More

    ಮುಂದುವರಿದ ರೈತರ ಧರಣಿ

    ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

    ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆ ನಿರ್ವಣಕ್ಕೆ ಭೂ ಸ್ವಾಧೀನ ಪಡಿಸಿಕೊಂಡ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಇಲ್ಲಿಯ ಯುಟಿಪಿ ಕಚೇರಿ ಎದುರು ರೈತರು ನಡೆಸುತ್ತಿರುವ ಧರಣಿ ಗುರುವಾರವೂ ಮುಂದುವರಿಯಿತು.

    ಸ್ಥಳಕ್ಕೆ ಬಂದ ಯುಟಿಪಿ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಬಿ. ರವೀಂದ್ರ ಮಾತನಾಡಿ, ಧಾರವಾಡ ನೀರಾವರಿ ಇಲಾಖೆ ಸಿಇಒ ಅವರಿಂದ 32 ರೈತರಿಗೆ ಪರಿಹಾರ ನೀಡಲು 3.62 ಕೋಟಿ ರೂ. ಬಿಡುಗಡೆ ಮಾಡಿರುವ ಆವಾರ್ಡ್ ಬಂದಿದೆ. ಅದನ್ನು ರೈತರಿಗೆ ನೀಡಲಾಗುವುದು. ಮೂರು ದಿನಗಳ ಕಾಲ ಸರ್ಕಾರಿ ರಜೆ ಇರುವುದರಿಂದ ಧರಣಿ ಕೈ ಬಿಡುವಂತೆ ಮನವಿ ಮಾಡಿದರು.

    ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ಅಧಿಕಾರಿಗಳು ಈ ಹಿಂದೆ ನೀಡಿದ ಭರವಸೆ ಈಡೇರಿಸಿಲ್ಲ. ಈಗ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಮಾಧಾನ ಪಡಿಸಲು 3.60 ಕೋಟಿ ರೂ. ಬಿಡುಗಡೆ ಮಾಡಿದ್ದೀರಿ. ಇದರಿಂದ ಕೇವಲ 32 ರೈತರಿಗೆ ಪರಿಹಾರ ನೀಡಲು ಸಾಧ್ಯ. ಆದರೆ, ಇನ್ನುಳಿದ 650ಕ್ಕೂ ಅಧಿಕ ಪ್ರಕರಣಗಳ ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

    ಆದ್ದರಿಂದ ಕನಿಷ್ಠ 50 ಕೋಟಿ ರೂ. ಯನ್ನಾದರೂ ಬಿಡುಗಡೆ ಮಾಡಬೇಕು. ಮಾಚ್ ಒಳಗೆ ಹಣ ಬಿಡುಗಡೆ ಮಾಡದಿದ್ದರೆ, ಇಲಾಖೆಯಲ್ಲಿರುವ ಹಣ ಕೂಡ ಸರ್ಕಾರದ ಖಾತೆಗೆ ವಾಪಸ್ ಹೋಗುತ್ತದೆ. ಆದ್ದರಿಂದ ಸಂಪೂರ್ಣ ಹಣವನ್ನು ಈಗಲೇ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.

    ಜಿಪಂ ಸದಸ್ಯ ಪ್ರಕಾಶ ಬನ್ನಿಕೋಡ, ವಕೀಲ ಎಸ್.ಡಿ. ಹೀರೇಮಠ, ರೈತ ಮುಖಂಡರಾದ ಪ್ರಭುಗೌಡ ಸೊರಟೂರ, ಶರಣಪ್ಪ ಕಾಗೇರ, ಬಸಪ್ಪ ಮಾಳಗಿ, ಬೋಜರಾಜ ಆರೇರ, ನಾಂಗಪ್ಪ ವೆಂಕಣ್ಣನವರ, ಕರಬಸಪ್ಪ ಬನ್ನಿಕೋಡ, ನಿಂಗನಗೌಡ ಸೊರಟೂರ, ಕರೇಗೌಡ ಮತ್ತೂರ, ತುಕಾರಾಮ ನವಲೆ, ಕರಿಯಪ್ಪ ಸೂರಣಗಿ, ಯಲ್ಲಪ್ಪ ಕೋಡಿಹಳ್ಳಿ ಹಾಗೂ ಹಿರೇಕೆರೂರ ತಾಲೂಕಿನ ಶಿರಗಂಬಿ, ಮೇದೂರ ಸೇರಿ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts