More

    ರೈತ ಮಿತ್ರ ಹುದ್ದೆಗಳ ನೇಮಕಾತಿಗೆ ಒತ್ತಾಯ

    ಹಿರೇಕೆರೂರ: ಮುಂಬರುವ 2021-22ನೇ ಸಾಲಿನ ಬಜೆಟ್​ನಲ್ಲಿ ರೈತ ಮಿತ್ರ ಹುದ್ದೆಗಳ ನೇಮಕಾತಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಡಿಪ್ಲೊಮಾ ಕೃಷಿ ಪದವೀಧರ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾನುವಾರ ಪಟ್ಟಣದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರನ್ನು ಒತ್ತಾಯಿಸಿದರು.

    ಈ ವೇಳೆ ಸಂಘದ ಅಧ್ಯಕ್ಷ ಮಹಾಂತೇಶ ಮಾತನಾಡಿ, 2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸಭೆ ವಿಶೇಷ ಅಧಿವೇಶನ ನಡೆಸಿ, ಕೃಷಿ ವಿಶ್ವವಿದ್ಯಾಲಯಗಳ ಮಾರ್ಗದರ್ಶನದಲ್ಲಿ 2 ವರ್ಷದ ಕೃಷಿ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಿದ್ದರು. ಅಲ್ಲದೆ, ಪಾಸಾದವರನ್ನು ಕೃಷಿ ಸಹಾಯಕರನ್ನಾಗಿ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದರು. ಅದರಂತೆ ಸ್ವತಃ ರೈತರಾಗಿರುವ ಈಗಿನ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ತಮ್ಮ ಅನುಭವ ಬಳಸಿಕೊಂಡು ಕೃಷಿ ಇಲಾಖೆ ಬಲವರ್ಧನೆಗೆ ಮುಂದಾಗಬೇಕು. ಯಡಿಯೂರಪ್ಪ ಅವರ ಕನಸಿನ ಯೋಜನೆಯಾದ ರೈತ ಮಿತ್ರ ಹುದ್ದೆಗಳ ನೇಮಕಾತಿಗೆ ಸಚಿವರು ಒಲವು ತೋರಿಸಿ ಮುಖ್ಯಮಂತ್ರಿಗಳೊಂದಿಗೆ ರ್ಚಚಿಸಿ ರೈತಮಿತ್ರ ನೇಮಕಾತಿಗೆ ಶೀಘ್ರದಲ್ಲಿ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಂಘದ ಖಜಾಂಚಿ ವೆಂಕಟೇಶ ದಾಸರ, ಪದಾಧಿಕಾರಿಗಳಾದ ನಾಗರಾಜ ಕಂಬಾರ, ನಾಗರಾಜ ಚಳಗೇರಿ, ಬಸವರಾಜ, ಉದಯಕುಮಾರ, ವೀರೂಪಾಕ್ಷ, ಯುವರಾಜ, ತಿಪ್ಪೇಸ್ವಾಮಿ, ಹುಸೇನ್, ಸಂತೋಷ್, ಪ್ರಜ್ವಲ್, ವಿಶಾಲ, ಜಮೀರ್, ದರ್ಶಿನಿ, ಶಾಲಿನಿ, ಪ್ರಮೋದ, ಸೋಮಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts