More

    ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ. 58 ಮಹಿಳೆಯರು ಈ ವಯಸ್ಸಿನಲ್ಲೇ ಕನ್ಯತ್ವ ಕಳೆದುಕೊಂಡಿರುತ್ತಾರೆ..!

    ಲೈಂಗಿಕ ಕ್ರಿಯೆಯು ಜೀವನದ ಒಂದು ಭಾಗ. 30 ವರ್ಷದ ನಂತರ ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಿದವರಲ್ಲಿ ನೀವೂ ಇದ್ದರೆ, ನೀವು ತುಂಬಾ ಸಣ್ಣ ಗುಂಪಿನ ಭಾಗವಾಗಿದ್ದೀರಿ ಎಂದರ್ಥ. ಏಕೆಂದರೆ, 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಶೇ. 90 ರಷ್ಟು ಮಂದಿ 30 ವರ್ಷಕ್ಕೂ ಮುಂಚೆಯೇ ಲೈಂಗಿಕತೆಯನ್ನು ಅನುಭವಿಸಿರುತ್ತಾರೆ.

    ವಾಸ್ತವವಾಗಿ ಭಾರತದಲ್ಲಿನ ಜನರು ಇತರ ದೇಶಗಳಿಗೆ ಹೋಲಿಸಿದರೆ ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ಸಂಬಂಧ ಹೊಂದಿದ್ದಾರೆ. 25 ರಿಂದ 49 ವರ್ಷ ವಯಸ್ಸಿನ ಭಾರತೀಯ ಮಹಿಳೆಯರಲ್ಲಿ ಶೇ. 10 ಮಂದಿ 15 ವರ್ಷಕ್ಕಿಂತ ಮೊದಲೇ ಲೈಂಗಿಕ ಸಂಬಂಧ ಹೊಂದಿರುವುದಾಗಿ ಹೇಳಿದ್ದಾರೆ. ಶೇ. 38 ಮಹಿಳೆಯರು 18 ವರ್ಷಕ್ಕೂ ಮುಂಚೆಯೇ ಇದರಲ್ಲಿ ತೊಡಗಿಕೊಂಡಿರುತ್ತಾರೆ.

    ಇದನ್ನೂ ಓದಿರಿ: ನಾನು ಮಗು ತರಹ…; ಚೆನ್ನಾಗಿ ಇಟ್ಕೊಂಡ್ರೆ ಚೆನ್ನಾಗೇ ಇರ್ತೀನಿ..

    ಭಾರತೀಯರ ಅಭಿವೃದ್ಧಿ ಹೊಂದಿದ ಚಿಂತನೆಯ ಪರಿಣಾಮ ಇದು ಎಂದು ಭಾವಿಸಿದರೆ ಅದು ನಿಮ್ಮ ತಪ್ಪು. ವಾಸ್ತವವೆಂದರೆ ಭಾರತದಲ್ಲಿ ಹುಡುಗಿಯರು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಾರೆ. ಹೀಗಾಗಿ ಭಾರತೀಯ ಮಹಿಳೆಯರು ಪುರುಷರಿಗಿಂತ ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ಸಂಬಂಧ ಹೊಂದಿದ್ದಾರೆ.

    ಇನ್ನು ಈ ಅಧ್ಯಯನದಲ್ಲಿ ಜನಸಂಖ್ಯೆ, ಆರೋಗ್ಯ ಮತ್ತು ಪೋಷಣೆಗೆ ಸಂಬಂಧಿಸಿದ ಮಾಹಿತಿಯನ್ನು ದೇಶದಾದ್ಯಂತ ಸಂಗ್ರಹಿಸಲಾಗಿದೆ. ಸಮೀಕ್ಷೆಯ ಉದ್ದೇಶವು ವಾಸ್ತವತೆಯನ್ನು ತೋರಿಸುವುದಾದರೂ, ಅನೇಕ ಜನರು ತಮ್ಮ ಲೈಂಗಿಕ ಕ್ರಿಯೆಯ ಬಗ್ಗೆ ತಪ್ಪು ಮಾಹಿತಿ ನೀಡಿರುವ ಸಾಧ್ಯತೆ ಇದೆ. ಏಕೆಂದರೆ ನಮ್ಮ ದೇಶದಲ್ಲಿ ಇಂದಿಗೂ ಲೈಂಗಿಕತೆಯನ್ನು ಬಹಿರಂಗವಾಗಿ ಮಾತನಾಡುವುದನ್ನು ನಿಷೇಧಿಸಲಾಗಿದೆ.

    ಇದನ್ನೂ ಓದಿರಿ: ಲಕ್ಷುರಿ ಕ್ಯಾರವಾನ್​ ಖರೀದಿಸಿದ ಮಹೇಶ್​ ಬಾಬು: ಟಾಲಿವುಡ್​ನಲ್ಲೇ ದುಬಾರಿ ವ್ಯಾನಿಟಿ ವ್ಯಾನ್​ ಇದು!

    ಸಮೀಕ್ಷೆಯ ಪ್ರಕಾರ 25 ರಿಂದ 49 ವಯಸ್ಸಿನ ಮಹಿಳೆಯರಲ್ಲಿ ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದುವ ವಯಸ್ಸು 19 ವರ್ಷಗಳು, ಆದರೆ, 20ರ ಹೊತ್ತಿಗೆ, ಈ ವಯಸ್ಸಿನ ಶೇ. 58 ಮಹಿಳೆಯರು ಲೈಂಗಿಕತೆಯನ್ನು ಹೊಂದಿದ್ದಾರೆ. ಇದೇ ವೇಳೆ ಅದೇ ವಯಸ್ಸಿನ ಪುರುಷರ ಬಗ್ಗೆ ಹೇಳುವುದಾದರೆ, ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರ ಸರಾಸರಿ ವಯಸ್ಸು 24 ವರ್ಷಗಳು, ಇದು ಮಹಿಳೆಯರಿಗಿಂತ 5 ವರ್ಷಗಳು ಹೆಚ್ಚು. (ಏಜೆನ್ಸೀಸ್​)

    ಕಂದನ ಕಾಪಾಡಿ ಪ್ರಾಣ ಬಿಟ್ಟ ಅಮ್ಮ: ಬೀಳುತ್ತಿರುವ ಮಗುವನ್ನು ಹಿಡಿಯಲು ಹೋಗಿ ತಾಯಿಯ ದಾರುಣ ಸಾವು

    ಬೈಕ್​ ಸವಾರನಿಗೆ ಮಧ್ಯದ ಬೆರಳು ತೋರಿದ ಯುವತಿ: ವೈರಲ್​ ವಿಡಿಯೋ ಹಿಂದಿನ ಅಸಲಿ ಕತೆ ಇಲ್ಲಿದೆ!

    ಬೆಂಗಳೂರಲ್ಲಿ ಸಚಿವರ ಮನೆ ಮುಂದೆ ಸಿಬ್ಬಂದಿ ಮಾರಾಮಾರಿ! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts