More

    ಎಸಿಬಿ ಬಲೆಗೆ ನಕಲಿ ಬಿಬಿಎಂಪಿ ಟ್ಯಾಕ್ಸ್ ಇನ್ಸ್​ಪೆಕ್ಟರ್ !

    ಬೆಂಗಳೂರು: ಬಿಬಿಎಂಪಿ ತೆರಿಗೆ ಅಧಿಕಾರಿ ಎಂದು ಸುಳ್ಳು ಹೇಳಿ ಲಂಚ ಪಡೆಯುತ್ತಿದ್ದವನನ್ನು ಎಸಿಬಿ ಬಂಧಿಸಿದೆ. ಚಂದ್ರು ಎಂಬಾತ ಬಂಧಿತ ನಕಲಿ ಅಧಿಕಾರಿ.

    ಎಚ್​ಎಎಲ್​ ಬಿಬಿಎಂಪಿ ಕಚೇರಿಯಲ್ಲಿ ಫ್ಲಾಟ್​ ಖಾತೆ ಬದಲಾವಣೆಗೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಅಲ್ಲೇ ಇದ್ದ ಚಂದ್ರು ತಾನೇ ಟ್ಯಾಕ್ಸ್​​ ಇನ್ಸ್​ಪೆಕ್ಟರ್​, 22 ಸಾವಿರ ರೂ. ಲಂಚ ನೀಡಿದರೆ ಮಾತ್ರ ಕೆಲಸ ಮಾಡಿಸಿಕೊಡುವುದಾಗಿ ಹೇಳಿದ್ದ. ಈತನನ್ನು ಸರ್ಕಾರಿ ಅಧಿಕಾರಿ ಎಂದು ನಂಬಿ ವ್ಯಕ್ತಿಯು ಎಸಿಬಿಗೆ ದೂರು ನೀಡಿದ್ದರು.

    ಈ ಹಿನ್ನಲೆ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಈತನನ್ನು ಬಂಧಿಸಿದ ವೇಳೆ ಸತ್ಯ ಬಯಲಾಗಿದೆ. ಈತ ಬಿಬಿಎಂಪಿ ಅಧಿಕಾರಿ ಅಲ್ಲ ಎನ್ನುವುದು ಪತ್ತೆಯಾಗಿದ್ದು, ಇದಕ್ಕೆ ಬಿಬಿಎಂಪಿ ಅಧಿಕಾರಿಗಳೇ ಸಾಥ್ ನೀಡಿರುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

    ನಟ ದಿಲೀಪ್​​ ಮನವಿ ತಿರಸ್ಕರಿಸಿದ ಕೇರಳ ಹೈಕೋರ್ಟ್​

    ಗಂಡು ಮಗುವಿಗೆ ತಾಯಿಯಾದ ಕಾಜಲ್​ ಅಗರ್​ವಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts