More

    ರಾಷ್ಟ್ರೀಯ ಹೆದ್ದಾರಿಯಲ್ಲೇ ಭತ್ತದ ಫಸಲು ಬಡಿದ ರೈತರು!

    ಉಡುಪಿ: ಭತ್ತಕ್ಕೆ ಕನಿಷ್ಠ 2,500 ರೂಪಾಯಿ ಬೆಂಬಲ ಬೆಲೆ ನಿಗದಿ‌ ಮಾಡುವಂತೆ ಆಗ್ರಹಿಸಿ ಉಡುಪಿ ಜಿಲ್ಲೆಯ ರೈತರು ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಭತ್ತದ ಫಸಲು ಬಡಿಯುವ ಮಂಚ ಇಟ್ಟು ಫಸಲಿನಿಂದ ತೆನೆ ಬೇರ್ಪಡಿಸಿದರು.

    ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಜನಪರ ರೈತ ಹೋರಾಟ ಸಮಿತಿಯು ಕನಿಷ್ಠ ಬೆಂಬಲ ಬೆಲೆಯ ಬೇಡಿಕೆಯಿಟ್ಟು ಪ್ರತಿಭಟನೆಗೆ ಕರೆ ನೀಡಿತ್ತು. ಬ್ರಹ್ಮಾವರ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನಾ ಸಭೆ ನಡೆಸಿದ ರೈತಾಪಿ ವರ್ಗದವರು, ಭತ್ತಕ್ಕೆ ಕನಿಷ್ಠ 2500 ರೂ. ಬೆಂಬಲ ಬೆಲೆ ಆಗ್ರಹಿಸಿ ಬ್ರಹ್ಮಾವರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಮಂಡ್ಯ: ಅಕ್ರಮ ಸಾಗಣೆ ವೇಳೆ 20 ರಾಸುಗಳ ರಕ್ಷಣೆ

    ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ಸ್ವಲ್ಪ ಹೊತ್ತು ಬಂದ್ ಮಾಡಿದ ರೈತರು, ಹೆದ್ದಾರಿಯಲ್ಲೇ ಭತ್ತದ ಫಸಲು ಬಡಿಯುವ ಮಂಚ ಇಟ್ಟು ಪ್ರತಿಭಟನೆ ಆರಂಭಿಸಿದರು. ಹೆದ್ದಾರಿಯಲ್ಲಿಯೇ ಟಾರ್ಪಲ್ ಹಾಸಿ ಭತ್ತದ ಫಸಲಿನ ತೆನೆ ಬೇರ್ಪಡಿಸಿದರು. ಜಿಲ್ಲೆಯ ವಿವಿಧೆಡೆಯ ರೈತರು, ರೈತ ಸಂಘಟನೆಯ ಮುಖಂಡರು ಮತ್ತು ಸದಸ್ಯರು ಭಾಗಿಯಾಗಿದ್ದರು.

    ಐಡಿಯಲ್​​ ಐಸ್​ಕ್ರೀಂ ಸಂಸ್ಥೆಯ ಸ್ಥಾಪಕ ಪ್ರಭಾಕರ ಕಾಮತ್​ ನಿಧನ

    ತಿಂಗಳ ನಂತರ ರಾಜೀನಾಮೆ ಪ್ರಸಂಗಕ್ಕೆ ತೆರೆ; ಪಂಜಾಬ್​ ‘ಕೈ’ ಬಿಡದ ಸಿಧು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts