More

    ಲಕ್ಷ್ಮೀಸಾಗರ ಕೆರೆ ಪಕ್ಕ ತ್ಯಾಜ್ಯ ; ಕೋಲಾರ, ಹೊಸಕೋಟೆ ನಗರಸಭೆ ವಿರುದ್ಧ ಪ್ರತಿಭಟನೆ

    ಕೋಲಾರ : ಕೋಲಾರ ಮತ್ತು ಹೊಸಕೋಟೆಯಲ್ಲಿ ಸಂಗ್ರಹಿಸಿದ ಕಸವನ್ನು ತಾಲೂಕಿನ ಲಕ್ಷ್ಮೀಸಾಗರ ಕೆರೆ ಪಕ್ಕದಲ್ಲಿ ಸುರಿಯುತ್ತಿರುವುದರಿಂದ ಅಂತರ್ಜಲ ಕಲುಷಿತಕ್ಕೆ ಅವಕಾಶ ನೀಡಿದಂತಾಗಿರುವುದರಿಂದ ಕೂಡಲೇ ಸಂಬಂಧಪಟ್ಟ ನಗರಸಭೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂ ಮತ್ತು ಹಸಿರು ಸೇನೆಯಿಂದ ಸೋಮವಾರ ವಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

    ಲಕ್ಷ್ಮೀಸಾಗರ ಕೆರೆ ಬಳಿ ಕಸ ಎಸೆಯುವವರ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರೂ ನಗರಸಭೆಯವರು ನಿರ್ಲಕ್ಷ್ಯ ತೋರಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖಂಡರು ಮನವಿ ಮಾಡಿದರು.

    ಕಸವನ್ನು ಕೆರೆಯ ಪಕ್ಕದ ಕ್ವಾರಿಗೆ ತುಂಬಿಸುವ ಮೂಲಕ ಅಂತರ್ಜಲ ಕಲುಷಿತಗೊಳಿಸಲಾಗುತ್ತಿದೆ. ಜತೆಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಸುತ್ತಮತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಸ್ಥಳ ಪರಿಶೀಲಿಸಿದ ಪ್ರಾದೇಶಿಕ ಪರಿಸರ ಅಧಿಕಾರಿ ರಾಜಶೇಖರ್, ಕೋಲಾರ ಮತ್ತು ಹೊಸಕೋಟೆ ನಗರಸಭೆ ಹಾಗೂ ಕೋಲಾರ ಎಪಿಎಂಸಿ ವಿರುದ್ಧ ಕೇಸು ದಾಖಲಿಸಲಾಗಿದ್ದು ನೋಟಿಸ್‌ಗೆ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ರೈತ ಸಂ ಯುವ ಟಕದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಗೌರವಾಧ್ಯಕ್ಷ ಕೊಲದೇವಿ ಗೋಪಾಲಕಷ್ಣಮೂರ್ತಿ, ಜಿಲ್ಲಾಧ್ಯಕ್ಷ ಜಿ.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಕೋಲಾರ ತಾಲೂಕು ಅಧ್ಯಕ್ಷ ಪಿ.ಎಂ.ಜಗನ್ನಾಥ್‌ರೆಡ್ಡಿ, ಶ್ರೀನಿವಾಸಪುರದ ದೊಡ್ಡಕುರುಬರಹಳ್ಳಿ ಶಂಕರಪ್ಪ, ಕೆಜಿಎಫ್ ಮಂಜುನಾಥ್, ವಾಲೂರು ತಾಲೂಕು ಅಧ್ಯಕ್ಷ ನಾರಾಯಣಗೌಡ, ಕೋಲಾರ ನಗರಾಧ್ಯಕ್ಷ ಶೇಕ್ ಸೈುಲ್ಲಾ, ಮುಳಬಾಗಿಲು ಉಪಾಧ್ಯಕ್ಷ ಧನರಾಜ್, ಕಾರ್ಯಾಧ್ಯಕ್ಷ ಲೋಕೇಶ್, ಮುಖಂಡರಾದ ರಾಮು, ಕೊಲದೇವಿ ಚಂದ್ರಪ್ಪ, ತೇರಹಳ್ಳಿ ಚಂದ್ರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts