More

    ಪಿಎಲ್​ಡಿ ಬ್ಯಾಂಕ್ ಎದುರು ರೈತರ ಪ್ರತಿಭಟನೆ

    ಬ್ಯಾಡಗಿ: ಬ್ಯಾಂಕ್ ಸಾಲ ನಿಯಮ ತಿದ್ದುಪಡಿಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪಿಎಲ್​ಡಿ ಬ್ಯಾಂಕ್ ಎದುರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

    ರೈತ ಸಂಘ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರಾಜ್ಯ ಪಿಕಾರ್ಡ್ ನಿರ್ದೇಶಕರ ಸಭೆಯಲ್ಲಿ ಇತ್ತೀಚೆಗೆ ರೈತರಿಗೆ 10 ಲಕ್ಷ ರೂ. ಗರಿಷ್ಠ ಸಾಲ ನಿಗದಿಪಡಿಸಲಾಗಿದೆ. ಆದರೆ, ಬಡ್ಡಿ ಸಹಾಯಧನ ಕೇವಲ 4 ಲಕ್ಷ ರೂ.ಗೆ ಮಿತಿ ನಿಗದಿಪಡಿಸಿರುವುದು ಸರಿಯಲ್ಲ. ಇದರಿಂದ ಸಣ್ಣ ಹಾಗೂ ದೊಡ್ಡ ಹಿಡುವಳಿ ರೈತರಿಗೆ ಅನ್ಯಾಯವಾಗಲಿದೆ. ಕುಟುಂಬದ ಒಬ್ಬ ರೈತರಿಗೆ ಮಾತ್ರ ಸಾಲ ನೀಡಲಾಗುತ್ತಿದೆ. ಇದರಿಂದ ಅದೇ ಕುಟುಂಬದ ಬೇರೆ ಬೇರೆ ಹೆಸರಿನಲ್ಲಿರುವ ಜಮೀನು ಖಾತೆದಾರರಿಗೆ ಸಮಸ್ಯೆ ಉಂಟಾಗಲಿದೆ. ಕೂಡಲೆ ರೈತ ಮುಖಂಡರ ಹಾಗೂ ಬ್ಯಾಂಕ್ ನಿರ್ದೇಶಕರ ಸಭೆ ಏರ್ಪಡಿಸಿ ಹಳೆಯ ನಿಯಮ ತಿದ್ದುಪಡಿಗೊಳಿಸಬೇಕು ಎಂದು ಒತ್ತಾಯಿಸಿದರು.

    ರೈತ ಸಂಘದ ತಾಲೂಕು ಕಾರ್ಯದರ್ಶಿ ಕಿರಣಕುಮಾರ ಗಡಿಗೋಳ ಮಾತನಾಡಿ, ಸರ್ಕಾರ ಸಾಲ ಮನ್ನಾ, ಸಬ್ಸಿಡಿ ಹಾಗೂ ಸಹಾಯಧನ ಯೋಜನೆ ಜಾರಿಗೊಳಿಸುವ ಮುನ್ನ ರೈತರನ್ನು ವಿಶ್ವಾಸಕ್ಕೆ ಪಡೆಯಬೇಕು. ಇದರಿಂದ ಎಲ್ಲ ರೈತರಿಗೆ ನ್ಯಾಯ ಸಿಗಲಿದೆ. ಸಾಲ ನೀಡುವಾಗ ಖರ್ಚಿನ ನೆಪದಲ್ಲಿ ರೈತರಿಂದ ಹೆಚ್ಚಿನ ಹಣ ತುಂಬಿಸಿಕೊಳ್ಳುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

    ಬಳಿಕ ಬ್ಯಾಂಕ್ ವ್ಯವಸ್ಥಾಪಕ ಎಸ್.ಎ. ಕೋರಿಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ಬಸವರಾಜ ಸಂಕಣ್ಣನವರ, ವೀರೇಶ ಎನ್.ಬಿ. ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts