More

  ಸಂತೆ ಮೈದಾನಕ್ಕೆ ಪ್ರೊ.ನಂಜುಂಡಸ್ವಾಮಿ ಹೆಸರಿಡಿ

  ಮೊಳಕಾಲ್ಮೂರು: ನೂತನ ಸಂತೆ ಮಾರುಕಟ್ಟೆಗೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿ ಸಂಘದ ಪದಾಧಿಕಾರಿಗಳು ಪಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.

  ನಂಜುಂಡಸ್ವಾಮಿ ಅವರು ಇಡೀ ಜೀವನವನ್ನೇ ರೈತರ ಹಿತಕ್ಕಾಗಿ ಮುಡುಪಾಗಿಟ್ಟಿದ್ದರು. ಅವರ ಪ್ರಗತಿಪರ ಹೋರಾಟದ ನಿಲುವನ್ನು ದೇಶವೇ ಕೊಂಡಾಡಿದೆ.

  ಅಂತಹ ಮಹಾನ್ ನಾಯಕನ ಹೆಸರನ್ನು ಮೊಳಕಾಲ್ಮೂರಿನ ನೂತನ ಸಂತೆ ಮಾರುಟ್ಟೆಗೆ ನಾಮಕರಣ ಮಾಡುವ ಅಗತ್ಯತೆ ಇದೆ ಎಂದರು.

  ಇದು ಕೇವಲ ರೈತ ಸಂಘದ ಉದ್ದೇಶ ಮಾತ್ರವಲ್ಲ. ರೈತ ಸಮುದಾಯದ ಒಕ್ಕೂರಲ ತೀರ್ಮಾನವಾಗಿದೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗಬೇಕು ಎಂಬುದು ಅವರ ಬಹುದೊಡ್ಡ ಕನಸಾಗಿತ್ತು. ಅದು ಇಲ್ಲಿಂದಲೇ ಆರಂಭವಾಗಲಿ ಎಂದು ಒತ್ತಾಯಿಸಿದರು.

  ಪಟ್ಟಣದ ಮುಖ್ಯ ರಸ್ತೆ ಅಗಲೀಕರಣವಾಗಿದ್ದು ಆಯಾ ಭಾಗಗಳಲ್ಲಿ ಮಹರ್ಷಿ ವಾಲ್ಮೀಕಿ, ಬಸವಣ್ಣ, ಅಂಬೇಡ್ಕರ್ ಪ್ರತಿಮೆಗಳನ್ನು ಪ್ರತಿಷ್ಠಾಪಿಸಬೇಕು.

  ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ ಅವರ ಹೆಸರನ್ನು ಬಸ್ ನಿಲ್ದಾಣಕ್ಕೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ಅನ್ನದಾನಿ ವೀರಭದ್ರಪ್ಪ ಅವರ ಹೆಸರನ್ನ ಪ್ರಮುಖ ಸ್ಥಳಕ್ಕೆ ನಾಮಕರಣ ಮಾಡುವಂತೆ ಆಗ್ರಹಿಸಿದರು.

  ಸಂಘದ ಪದಾಧಿಕಾರಿಗಳಾದ ಬೇಡರಡ್ಡಿಹಳ್ಳಿ ಬಸವರಡ್ಡಿ, ಮಂಜುನಾಥ, ಎಚ್.ಟಿ.ಚಂದ್ರಣ್ಣ, ಕನಕಶಿವಮೂರ್ತಿ, ನಾಗರಾಜ್, ಗೋಪಾಲ, ಚಂದ್ರಣ್ಣ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts