More

    ಭೂಸ್ವಾಧೀನಕ್ಕೆ ರೈತರ ಸಂಘಟನೆಗಳ ಒಕ್ಕೊರಲ ವಿರೋಧ

    ಧಾರವಾಡ: ಸುವರ್ಣ ಕರ್ನಾಟಕ ಕೈಗಾರಿಕಾ ಕಾರಿಡಾರ್​ಗಾಗಿ ತಾಲೂಕಿನ 14 ಗ್ರಾಮಗಳ ಜಮೀನು ಸ್ವಾಧೀನಕ್ಕೆ ಸಂಬಂಧಿಸಿ ವಿಶೇಷ ಭೂಸ್ವಾಧೀನ ಅಧಿಕಾರಿ ಜುಬೇರ್ ಅಹ್ಮದ್ ಅವರೊಂದಿಗೆ ಭೂಮಿ ಉಳಿಸಿ ಹೋರಾಟ ಸಮಿತಿ ಸದಸ್ಯರು ಹಾಗೂ ರೈತ ಕೃಷಿ ಕಾರ್ವಿುಕ ಸಂಘಟನೆ ಮುಖಂಡರ ಸಭೆ ಕೆಐಎಡಿಬಿ ಕಚೇರಿಯಲ್ಲಿ ಸೋಮವಾರ ಜರುಗಿತು.

    ತಾಲೂಕಿನ 14 ಗ್ರಾಮಗಳ ರೈತರಿಗೆ ವಿಶೇಷ ಭೂಸ್ವಾಧೀನ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಭೂಸ್ವಾಧೀನ ವಿರೋಧಿಸಿ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಕುರಿತು ರ್ಚಚಿಸಲು ವಿಶೇಷ ಭೂಸ್ವಾಧೀನ ಅಧಿಕಾರಿ ಸಭೆ ಕರೆದಿದ್ದರು.

    ರೈತರು ಮತ್ತು ಭೂಮಿ ಉಳಿಸಿ ಹೋರಾಟ ಸಮಿತಿಯ ಮುಖಂಡರು ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಸರ್ಕಾರ ಈ ಪ್ರಸ್ತಾವವನ್ನು ಕೂಡಲೆ ಕೈಬಿಡಬೇಕು. ಭೂಸ್ವಾಧೀನ ಮಾಡುವುದಿಲ್ಲ ಎಂದು ಮರು ನೋಟಿಸ್ ನೀಡಬೇಕು. ಇಲ್ಲದಿದ್ದರೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ರೈತ ಮುಖಂಡರೊಂದಿಗೆ ಮಾತನಾಡಿದ ವಿಶೇಷ ಭೂಸ್ವಾಧೀನ ಅಧಿಕಾರಿ ಜುಬೇರ್ ಅಹಮದ್, ಇದು ಪ್ರಾಥಮಿಕ ಪ್ರಸ್ತಾವ. ರೈತರು ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂಬ ವಸ್ತುಸ್ಥಿತಿಯನ್ನು ಕೆಐಎಡಿಬಿಯ ವಿಶೇಷ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

    ಭೂಮಿ ಉಳಿಸಿ ಹೋರಾಟ ಸಮಿತಿಯ ಮುಖಂಡರಾದ ಆರ್.ಕೆ.ಎಸ್. ಜಿಲ್ಲಾ ಅಧ್ಯಕ್ಷ ಲಕ್ಷ ್ಮ ಜಡಗಣ್ಣವರ, ವಿಠ್ಠಲ ಪೀರಗಾರ, ರಮೇಶ ಹೊಸಮನೆ, ಗೋವಿಂದ ಕೃಷ್ಣಪ್ಪನವರ, ಮಾಂಗಜಿ, ಉದಯಕುಮಾರ ಪಾಟೀಲ, ಆರ್.ಎಸ್. ಪವಾರ, ಮಾರುತಿ ಮಾನೆ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts