More

    ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಈ ಸುಂದರಿಯ ಹಿಂದಿದೆ ಮತ್ತೊಂದು ಕರಾಳ ಮುಖ!

    ಟೊಕಿಯೋ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಫಾಲೋವರ್ಸ್​ ಪಡೆಯಲು ಸಾಕಷ್ಟು ಸರ್ಕಸ್​ ಮಾಡುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಎಲ್ಲರಿಗೂ ಒಂದು ಹೆಜ್ಜೆ ಮುಂದೆ ಹೋಗಿ ಯಾರು ಊಹಿಸಿರದ ರೀತಿಯಲ್ಲಿ ಎಲ್ಲರನ್ನು ಬಕ್ರ ಮಾಡಿದ್ದಾರೆ. ಅಚ್ಚರಿಯೆಂದರೆ ಫಾಲೋವರ್ಸ್​ ಸಂಖ್ಯೆಯು ಹೆಚ್ಚಾಗಿದೆ.

    ಹೌದು. ಜಪಾನಿನ ಬೈಕರ್​ ಯುವತಿಯೊಬ್ಬಳು ಇತ್ತೀಚೆಗಷ್ಟೇ ತಾನು ಹೆಣ್ಣಲ್ಲ ಗಂಡು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಚಿರ ಯೌವ್ವನೆಯಂತೆ ಕಾಣುತ್ತಿದ್ದ ಬೈಕರ್​ ಯುವತಿ 50 ವರ್ಷದ ಪುರುಷ ಎಂಬುದು ಇದೀಗ ಎಲ್ಲರ ಹುಬ್ಬೇರಿಸಿದೆ. ಜಾಲತಾಣದಲ್ಲಿ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಯುವತಿಯಾಗಿ ಮುಖ ವಿನ್ಯಾಸ ಮಾಡಿಸಿಕೊಂಡಿದ್ದಾರೆ.

    @azusagakuyuki ಹೆಸರಿನ ಟ್ವಿಟರ್​ ಖಾತೆಯನ್ನು ಹೊಂದಿರುವ ವ್ಯಕ್ತಿಯನ್ನು ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಅನುಸರಿಸುತ್ತಿದ್ದಾರೆ. ಅವರ ಪ್ರೊಫೈಲ್​ ಸೇರಿದಂತೆ ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿರುವ ಎಲ್ಲ ಫೋಟೋಗಳಲ್ಲಿಯು ಯುವತಿ ವೇಷದಲ್ಲಿದ್ದಾರೆ. ಆದರೆ, ಒಂದು ಚಿತ್ರದಲ್ಲಿ ನೆಟ್ಟಿಗರು ವ್ಯಕ್ತಿಯ ಪ್ರತಿಬಿಂಬವನ್ನು ನೋಡಿದ ಬಳಿಕ ನಿಜ ಸಂಗತಿ ಬಯಲಾಗಿದೆ.

    ಬೈಕ್​ ಮುಂದೆ ನಿಂತು ಪೋಸ್​ ನೀಡಿರುವ ಫೋಟೋವನ್ನು ದಿನನಿತ್ಯ ಬೈಕರ್​ ಪೋಸ್ಟ್​ ಮಾಡುತ್ತಿದ್ದರು. ಆದರೆ, ದೀರ್ಘ ಸಮಯದವರೆಗೂ ಯಾರು ಸಹ ನಿಜ ಸಂಗತಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ, ಫೆಬ್ರವರಿ 11ರಂದು ಪೋಸ್ಟ್​ ಮಾಡಿದ ಫೋಟೋದಲ್ಲಿರುವ ಬೈಕ್​ ಮಿರರ್​​ನಲ್ಲಿರುವುದು ಅವಳ ಚಿತ್ರ ಎಂದು ಭಾವಿಸಲಾಗಿತ್ತು. ಆದರೆ, ನೆಟಿಜನ್‌ಗಳು ಮಧ್ಯವಯಸ್ಕ ವ್ಯಕ್ತಿಯ ಪ್ರತಿಬಿಂಬವನ್ನು ನೋಡಿ ದಂಗಾಗಿದ್ದರು.

    ಇದು ಜಾಲತಾಣದಲ್ಲಿ ಹೆಚ್ಚು ಗಮನ ಸೆಳೆದ ಬಳಿಕ ಆ ವ್ಯಕ್ತಿಯನ್ನು ಜಪಾನ್​ನ ಟಿವಿ ಮಾಧ್ಯಮವೊಂದು ಪತ್ತೆ ಹಚ್ಚಿದೆ. ಈ ವೇಳೆಯೇ ಎಲ್ಲರಿಗೂ ಗೊತ್ತಾಗಿದ್ದು, ಇಸುವರೆಗೂ ಯುವತಿ ವೇಷದಲ್ಲಿ ಇದ್ದಿದ್ದು, ಭುಜದವರೆಗೆ ಕೂದಲು ಬಿಟ್ಟುಕೊಂಡಿರುವ ಮಧ್ಯ ವಯಸ್ಕ ಎಂಬುದು.

    ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಮುಖವನ್ನು ಯುವತಿಯಂತೆ ವಿನ್ಯಾಸ ಮಾಡಿಕೊಂಡು ಈವರೆಗೆ ಅನೇಕರನ್ನು ವಂಚಿಸುತ್ತಿದ್ದುದ್ದು ಕೊನೆಗೂ ಬೆಳಕಿಗೆ ಬಂದಿದೆ. ತನ್ನ ಮುಖವನ್ನು ಫೇಸ್​ಆ್ಯಪ್​ ಮತ್ತು ಫೋಟೋಶಾಪ್​ ಮೂಲಕ ಬದಲಾಯಿಸುತ್ತಿದ್ದ ಎಂಬುದು ತಿಳಿದುಬಂದಿದೆ. (ಏಜೆನ್ಸೀಸ್​)

    ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ. 58 ಮಹಿಳೆಯರು ಈ ವಯಸ್ಸಿನಲ್ಲೇ ಕನ್ಯತ್ವ ಕಳೆದುಕೊಂಡಿರುತ್ತಾರೆ..!

    ಉಪೇಂದ್ರ ಜತೆ ಹರಿಪ್ರಿಯಾ; ‘ಲಗಾಮ್​ಗೂ ಮುನ್ನ ಶಶಾಂಕ್ ಚಿತ್ರದಲ್ಲಿ…

    ಸಿದ್ದರಾಮಯ್ಯ ಅವರಿಗೆ ನಮ್ಮ ಅಭಿಮಾನದ ಬೆಲೆಯೇ ಗೊತ್ತಿಲ್ಲ: ಅಮಾನತು ‘ಉಡುಗೊರೆ’ಗೆ ತನ್ವೀರ್‌ಸೇಠ್ ಕೆಂಡಾಮಂಡಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts