More

    ರೈತರಿಂದ ಖರೀದಿಸುವ ಹಾಲಿನ ದರ ಏರಿಸಲು ಪಟ್ಟು ; ಕೋಚಿಮುಲ್ ಎದುರು ರೈತ ಸಂಘ ಪ್ರತಿಭಟನೆ

    ಕೋಲಾರ: ರೈತರಿಂದ ಖರೀದಿಸುವ ಲೀಟರ್ ಹಾಲಿಗೆ ಕನಿಷ್ಠ 40 ರೂಪಾಯಿ ನಿಗದಿ ಮಾಡಬೇಕು ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

    ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಮಂಗಳವಾರ ಮುತ್ತಿಗೆ ಹಾಕಿದ್ದ ರೈತರನ್ನುದ್ದೇಶಿಸಿ ಮಾತನಾಡಿ, ಒಕ್ಕೂಟ ಈ ಹಿಂದೆ ಲೀಟರ್ ಹಾಲಿಗೆ 29 ರೂ. ನೀಡುತ್ತಿದ್ದು, ಪ್ರಸ್ತುತ 24 ರೂಪಾಯಿಗೆ ಇಳಿಸಿ ರೈತರ ಹೊಟ್ಟೆ ಮೇಲೆ ಬರೆ ಎಳೆದಿದೆ. ಇದಕ್ಕೆ ಆಡಳಿತ ಮಂಡಳಿ ನೇರ ಕಾರಣವಾಗಿರುತ್ತದೆ. ಬೆಲೆ ಇಳಿಕೆಯಿಂದ ಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.

    ಒಕ್ಕೂಟದ ಮೂಲಸೌಕರ್ಯಗಳಿಗಾಗಿ ಲೀಟರ್‌ಗೆ 1.55 ರೂ. ಕಡಿತಗೊಳಿಸುವುದನ್ನು ನಿಲ್ಲಿಸಬೇಕು. ರಾಜ್ಯಾದ್ಯಂತ ರೈತರಿಗೆ ಏಕರೂಪದಲ್ಲಿ ಹಾಲಿನ ದರ ನಿಗದಿಪಡಿಸಬೇಕು. ಪಶು ಆಹಾರ ದರ ಕಡಿತಗೊಳಿಸಿ ಗುಣಮಟ್ಟ ಹೆಚ್ಚಿಸಬೇಕು. ಕತಕ ಗರ್ಭಧಾರಣೆ ಗುಣಮಟ್ಟ ಕಾಪಾಡಬೇಕು. ಬಿಎಂಸಿ ಕೇಂದ್ರಗಳಿಂದ ಹಾಲು ಸರಬರಾಜು ಮಾಡುವ ಲಾರಿ ಗುತ್ತಿಗೆದಾರರು ಕಲಬೆರಕೆ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು. ಗುಣಮಟ್ಟದ ಹೆಸರಿನಲ್ಲಿ ರೈತರಿಗೆ ನೀಡುವ ಕಿರುಕುಳ ತಪ್ಪಿಸಬೇಕು. 60 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ನಿವತ್ತಿಗೊಳಿಸದೆ ಕರ್ತವ್ಯದಲ್ಲಿ ಮುಂದುವರಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

    ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಒಕ್ಕೂಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ, ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಲ್ಲಿ ನಷ್ಟ ತಪ್ಪಿಸಿ ರೈತರಿಗೆ ಹಾಗೂ ಗ್ರಾಹಕರಿಗೆ ನ್ಯಾಯ ಒದಗಿಸಬಹುದು. ಇನ್ನಾದರು ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

    ಕಾರ್ಯದರ್ಶಿ ವೀರಭದ್ರ ಸ್ವಾಮಿ, ಜಿಲ್ಲಾಧ್ಯಕ್ಷ ರಾಮೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಎಚ್.ಪಿ.ರಾಮನಾಥ್, ಸಂದ ಮಹಿಳಾ ಅಧ್ಯಕ್ಷೆ ಸಿ.ಉವಾ, ಉಪಾಧ್ಯಕ್ಷ ಬೈರರೆಡ್ಡಿ, ಜಿಲ್ಲಾ ಕಾರ್ಯಧ್ಯಕ್ಷ ಅಬ್ಬಣಿ ಶ್ರೀನಿವಾಸ್, ಮುಖಂಡರಾದ ರವಿ, ಶ್ರೀನಾಥ್, ನಾರಾಯಣಸ್ವಾಮಿ, ಗೋವಿಂದಪ್ಪ, ಮಂಜುನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts