More

    ಸಿಂಘು ಗಡಿಯಲ್ಲಿ ಮತ್ತೆ ದಾಳಿ! ತಲ್ವಾರ್​ ಹಿಡಿದು ಪೊಲೀಸರ ಮೇಲೆ ಎರಗಿದ ಹೋರಾಟಗಾರರು

    ನವದೆಹಲಿ: ಹರಿಯಾಣ-ದೆಹಲಿ ಗಡಿಯಾಗಿರುವ ಸಿಂಘು ಗಡಿಯಲ್ಲಿ ಶುಕ್ರವಾರದಂದು ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ರೈತ ಹೋರಾಟಗಾರರು ಮತ್ತು ಅಲ್ಲಿನ ಸ್ಥಳೀಯ ಜನರ ನಡುವೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರ ಮೇಲೆ ರೈತ ಹೋರಾಟಗಾರರು ದಾಳಿ ನಡೆಸಿ, ಹಲ್ಲೆ ಮಾಡಿದ್ದಾರೆ.

    ಇದನ್ನೂ ಓದಿ: ನಾಳೆಯಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ; ರೈತರ ಬೇಡಿಕೆ ಈಡೆರುವವರೆಗೂ ಹೋರಾಟ

    ಸಿಂಘು ಗಡಿಯನ್ನು ಹೋರಾಟಗಾರರು ಬಿಟ್ಟು ಹೋಗಬೇಕು ಎಂದು ಸಿಂಘು ಗ್ರಾಮದ ಜನರು ಗುರುವಾರದಂದೇ ಆಗ್ರಹಿಸಿದ್ದರು. ಹೊರಡಿದ್ದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದ್ದರು. ಶುಕ್ರವಾರದಂದು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದು ರೈತರ ವಿರುದ್ಧ ಹೋರಾಟ ಮಾಡಲಾಗಿದೆ. ರೈತ ಹೋರಾಟಗಾರರು ಮತ್ತು ಗ್ರಾಮಸ್ಥರು ಪರಸ್ಪರ ಕಲ್ಲು ತೂರಾಟ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಪೊಲೀಸರ ಮೇಲೂ ದಾಳಿ ನಡೆಸಲಾಗಿದೆ. ತಲ್ವಾರ್​ ಹಿಡಿದು ಪೊಲೀಸರ ಮೇಲೆ ದಾಳಿ ನಡೆಸುತ್ತಿರುವ ವಿಡಿಯೋಗಳು ಕಾಣಿಸಿಕೊಂಡಿದೆ. ದಾಳಿಯಲ್ಲಿ ಕೆಲ ಪೊಲೀಸ್​ ಅಧಿಕಾರಿಗಳಿಗೆ ಗಾಯವಾಗಿರುವುದಾಗಿ ತಿಳಿಸಲಾಗಿದೆ.

    ಸಿಂಘು ಗಡಿಯಲ್ಲಿ ಮತ್ತೆ ದಾಳಿ! ತಲ್ವಾರ್​ ಹಿಡಿದು ಪೊಲೀಸರ ಮೇಲೆ ಎರಗಿದ ಹೋರಾಟಗಾರರು

    ಇದನ್ನೂ ಓದಿ: ಮಕ್ಕಳನ್ನು ದತ್ತು ನೀಡದ್ದಕ್ಕೆ ಅಣ್ಣನನ್ನೇ ಕೊಂದ ; ಆಟೋ ಗುರುತು ಹೇಳಲು ಹೋಗಿ ಸಿಕ್ಕಿಬಿದ್ದ ಸಹೋದರ

    ಸಿಂಘು ಗಡಿಯಲ್ಲಿ ಮತ್ತೆ ದಾಳಿ! ತಲ್ವಾರ್​ ಹಿಡಿದು ಪೊಲೀಸರ ಮೇಲೆ ಎರಗಿದ ಹೋರಾಟಗಾರರು
    ರೈತ ಹೋರಾಟಗಾರರು ಹಾಕಿಕೊಂಡಿದ್ದ ಟೆಂಟ್​ಗಳನ್ನು ನಾಶ ಮಾಡುವ ಪ್ರಯತ್ನವನ್ನು ಗ್ರಾಮಸ್ಥರು ಮಾಡಿದ್ದಾರೆ. ರೈತರು ತಂದಿಟ್ಟುಕೊಂಡಿದ್ದ ವಾಶಿಂಗ್​ ಮಷಿನ್​ ಸೇರಿ ಅನೇಕ ವಸ್ತುಗಳನ್ನು ಹಾಳು ಮಾಡಲಾಗಿದೆ. ಘಟನೆ ತೀವ್ರ ಸ್ವರೂಪ ತೆಗೆದುಕೊಳ್ಳುತ್ತಿದ್ದಂತೆಯೇ ಪೊಲೀಸರು ಲಾಟಿ ಚಾರ್ಜ್​ ಮತ್ತು ಟಿಯರ್​ ಗ್ಯಾಸ್​ ದಾಳಿ ನಡೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಘಾಜಿಬಾದ್​ ಗಡಿಯಲ್ಲಿ ಹೆಚ್ಚಿನ ರಕ್ಷಣೆ ನೀಡಲಾಗಿದೆ. (ಏಜೆನ್ಸೀಸ್​)

    ಗಣರಾಜ್ಯೋತ್ಸವ ದಿನದ ಹಿಂಸಾಚಾರ ಖಂಡಿಸಿ, ಬುದ್ಧಿಮಾತು ಹೇಳಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​

    ಏಕಾಂತದಲ್ಲಿದ್ದಾಗ ಮನೆಗೆ ನುಗ್ಗಿ ವಿಡಿಯೋ ಮಾಡಿಕೊಂಡ! ಸೆಕ್ಸ್​ಗೆ ಒಪ್ಪದಿದ್ದರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಸಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts