೋಲಾರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ)100 ಎಕರೆ ಜಾಗವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

  ನಗರದ ಎಪಿಎಂಸಿ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೊಂಡರಾಜನಹಳ್ಳಿ ಗೇಟ್‌ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೆದ್ದಾರಿ ಬಂದ್ ಮಾಡಲು ಪೊಲೀಸರು ಅವಕಾಶ ನೀಡದ ಕಾರಣ ಸರ್ವೀಸ್ ರಸ್ತೆಯಲ್ಲೆ ಜಾನುವಾರುಗಳು, ತರಕಾರಿ ಹಾಗೂ ಎತ್ತಿನಬಂಡಿಗಳ ಸಮೇತ ಕುಳಿತು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
  ಬಳಿಕ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರಿಗೆ ಮನವಿ ಸಲ್ಲಿಸಿದರು. ಹೆದ್ದಾರಿ ಬಂದ್‌ಗೆ ಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು, ಇದರಿಂದಾಗಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ಉಂಟಾಯಿತು.
  ಸಂಘದ ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ, 30 ದಿನಗಳೊಳಗೆ ವಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ತರಕಾರಿ, ಹಣ್ಣುಗಳನ್ನು ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ವಾರಾಟ ವಾಡದಂತೆ ರೈತರು ಪ್ರತಿಜ್ಞೆ ಸ್ವೀಕರಿಸಲಿದ್ದೇವೆೆ ಎಂದು ಎಚ್ಚರಿಸಿದರು.
  ಕೋಲಾರ ಎಪಿಎಂಸಿ ಮಾರುಕಟ್ಟೆಯು ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಟೊಮ್ಯಾಟೋ ಮಾರುಕಟ್ಟೆಯಾಗಿದೆ. ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಜನಪ್ರತಿನಿಧಿಗಳು, ಎಪಿಎಂಸಿ ಆಡಳಿತ ಮಂಡಳಿ, ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
  ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗುತ್ತಿದೆ. ತಾಲೂಕಿನ ಮಡಿವಾಳ ಗ್ರಾಮದ ಸರ್ವೇ ನಂಬರ್ 41ರಲ್ಲಿ 84 ಎಕರೆ ಸರ್ಕಾರಿ ಗೋವಾಳ, ಬೆಳಗಾನಹಳ್ಳಿ ಗೇಟ್ ಸಮೀಪ ಗೋವಾಳ ಜಮೀನನ್ನು ಪರಿಶೀಲನೆ ವಾಡಿ ವಾರುಕಟ್ಟೆಗೆ ಮಂಜೂರು ಮಾಡಬೇಕು. ಇಲ್ಲವೇ ಜಿಲ್ಲೆಯ ರೈತರನ್ನು ಪಕ್ಕದ ಆಂಧ್ರಕ್ಕೆ ಸೇರಿಸಿ ಎಂದು ಆಕ್ರೋಶವ್ಯಕ್ತಪಡಿಸಿದರು.
  ಬಲಾಢ್ಯರಿಗೆ, ರಾಜಕೀಯ ಮುಖಂಡರಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ರಾತ್ರೋರಾತ್ರಿ ಭೂಮಿ ಮಂಜೂರು ವಾಡಲು ಸರ್ಕಾರಿ ಜಾಗ ಲಭ್ಯವಾಗುತ್ತದೆ. ಸಾರ್ವಜನಿಕ ಉದ್ದೇಶಕ್ಕಾಗಿ ಕಂದಾಯ ಅಧಿಕಾರಿಗಳಿಗೆ ಜಾಗವೇ ದೊರೆಯುವುದಿಲ್ಲ. ಮಾರುಕಟ್ಟೆ ಸಮಸ್ಯೆ ಇಂದು ನಿನ್ನೆಯದಲ್ಲ. ಅಧಿಕಾರಿಗಳು ಮನಸ್ಸು ಮಾಡಿದ್ದರೆ 24 ಗಂಟೆಯಲ್ಲಿ ಬಗೆಹರಿಸಬಹುದಿತ್ತು. ಬದ್ಧತೆಯಿಲದಿರುವುದರಿಂದ ಸಮಸ್ಯೆ ಶಾಶ್ವತವಾಗಿ ಉಳಿದಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
  ಸಿಎಂಆರ್ ಶ್ರೀನಾಥ್ ವಾತನಾಡಿ, ಮಾರುಕಟ್ಟೆಯಲ್ಲಿನ ಅವ್ಯವಸ್ಥೆಯಿಂದ ರೈತರ ಬೆಳೆಗಳಿಗೆ ಬೆಲೆ ನೀಡಲು ಆಗುತ್ತಿಲ್ಲ. ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕ್ರಿಕೆಟ್‌ಗೆ ದೇಶಾದ್ಯಂತ ಎಲ್ಲ ರಾಜ್ಯ, ಜಿಲ್ಲೆಗಳಲ್ಲೂ ಕೋಟಿ ಖರ್ಚು ವಾಡಿ ಸ್ಟೇಡಿಯಂ ನಿರ್ಮಿಸುತ್ತಾರೆ. ಆದರೆ ರೈತನ ಬೆಳೆ ರಕ್ಷಣೆಗೆ ವಾರುಕಟ್ಟೆ ವ್ಯವಸ್ಥೆ, ಕೃಷಿ ಆಧಾರಿತ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರಗಳು ಏಕೆ ಮನಸ್ಸು ವಾಡುತ್ತಿಲ್ಲ ಎಂದು ಪ್ರಶ್ನಿಸಿದರು.
  ಕೆಎನ್‌ಎನ್ ಮಂಡಿ ವಾಲೀಕ ಪ್ರಕಾಶ್, ಪುಟ್ಟರಾಜು, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಫಾರೂಕ್‌ಪಾಷಾ, ಬಂಗಾರಿ ಮಂಜು, ತಿಮ್ಮಣ್ಣ, ಆಂಜಿನಪ್ಪ, ಪ್ರಭಾಕರ್, ಆನಂದರೆಡ್ಡಿ, ರಾಮಕೃಷ್ಣಪ್ಪ, ಎಂ.ಆರ್.ಭಾಸ್ಕರ್, ರಾಜೇಶ್, ವಿಜಯ್ ಪಾಲ್, ಗಿರೀಶ್, ಕುವ್ವಣ್ಣ, ಯಲ್ಲಪ್ಪ, ಹರೀಶ್, ವೇಣು, ಶೈಲಜಾ, ಮಂಜುಳಾ, ರಾಧಮ್ಮ, ಶೋಭಮ್ಮ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts