More

    ಕುವೆಂಪು ಘೋಷ ವಾಕ್ಯ ಬದಲಾವಣೆ ಖಂಡಿಸಿ ಪ್ರತಿಭಟನೆ

    • ಚಿತ್ರದುರ್ಗ: ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ಎನ್ನುವ ಕುವೆಂಪು ಅವರ ಅರ್ಥಪೂರ್ಣ ಘೋಷ ವಾಕ್ಯವನ್ನು ಬದಲಾಯಿಸಲು ಹೊರಟಿರುವ ರಾಜ್ಯಸರ್ಕಾರದ ನಡೆ ಖಂಡಿಸಿ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ‌್ಯಕರ್ತರು ನಗರದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
      ರಾಜ್ಯದ ಕೆಲವು ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸವಾಗುತ್ತಿದೆ. ಸಮಾಜ ಕ ಲ್ಯಾಣ ಇಲಾಖೆ ಅಧೀನ ಶಾಲೆಗಳಲ್ಲಿ ಸರಸ್ವತಿ, ಗಣೇಶ ಪೂಜೆ ಮತ್ತಿತರ ಧಾರ್ಮಿಕ ಕಾರ‌್ಯಕ್ರಮಗಳನ್ನು ನಿಷೇಧಿಸಿದ್ದ ಸರ್ಕಾರ, ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಆದೇಶ ಹಿಂಪಡೆದಿತ್ತು.
      ಈಗ ಸರ್ಕಾರಿ ವಸತಿ ಶಾಲೆಗಳಲ್ಲಿ ಕುವೆಂಪು ಅವರ ಘೋಷ ವಾಕ್ಯ ಬದಲಾಯಿಸಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಸುತ್ತಿರುವ ಸರ್ಕಾರದ ನಡೆ, ಮಹಾನ್ ದಾರ್ಶನಿಕ ಕುವೆಂಪು ಅವರ ಆಶಯದ ವಿರುದ್ಧವಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
      ಗೋಪಿ, ಆರ್.ಕನಕರಾಜ, ಸುದರ್ಶನ್ ನಾಯ್ಕ, ಚೈತ್ರಾ, ಚಂದನಾ, ಚಿತ್ರಸ್ವಾಮಿ, ಯುವರಾಜ್ ಹೆಗಡೆ, ದಾನೇಶ್, ಸುದೀಪ್, ಮಧು, ತಿಪ್ಪೇಸ್ವಾಮಿ, ಎಚ್.ಕೆ.ಪ್ರವೀಣ್ ಹಾಗೂ ಪರಿಷತ್ ಪ್ರಮುಖರು, ಕಾರ‌್ಯಕರ್ತರು ಇದ್ದರು. (ಸಿಟಿಡಿ 20 ಎಬಿವಿಪಿ)
      ಕುವೆಂಪು ಅವರ ಘೋಷ ವಾಕ್ಯ ಬದಲಾವಣೆಗೆ ಮುಂದಾಗಿರುವ ಸರ್ಕಾರದ ನಡೆ ಖಂಡಿಸಿ ಚಿತ್ರದುರ್ಗದಲ್ಲಿ ಮಂಗಳವಾರ ಎಬಿವಿಪಿ ಕಾರ‌್ಯಕರ್ತರು ಪ್ರತಿಭಟಿಸಿ, ಶಿರಸ್ತೇದಾರ್ ಎಲ್.ವನಜಾಕ್ಷಿ ಅವರಿಗೆ ಮನವಿ ಸಲ್ಲಿಸಿದರು. ಎಚ್.ಕೆ.ಪ್ರವೀಣ್, ಚಿತ್ರಸ್ವಾಮಿ, ಯುವರಾಜ್ ಹೆಗಡೆ, ದಾನೇಶ್, ಸುದೀಪ್, ಮಧು, ತಿಪ್ಪೇಸ್ವಾಮಿ, ಚೈತ್ರಾ, ಚಂದನಾ ಇತರರು ಇದ್ದರು.

    ಪೋಟೊ ಶೀರ್ಷಿಕೆ ಮಾತ್ರ(ಸಿಟಿಡಿ 20 ಕೆಕೆಎನ್‌ಎಸ್)
    ರಾಜ್ಯದ ಕೊಳೆಗೇರಿ ನಿವಾಸಿಗಳಿಗೆ ಪ್ರತ್ಯೇಕ ಅನುದಾನ ಮೀಸಲಿಡುವಂತೆ ಒತ್ತಾಯಿಸಿ ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಸದಸ್ಯರು ಚಿತ್ರದುರ್ಗದ ಡಿಸಿ ಕಚೇರಿ ಬಳಿಕ ಮಂಗಳವಾರ ಪ್ರತಿಭಟಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಲೀಲಾವತಿ, ಶಬೀನಾ, ಸರೋಜಮ್ಮ, ಚಂದ್ರಮ್ಮ, ರಂಗಸ್ವಾಮಿ ಇತರರು ಪ್ರತಿಭಟನೆಯಲ್ಲಿ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts