More

    VIDEO | ನಕಲಿ ರೆಮ್​ಡೆಸಿವಿರ್ ತಯಾರಿಸುತ್ತಿದ್ದ ಫ್ಯಾಕ್ಟರಿ! 2000 ಜನರನ್ನು ವಂಚಿಸಿರುವ ಖದೀಮರು !

    ಡೆಹ್ರಾಡೂನ್​/ನವದೆಹಲಿ : ಕರೊನಾ ಉಲ್ಬಣದ ಈ ಸಮಯದಲ್ಲಿ ಆಕ್ಸಿಜನ್ ನಂತರದಲ್ಲಿ ಅತಿಹೆಚ್ಚು ಬೇಡಿಕೆ ಇರುವ ವಸ್ತುವೆಂದರೆ ರೆಮ್​ಡೆಸಿವಿರ್ ಆ್ಯಂಟಿವೈರಲ್ ಚುಚ್ಚುಮದ್ದು. ಗಂಭೀರ ಸ್ಥಿತಿಯಲ್ಲಿರುವ ಕರೊನಾ ರೋಗಿಗಳಲ್ಲಿ ವೈರಲ್ ಲೋಡ್ ಇಳಿಸಲು ಉಪಯೋಗಿಸುವ ಈ ಮದ್ದು ದುರ್ಲಭವಾಗಿದೆ. ಜೊತೆಗೇ ಕಳ್ಳ ಮಾರುಕಟ್ಟೆಯಲ್ಲಿ ಎಷ್ಟೋ ಪಟ್ಟು ಹೆಚ್ಚು ಹಣಕ್ಕೆ ಮಾರಾಟವಾಗುತ್ತಿದೆ.

    ಇದೀಗ ನಕಲಿ ರೆಮ್​ಡೆಸಿವಿರ್ ತಯಾರಿಸಿ ಮಾರಾಟ ಮಾಡುವ ದಂಧೆಯೂ ಆರಂಭವಾಗಿದೆ ಎನ್ನಲಾಗಿದೆ. ದೆಹಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ನಕಲಿ ರೆಮ್​ಡೆಸಿವಿರ್​ಅನ್ನು ವ್ಯಾಕುಲರಾದ ರೋಗಿಗಳ ಸಂಬಂಧಿಗಳಿಗೆ ಮಾರಿ ದುಡ್ಡು ಮಾಡಿಕೊಳ್ಳುತ್ತಿರುವ ಖದೀಮರು ಹೆಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ದುಡ್ಡಿಗಾಗಿ ನಕಲಿ ಔಷಧಿ ಮಾರುತ್ತಿರುವವರ ಬಗ್ಗೆ ಎಚ್ಚರದಿಂದಿರಲು ಜನರಿಗೆ ಮನವಿ ಮಾಡಿದ್ದಾರೆ.

    ಈ ನಿಟ್ಟಿನಲ್ಲಿ ಬಂದ ಉಪಯುಕ್ತ ಮಾಹಿತಿಯನ್ನನುಸರಿಸಿ ದೆಹಲಿ ಪೊಲೀಸರು ಉತ್ತರಾಖಂಡದ ಕೋತ್​ದ್ವಾರದಲ್ಲಿ ನಕಲಿ ರೆಮ್​ಡೆಸಿವಿರ್ (COVIPRI) ಇಂಜೆಕ್ಷನ್​​ಗಳನ್ನು ತಯಾರಿಸುತ್ತಿದ್ದ ‘ಫಾರ್ಮಸಿಟಿಕಲ್​’ ಘಟಕವೊಂದನ್ನು ಪತ್ತೆ ಹಚ್ಚಿದ್ದಾರೆ. ದೊಡ್ಡ ಪ್ರಮಾಣದಲ್ಲಿ ನಕಲಿ ಇಂಜೆಕ್ಷನ್​ಗಳನ್ನು ಉತ್ಪಾದಿಸಿ ಒಂದು ವಯಲ್​ಗೆ 25,000 ರೂ. ಬೆಲೆ ಪಡೆದು ಮಾರುತ್ತಿದ್ದ 5 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್​ ಕಮಿಷನರ್ ಎಸ್​.ಎನ್​.ಶ್ರೀವಾಸ್ತವ ಹೇಳಿದ್ದಾರೆ.

    ಈ ಕಾರ್ಯಾಚರಣೆ ವೇಳೆ, ಮಾರಾಟಕ್ಕೆ ಸಿದ್ಧವಿದ್ದ 196 ನಕಲಿ ರೆಮ್​ಡೆಸಿವಿರ್ ಇಂಜೆಕ್ಷನ್​ಗಳನ್ನು ಜಪ್ತಿಗೊಳಿಸಲಾಗಿದೆ. ನಕಲಿ ಔಷಧವನ್ನು ಪ್ಯಾಕ್​ ಮಾಡಲು ಇಟ್ಟುಕೊಂಡಿದ್ದ ಪ್ಯಾಕಿಂಗ್​ ಮೆಷಿನ್​ಗಳು, 3000 ಖಾಲಿ ವಯಲ್​ಗಳನ್ನು ದೆಹಲಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳ ವಿಚಾರಣೆ ಮಾಡಿದಾಗ ಅದಾಗಲೇ 2,000 ನಕಲಿ ಇಂಜೆಕ್ಷನ್​ಗಳನ್ನು ಔಷಧಿ ಪಡೆಯಲು ವ್ಯಾಕುಲರಾದ ಜನರಿಗೆ ಮಾರಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಕರೊನಾ ರೋಗಿಗಳಿಗೆ ‘ಅಶ್ವತ್ಥ ಮರದ ಕೆಳಗೆ ಕುಳಿತುಕೊಳ್ಳಿ’ ಎಂದ ಪೊಲೀಸ್ !

    ಕರೊನಾಗೆ ಬಲಿಯಾದರು ಮತ್ತೊಬ್ಬ ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts