More

    ಲಖೀಂಪುರ್ ಖೇರಿ ಹಿಂಸಾಚಾರ ವಿರೋಧಿಸಿ ರೈತರ ಕಲಶ ಯಾತ್ರೆ; ಅ.18 ರಂದು ‘ರೈಲ್​ ರೋಕೋ’

    ನವದೆಹಲಿ: ಉತ್ತರಪ್ರದೇಶದ ಲಖೀಂಪುರ್​ ಖೇರಿ ಹಿಂಸಾಚಾರವನ್ನು ಪ್ರತಿಭಟಿಸಿ ಅಕ್ಟೋಬರ್​ 18 ರಂದು ‘ರೈಲ್ ರೋಕೋ’ ಚಳುವಳಿ ನಡೆಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಹೇಳಿದ್ದಾರೆ. ಕೇಂದ್ರ ಸಚಿವ ಅಜಯ್​ ಕುಮಾರ್​ ಮಿಶ್ರ ಮತ್ತು ಆಶಿಶ್ ಮಿಶ್ರ ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿದ ಕಿಸಾನ್​ ಮೋರ್ಚಾ ನಾಯಕ ಯೋಗೇಂದ್ರ ಯಾದವ್​, ಅ.12 ರಂದು ಯುಪಿಯ ಎಲ್ಲಾ ಜಿಲ್ಲೆಗಳಲ್ಲಿ ‘ಕಲಶ್​ ಯಾತ್ರಾ’ ನಡೆಸಲಾಗುವುದು; ಅ.18 ರಂದು ‘ರೈಲ್ ರೋಕೋ’ ಚಳುವಳಿ ನಡೆಸಲಾಗುವುದು ಮತ್ತು ಅ.26 ರಂದು ಲಖನೌನಲ್ಲಿ ‘ಮಹಾಪಂಚಾಯತ್​’ ನಡೆಸಲಾಗುವುದು ಎಂದರು. ಜೊತೆಗೆ, ಅ.15 ಕ್ಕೆ ದಸರಾ ಸಂದರ್ಭಕ್ಕೆ ರೈತರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾ ಅವರ ಪ್ರತಿಕೃತಿ ದಹನ ಮಾಡಲಿದ್ದಾರೆ ಎಂದರು.

    ಇದನ್ನೂ ಓದಿ: ಇನ್ಮುಂದೆ ನಮ್ಮ ಜಾಹೀರಾತಿಗೆ ನೀವು ಬೇಡ ಎಂದ ಕಂಪೆನಿ: 5 ಕೋಟಿ ರೂ. ಆದಾಯ ಕಳೆದುಕೊಂಡ ಶಾರುಖ್‌

    ಪ್ರತಿಭಟನಾಕಾರ ರೈತರೂ ಮೂವರು ಬಿಜೆಪಿ ಕಾರ್ಯಕರ್ತರನ್ನು ಸಾಯಿಸಿದ್ದಾರಲ್ಲಾ ಎಂದು ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಭಾರತ್​ ಕಿಸಾನ್​ ಯೂನಿಯನ್​ ನಾಯಕ ರಾಕೇಶ್ ತಿಕಾಯತ್​, “ಅದು ಆ್ಯಕ್ಷನ್​ಗೆ ರಿಯಾಕ್ಷನ್​ ಆಗಿತ್ತು. ಅದಕ್ಕಾಗಿ ಯಾವುದೇ ಯೋಜನೆ ನಡೆದಿರಲಿಲ್ಲ. ಆದ್ದರಿಂದ ಅದು ಕೊಲೆ ಆಗುವುದಿಲ್ಲ” ಎಂದಿದ್ದಾರೆ ಎಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್)

    ಸರಗಳ್ಳನನ್ನು ಬೆನ್ನಟ್ಟಿ ಹೋಗಿ ಹಿಡಿದ ಆಟೋ ಡ್ರೈವರ್

    ರಾಜ್ಯದಲ್ಲಿ ಮತ್ತೊಂದು ಗ್ಯಾಂಗ್​ರೇಪ್​: ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts