More

    ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

    ಗುಂಡ್ಲುಪೇಟೆ: ತಾಲೂಕಿನ ರೈತರಿಗೆ ಬರ ಹಾಗೂ ಬೆಳೆನಷ್ಟದ ಪರಿಹಾರವನ್ನು ಇದುವರೆಗೂ ವಿತರಣೆ ಮಾಡದ ಬಗ್ಗೆ ರೈತ ಸಂಘಟನೆಯವರು ಗುರುವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.


    ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ತಾಲೂಕು ಅಧ್ಯಕ್ಷ ವೀರನಪುರ ನಾಗಪ್ಪ ನೇತೃತ್ವದಲ್ಲಿ ಸ್ವಲ್ಪ ಹೊತ್ತು ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ಸರ್ಕಾರ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಿದರೂ ಇನ್ನೂ ಬರಪರಿಹಾರ ನೀಡಿಲ್ಲ. ಬಿರುಗಾಳಿ ಮಳೆಗೆ ಬಾಳೆ ಬೆಳೆನಾಶ, ಮನೆಗಳ ಗೋಡೆಗಳುರುಳಿದ್ದರೂ ಅವುಗಳಿಗೂ ಪರಿಹಾರ ನೀಡಿಲ್ಲ. ಇದರಿಂದ ಸಂತ್ರಸ್ತರು ಸಂಕಷ್ಟಕ್ಕೊಳಗಾಗಿದ್ದಾರೆ. ಅದ್ದರಿಂದ ಎಲ್ಲ ಪರಿಹಾರಗಳನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದ ಮನವಿಪತ್ರವನ್ನು ತಹಸೀಲ್ದಾರ್ ಮಂಜುನಾಥ್ ಅವರಿಗೆ ಸಲ್ಲಿಸಿದರು.


    ಈ ಸಂದರ್ಭದಲ್ಲಿ ರಾಜಶೆಟ್ಟಿ, ನಾಗಶೆಟ್ಟಿ, ಮಹದೇವಶೆಟ್ಟಿ, ಸಿದ್ದಶೆಟ್ಟಿ, ಕುಮಾರ ಹಾಗೂ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts