More

    ಹರಿಯಾಣ: ರೈತರ ಪ್ರತಿಭಟನೆ ಅಂತ್ಯ; ಲಾಠಿಚಾರ್ಜ್​ ಪ್ರಕರಣದ ತನಿಖೆ ಆದೇಶಿಸಿದ ಸರ್ಕಾರ

    ಕರ್ನಾಲ್​​: ಹರಿಯಾಣದ ಕರ್ನಾಲ್​ನಲ್ಲಿ ಕಳೆದ ತಿಂಗಳು ಪ್ರತಿಭಟನಾನಿರತ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ಬಗ್ಗೆ ಹರಿಯಾಣ ಸರ್ಕಾರ ಉನ್ನತ ತನಿಖೆ ಆದೇಶಿಸಿದೆ. ‘ಬ್ಯಾರಿಕೇಡ್​ ದಾಟುವ ರೈತರ ತಲೆ ಒಡೆಯಿರಿ’ ಎಂದು ಆದೇಶಿಸಿ, ವಿವಾದದ ಕೇಂದ್ರಬಿಂದುವಾಗಿದ್ದ ಐಎಎಸ್​ ಅಧಿಕಾರಿ ಆಯುಷ್​ ಸಿನ್ಹಾರನ್ನು ಸರ್ಕಾರ ರಜೆಯ ಮೇಲೆ ಕಳುಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಗುಂಪು ಕರ್ನಾಲ್​ ಜಿಲ್ಲೆಯ ಹೊರಗೆ ನಡೆಸುತ್ತಿದ್ದ ತನ್ನ ಪ್ರತಿಭಟನೆಯನ್ನು ಹಿಂಪಡೆದಿದೆ ಎನ್ನಲಾಗಿದೆ.

    ಆಗಸ್ಟ್​ 28 ರಂದು ಕರ್ನಾಲ್​ನ ಘರೌಂದಾ ಟೋಲ್​ ಪ್ಲಾಜಾದ ಬಳಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠಿ ಚಾರ್ಜ್​ ನಡೆದಿತ್ತು. ಈ ಸಂದರ್ಭದಲ್ಲಿ 10 ರೈತರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವ ರೈತ ಮೃತಪಟ್ಟಿದ್ದ ಎಂದು ರೈತ ಮುಖಂಡರು ಆರೋಪಿಸಿದ್ದರು. ಇಂದು ಕರ್ನಾಲ್​​ನಲ್ಲಿ ರೈತ ಮುಖಂಡ ಗುರ್​ನಾಮ್​ ಸಿಂಗ್​ ಚಾದುನಿ ಜೊತೆ, ಹರಿಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಂದ್ರ ಸಿಂಗ್ ಜಂಟಿ ಪತ್ರಿಕಾ ಗೋಷ್ಠಿ ನಡೆಸಿದರು.

    ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕನ ಕೊಲೆ

    ಆಗಸ್ಟ್​ 28 ರಂದು ನಡೆದ ಪೊಲೀಸರ ಲಾಠಿ ಚಾರ್ಜ್​ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿರುವ ತನಿಖೆಯ ಸಮಯದಲ್ಲಿ, ಎಸ್​ಡಿಎಂ ಆಯುಷ್​ ಸಿನ್ಹಗೆ ಕಡ್ಡಾಯ ರಜೆಯ ಮೇಲೆ ತೆರಳಲು ಸೂಚಿಸಲಾಗಿದೆ ಎಂದು ದೇವೇಂದ್ರ ಸಿಂಗ್​ ಹೇಳಿದರು. ಲಾಠಿ ಚಾರ್ಜ್​ನಲ್ಲಿ ಮೃತಪಟ್ಟಿದ್ದ ಎನ್ನಲಾದ ಸುಶೀಲ್​ ಕಾಜಲ್​ ಎಂಬ ರೈತನ ಇಬ್ಬರು ಕುಟುಂಬದ ಸದಸ್ಯರಿಗೆ ನೌಕರಿಯನ್ನು ನೀಡಲಾಗುವುದು ಎಂದರು.

    ತದನಂತರ ರೈತ ಮುಖಂಡ ಚಾದುನಿ ಮಾತನಾಡಿ, ಕರ್ನಾಲ್​ ಜಿಲ್ಲಾ ಕೇಂದ್ರದ ಹೊರಗೆ ನಡೆಸುತ್ತಿರುವ ತಮ್ಮ ಧರಣಿ ಪ್ರತಿಭಟನೆಗೆ ಕೊನೆ ಹಾಡುವುದಾಗಿ ಹೇಳಿದರು. “ನಾವು ಎಫ್​ಐಆರ್​ ದಾಖಲಿಸಲು ಕೇಳಿದ್ದೆವು. ಆದರೀಗ ನ್ಯಾಯಾಧೀಶರ ತನಿಖೆ ಆದೇಶಿಸಲಾಗಿದೆ. ಇದು ಇನ್ನೂ ಉತ್ತಮ” ಎಂದರು. (ಏಜೆನ್ಸೀಸ್)

    ಕರೊನಾ ಸಾವಿನ ನಿಜವಾದ ಲೆಕ್ಕ ಕೊಡಿ: ರಾಮಲಿಂಗಾರೆಡ್ಡಿ ಆಗ್ರಹ

    ಭಾರತದಲ್ಲಿ ಕರೊನಾ ಚೇತರಿಕೆ ದರ ಎಷ್ಟು ಗೊತ್ತೆ?

    ಕಾಮುಕನಿಂದ ಕ್ರೂರ ಹಿಂಸೆ ಅನುಭವಿಸಿದ ಮುಂಬೈ ಮಹಿಳೆ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts