More

    ಕುವೆಂಪು ಮನೆ ಮ್ಯೂಸಿಯಂ ಮಾಡಲು ಕುಟುಂಬಸ್ಥರ ಒಪ್ಪಿಗೆ

    ಮೈಸೂರು: ಕುವೆಂಪು ಅವರ ಬಾಳಿ ಬದುಕಿದ್ದ ಮೈಸೂರಿನ ಮನೆಯನ್ನು ಕುಪ್ಪಳಿಯ ಮಾದರಿಯಲ್ಲಿ ವಸ್ತುಸಂಗ್ರಹಾಲಯ ಮಾಡಲು ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಕುವೆಂಪು ಅವರ ಮಗಳು ತಾರಿಣಿ ಹಾಗೂ ಅಳಿಯ ಡಾ. ಚಿದಾನಂದಗೌಡ ತಿಳಿಸಿದ್ದಾರೆ.

    ಮೇರು ಸಾಹಿತಿ ಕುವೆಂಪು ಅವರಿದ್ದ ಮನೆ ಎಂದು ಸಾಕಷ್ಟು ಜನ ಬರುತ್ತಿದ್ದಾರೆ. ಹಾಗಾಗಿ ಈ ಮನೆಯನ್ನು ವಸ್ತುಸಂಗ್ರಹಾಲಯ ಮಾಡಬೇಕು ಎಂದು ಸರ್ಕಾರ ಬಯಸಿತ್ತು. ಕೆಲ ಅಧಿಕಾರಿಗಳು ಬಂದು ನಮ್ಮೊಂದಿಗೆ ಚರ್ಚಿಸಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಆ ಪ್ರಸ್ತಾಪ ಅಲ್ಲಿಗೆ ನಿಂತಿದೆ ಎಂದು ಹೇಳಿದರು.

    ಇದನ್ನೂ ಓದಿ ಅಕ್ಷರ ರೂಪದಲ್ಲಿ ಬರಲಿದೆ ‘ಅಮ್ಮನ ನೆನಪು’: ಕುವೆಂಪು ಪುತ್ರಿ ತಾರಿಣಿ

    ಕುವೆಂಪು ಅವರ ಮನೆಯನ್ನು ಗೂಗಲ್‌ನಲ್ಲಿ ಅಳವಡಿಸಿರುವುದು ಉತ್ತಮ ಕಾರ್ಯವಾಗಿದೆ. ಎಷ್ಟೋ ಜನರು ಕುವೆಂಪುನಗರಕ್ಕೆ ಹೋಗಿ ಕುವೆಂಪು ಮನೆ ಎಲ್ಲಿ ಎಂದು ಹುಡುಕಾಟ ನಡೆಸಿದ ಪ್ರಸಂಗವೂ ಇದೆ. ಈಗ ಗೂಗಲ್‌ನಲ್ಲಿ ಮನೆ ಹುಡುಕಲು ನೆರವಾಗುವ ಕಾರ್ಯ ಮಾಡಿರುವ ಯುವ ಬ್ರಿಗೇಡ್ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

    ಕುಪ್ಪಳಿಯಂತೆ ಇಲ್ಲಿಯೂ ಸಮಿತಿಯೊಂದನ್ನು ರಚಿಸಿ ಅದರಲ್ಲಿ ಕುವೆಂಪು ಕುಟುಂಬದ ಇಬ್ಬರು ಸದಸ್ಯರು ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕು ಎನ್ನುವ ಬೇಡಿಕೆ ಇಡಲಾಗಿದೆ ಎಂದು ಹೇಳಿದರು.

    ಕುಪ್ಪಳಿ ಕುವೆಂಪು ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲಿ ಇಬ್ಬರಿಗೆ ಎರಡು ವರ್ಷ ಜೈಲು, 5 ಸಾವಿರ ರೂ. ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts