More

    ರೈತರ ಅಭಿವೃದ್ಧಿಗೆ ಪ್ರಯತ್ನ

    ಸಂಕೇಶ್ವರ: ಬೆಳಗಾವಿ ಡಿಸಿಸಿ ಬ್ಯಾಂಕ್ ಮೂಲಕ ಜಿಲ್ಲೆಯ ರೈತರಿಗೆ ಹೆಚ್ಚಿನ ಸೌಲಭ್ಯ ಒದಗಿಸಿ, ರೈತರ ಆರ್ಥಿಕ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ದೇಶದಲ್ಲಿಯೇ ನಂ.1 ಡಿಸಿಸಿ ಬ್ಯಾಂಕ್ ಮಾಡುವ ಗುರಿ ಹೊಂದಿದ್ದೇನೆ ಎಂದು ಬ್ಯಾಂಕ್‌ನ ನೂತನ ಅಧ್ಯಕ್ಷ ರಮೇಶ ಕತ್ತಿ ಭರವಸೆ ನೀಡಿದ್ದಾರೆ.

    ಶನಿವಾರ ಸಮೀಪದ ನಿಡಸೋಸಿ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಜಿಲ್ಲೆಯ ಸಹಕಾರ ಹಾಗೂ ರಾಜಕೀಯ ಮುಖಂಡರು ಮತ್ತೊಂದು ಅವಧಿಗೆ ಅಧ್ಯಕ್ಷನನ್ನಾಗಿ ಕೆಲಸ ಮಾಡಲು ಅವಕಾಶ ಒದಗಿಸಿಕೊಟ್ಟಿದ್ದಾರೆ. ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು ರೈತರ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

    ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನೂತನ ಅಧ್ಯಕ್ಷ ರಮೇಶ ಕತ್ತಿ ಅವರನ್ನು ಸನ್ಮಾನಿಸಿ, ಸಹಕಾರ ರಂಗದ ಬಗ್ಗೆ ವಿಶೇಷ ಒಲವು ಹೊಂದಿರುವ ರಮೇಶ ಕತ್ತಿ ಅವರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ದೊರೆತಿರುವುದು ಉತ್ತಮ ಬೆಳವಣಿಗೆ. ಅವರಿಗೆ ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಸ್ಥಾನ ದೊರೆಯಲಿ ಎಂದು ಆಶೀರ್ವದಿಸಿದರು. ಹಿರಾಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಸಂಗಂ ಶುಗರ್ಸ್ ನಿರ್ದೇಶಕ ಸುಭಾಷ ಪಾಟೀಲ, ರಾಜು ಗಡಕರಿ, ಸಂದೀಪ ಪದ್ಮಣ್ಣವರ, ಈರಪ್ಪ ಸಂಕಣ್ಣವರ, ನಿಜಲಿಂಗ ಹೂಗಾರ ಮತ್ತಿತರರು ಉಪಸ್ಥಿತರಿದ್ದರು.

    ನನ್ನಣ್ಣ ಉಮೇಶ ಡೈಮಂಡ್

    ನಾಲ್ಕು ದಶಕಗಳ ಕಾಲ ವಿಧಾನಸಭೆಗೆ ಆಯ್ಕೆಯಾಗಿ ರುವ ನನ್ನಣ್ಣ ಉಮೇಶ ಕತ್ತಿ ಕಪ್ಪುಚುಕ್ಕೆ ಇಲ್ಲದೇ 8 ಬಾರಿ ಶಾಸಕರಾಗಿದ್ದು, ಆತ ರಾಜಕಾರಣದಲ್ಲಿ ಡೈಮಂಡ್ ಇದ್ದಂತೆ. ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದರು.

    ಉಪಚುನಾವಣೆಗೆ ನಾನೂ ಸಿದ್ಧ

    ದಿ.ಸುರೇಶ ಅಂಗಡಿ ನನ್ನ ಹಿರಿಯ ಸಹೋದರನಂತಿದ್ದರು. ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಅಂಗಡಿ ಅವರ ಪತ್ನಿಗೆ ಟಿಕೆಟ್‌ನೀಡಬೇಕು. ಒಂದು ವೇಳೆ ವರಿಷ್ಠರು ಬೇರೆಯವರಿಗೆ ಟಿಕೆಟ್ ನೀಡಲು ಮುಂದಾದರೆ ನಾನು ಸಹ ಟಿಕೆಟ್‌ಗೆ ವರಿಷ್ಠರಿಗೆ ಪ್ರಸ್ತಾಪಿಸುತ್ತೇನೆ.

    ಸಿಹಿ ಹಂಚಿ ಸಂಭ್ರಮ

    ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರಮೇಶ ಕತ್ತಿ ಅವಿರೋಧವಾಗಿ ಆಯ್ಕೆಯಾದ ನಿಮಿತ್ತ ದುಂಡಪ್ಪ ಹೆದ್ದೂರಿ ನೇತೃತ್ವದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಪಟ್ಟಣದಲ್ಲಿ ಗುಲಾಲ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts